ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಸಮಾವೇಶ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬೆಳಗಾವಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ 01 ಜಿಲ್ಲೆ. ನವಜೀವನ ಸಮಿತಿ ಯಳ್ಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಸಮಾವೇಶ ವನ್ನು ಯಳ್ಳೂರು ಗ್ರಾಮದ ಸೈನಿಕ ಭವನ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗಾವಿ ಜಿಲ್ಲಾ ಜನ ಜಾಗೃತಿ ವೇದಿಕ ಸ್ಥಾಪಕ ಅಧ್ಯಕ್ಷಾದ ರಾಜು ದೊಡ್ಡನವರ ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು ದಿವ್ಯ ಸಾನಿಧ್ಯವನ್ನ ಬಸು ಸ್ವಾಮಿ ಮಹಾರಾಜರು ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಪೊಲೀಸ್ ಇಲಾಖೆಯ ACP ಶ್ರೀ ಶರಣಪ್ಪ ರವರು ಗಾಂಧೀ ವಿಚಾರದಾರೆಗಳ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ ಪಾಟೀಲ ವಹಿಸಿದ್ದರು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ದುದ್ದಪ್ಪ ಬಾಗೇವಾಡಿ, ಯಳ್ಳೂರು ಮಧ್ಯವರ್ಜನ ಶಿಭಿರದ ಅಧ್ಯಕ್ಷರಾದ ತಾನಾಜೀ ಹಲಗೇಕರ ರವರು ನವಜೀವನ ಸಮಿತಿ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು, ತಾಲೂಕಿನ ಯೋಜನಾಧಿಕಾರಿ ನಾಗರಾಜ ಹದ್ಲಿ ರವರು ಕಾರ್ಯಕ್ರಮವನ್ನುದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು. ಮೇಲ್ವೀಚಾರಕಿ ಗಂಗಾ ಸ್ವಾಗತಿಸಿದರು, ವೈಶಾಲಿ ಕಾರ್ಯಕ್ರಮ ನಿರೂಪಿಸಿದರು, ಜೆ.ವಿ.ಕೆ ಸುರೇಖಾ ವಂದಿಸಿ ಕಾರ್ಯಕ್ರಮದ ನಿರ್ವಹಣೆ AFS ಸತೀಶ ನಿರ್ವಹಿಸಿದರು.