ಶ್ರೀರಂಗಪಟ್ಟಣ :. ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ100 ಗಿಡ ನಾಟಿ

Janajagurthi Vedike News

ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಈ ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪೂರ್ಣ ಸಹಕಾರ ಅರಣ್ಯ ಇಲಾಖೆ ನೀಡಲಿದೆ ಎಂದು ಶ್ರೀರಂಗಪಟ್ಟಣ ಅರಣ್ಯ ವಲಯಾಧಿಕಾರಿ ಶ್ರೀಮತಿ ಸುನೀತಾ ತಿಳಿಸಿದರು. ತಾಲೂಕಿನ ಕರಿಘಟ್ಟ ಪ್ರದೇಶ ದಲ್ಲಿ ಅರಣ್ಯ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪರಿಸರಪ್ರೇಮಿ ರಮೇಶ್ ರವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು . ಈ ಸಂದರ್ಭದಲ್ಲಿ ಯೋಜನೆಯ ಕೆಆರ್ ನಗರ ಜಿಲ್ಲಾ ನಿರ್ದೇಶಕರಾದ ಎಚ್ಎಲ್ ಮುರಳಿಧರ್ ಕರಿಘಟ್ಟದಲ್ಲಿ ಮೂಢನಂಬಿಕೆಯಿಂದ ಗಿಡಗಳಿಗೆ ಬೆಂಕಿ ಹಚ್ಚುವ ಪದ್ಧತಿ ರೂಢಿಯಲ್ಲಿದ್ದು ಇದಕ್ಕೆ ಕಡಿವಾಣ ಹಾಕಿ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ,ಈ ನೆಲೆಯಲ್ಲಿ ರಾಜ್ಯಾದ್ಯಂತ ಯೋಜನೆಯ ವತಿಯಿಂದ ಆಗಸ್ಟ್ ಅಂತ್ಯದವರೆಗೆ ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೋರೇಗೌಡ ವಹಿಸಿ ಶುಭಹಾರೈಸಿದರು. ಈ ಸಂದರ್ಭ 100 ಗಿಡಗಳನ್ನು ನಾಟಿ ಮಾಡಿ ಅವುಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಸಾಗಿಸಿ ಉಣಿಸುವ ಕೆಲಸವನ್ನು ಮಾಡಲಾಯಿತು ಈ ಸಂದರ್ಭ ಯೋಜನಾಧಿಕಾರಿ ಶ್ರೀಮತಿ ಸಾವಿತ್ರಿ, ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ,ಗ್ರಾಮ ಪಂಚಾಯಿತಿ ಸದಸ್ಯರುಗಳು, ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕ, ಸೇವಾ ಪ್ರತಿನಿಧಿಗಳು, ಯೋಜನೆಯ ಸಂಘದ ಸದಸ್ಯರು ಉಪಸ್ಥಿತರಿದ್ದರು.