ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಂಗಳೂರು ಪ್ರಾದೇಶಿಕ ವಿಭಾಗದ ಜಿಲ್ಲಾ ಅಧ್ಯಕ್ಷರುಗಳ ಸಭೆ ಇಂದು ನೆಲಮಂಗಲದಲ್ಲಿ ನಡೆಸಲಾಯಿತು. ವೇದಿಕೆಯ ಕ್ರಿಯಾಯೋಜನೆ ಮುಂದಿನ ಕಾರ್ಯಕ್ರಮಗಳ ಕುರಿತು ಮುಖ್ಯವಾಗಿ ನವಜೀವನ ಸಮಿತಿ ಪುನಶ್ಚೇತನ, ಪಾನಮುಕ್ತರ ಆನ್ ಲೈನ್ ಮೀಟಿಂಗ್ , ಪಾನಮುಕ್ತ ಗ್ರಾಮಗಳು, ಪಾನಮುಕ್ತರ ಸ್ವಸಹಾಯ ಸಂಘ, ಪಾನಮುಕ್ತರಿಗೆ ಸ್ವ ಉದ್ಯೋಗ ತರಬೇತಿ ಮುಂತಾದ ವಿಚಾರಗಳ ಕುರಿತಂತೆ ಸಮಗ್ರ ಚರ್ಚೆ ನಡೆಸಲಾಯಿತು. ರಾಜ್ಯಾಧ್ಯಕ್ಷರಾದ ವಿ. ರಾಮಸ್ವಾಮಿ ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು ನಿರ್ದೇಶಕರುಗಳು ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಎಂ ಉಪಸ್ಥಿತರಿದ್ದರು.
