Achievements

ಸಾಧನೆಗಳು:

  • 2, 64,610 ಮನೆಭೇಟಿ ಕಾರ್ಯಕ್ರಮಗಳ ಮೂಲಕ ಪಾನಮುಕ್ತರ ಮೌಲ್ಯ ಮಾಪನ, ನವಜೀವನ ಸದಸ್ಯರ ಯೋಗಕ್ಷೇಮ ವಿಚಾರಣೆ ನಡೆಸಲಾಗಿದೆ.
  • 3,100 ನವಜೀವನ ಸಮಿತಿಗಳನ್ನು ರಚಿಸಲಾಗಿದೆ ಮತ್ತು  1,496 ಮಂದಿಗೆ ಪೋಷಕರಿಗೆ ತರಭೇತಿ ನೀಡಲಾಗಿದೆ. 
  • ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಮೂಲಕ ಮದ್ಯಮಾರಾಟ, ಸಮಾಜ ಬಾಹಿರ ಚಟುವಟಿಕೆಗಳು, ಸರಕಾರದ ಮದ್ಯದಂಗಡಿ ಕೊಡುವ ವಿಚಾರದಂತೆ ಹಕ್ಕೊತ್ತಾಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗಾವಿಯ ಸುವರ್ಣ ಸೌಧ ಆವರಣದಲ್ಲಿ ಬೃಹತ್ ಹಕ್ಕೊತ್ತಾಯ ಸಭೆಯನ್ನು ನಡೆಸಿ ಸರಕಾರದ ಮದ್ಯದಂಗಡಿ ನೀಡುವ ಉದ್ದೇಶವನ್ನು ಕೈಬಿಡುವಂತೆ ಒತ್ತಾಯಿಸಲಾಗಿದೆ.
  • ಗಾಂಧಿ ಜಯಂತಿ ಸಂಭ್ರಮವನ್ನು 139 ಕಡೆಯಲ್ಲಿ ನಡೆಸಿ ಪಾನಮುಕ್ತರಿಗೆ ಅಭಿನಂದಿಸಲಾಗಿದೆ.
  • ಶಾಲಾ ಕಾಲೇಜುಗಳಲ್ಲಿ 2,075 ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮಗಳನ್ನು ನಡೆಸಿ 1,87,447 ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ.
  • ಮೇ 31 ರಂದು 544 ತಂಬಾಕು ವಿರೋಧಿ  ದಿನಾಚರಣೆ ಮತ್ತು ಜೂನ್ 26 ರಂದು 486 ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ನಡೆಸಿ ಯುವಜನರಲ್ಲಿ ಜಾಗೃತಿ ಮೂಡಿಸಲಾಗಿದೆ.
  • ಪೂಜ್ಯ ಧರ್ಮಾಧಿಕಾರಿಗಳು ಜೂನ್ 11, 2016 ರಂದು ರೂ.4.00 ಕೋಟಿ ವೆಚ್ಚದಲ್ಲಿ ಜಾಗೃತಿ ಸೌಧ ಕಟ್ಟಡವನ್ನು ಜನಜಾಗೃತಿ ವೇದಿಕೆಯ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನಾಗಿ ಮುನ್ನಡೆಸಲು ಉದ್ಘಾಟನೆ ಮಾಡಿರುತ್ತಾರೆ.
  • ವರದಿ ವರ್ಷದಲ್ಲಿ  120 ಮದ್ಯವರ್ಜನ ಶಿಬಿರಗಳನ್ನು ಸಮುದಾಯದಲ್ಲಿ ನಡೆಸಿ 7,477  ಜನರಿಗೆ ಚಿಕಿತ್ಸೆ ನೀಡಲಾಗಿದೆ. 23 ವಿಶೇಷ ಮದ್ಯವರ್ಜನ ಶಿಬಿರಗಳನ್ನು 1,504 ಜನರಿಗೆ ಚಿಕಿತ್ಸೆ ನೀಡಲಾಗಿದೆ.
  • ಇದುವರೆಗೆ ಒಟ್ಟು 1791 ಮದ್ಯವರ್ಜನ ಶಿಬಿರಗಳ ಮೂಲಕ 1,22,374 ಜನರಿಗೆ ಮದ್ಯವರ್ಜನೆಯ ಚಿಕಿತ್ಸೆ ನೀಡಲಾಗಿದೆ.
  • ಸಿ.ಆರ್.ಇ.ಯಲ್ಲಿ ನಡೆದ ಸಫಾಯಿ ಕಾರ್ಮಿಕರ ಆಯೋಗದ ಸಹಯೋಗದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ 52 ಮಂದಿಗೆ ಮದ್ಯವರ್ಜನೆಯ ಚಿಕಿತ್ಸೆ ನೀಡಲಾಗಿದೆ.
  • ಉಜಿರೆಯಿಂದ ಧರ್ಮಸ್ಥಳದ ಲಕ್ಷದೀಪೋತ್ಸವ ಪಾದಯಾತ್ರೆಯಲ್ಲಿ ನವಜೀವನ ಸದಸ್ಯರು ಮತ್ತು ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಗರಿಷ್ಟ ಸಂಖ್ಯೆಯಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ.
  • 51 ಶತದಿನೋತ್ಸವ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಆಯೋಜಿಸಿ ಪೂಜ್ಯರ ಮಾರ್ಗದರ್ಶನ ಮತ್ತು ಸ್ವಾಮಿಯ ದರ್ಶನ ಪಾನಮುಕ್ತರಿಗೆ ಲಭಿಸುವಂತಾಗಲು ಪ್ರಯತ್ನಿಸಲಾಗಿದೆ.
  • ದುಶ್ಚಟಗಳ ವಿರುದ್ದ ಜಾಗೃತಿ ಮೂಡಿಸುವ ಕಿರುಚಿತ್ರಗಳನ್ನು 3,485 ಕಡೆಗಳಲ್ಲಿ ಪ್ರದರ್ಶಿಸಿ ಜನತೆಗೆ ಸಂದೇಶ ನೀಡಲಾಗಿದೆ.
  • ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿಯ ನ್ಯಾಮತಿ ಕಲ್ಯಾಣ ಮಂಟಪದಲ್ಲಿ ನವಜೀವನ ಸದಸ್ಯರು ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಾದರಿ ಎನಿಸಿಕೊಂಡಿರುತ್ತಾರೆ.
  • ನವಜೀವನ ಸದಸ್ಯರ ಮೂಲಕ ಧಾರ್ಮಿಕ ಶ್ರದ್ದಾ ಕೇಂದ್ರಗಳಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ.
  • ಕೃಷಿ ಉತ್ಸವ ಮತ್ತು ಕೃಷಿ ಮೇಳದಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ ಮೂಲಕ ವ್ಯಸನಮುಕ್ತ ಸಂದೇಶ ನೀಡಲಾಗಿದೆ.
  • ಆಯುಷ್ ಟಿ.ವಿ. ಯ ಮೂಲಕ ಜನಜಾಗೃತಿ ವೇದಿಕೆಯ ಕಾರ್ಯಕ್ರಮವನ್ನು ಪ್ರದರ್ಶಿಸಲು ಪೂರಕವಾದ ಶೂಟಿಂಗ್ ಕಾರ್ಯ ನಡೆಸಲಾಗಿದೆ.
  • ಸಪ್ಟೆಂಬರ್ 24 ರಿಂದ ಅಕ್ಟೋಬರ್ 1 ರವರೆಗೆ 1000 ನೇ ಮದ್ಯವರ್ಜನ ಶಿಬಿರವನ್ನು 10 ಕಡೆಗಳಲ್ಲಿ ಆಯೋಜಿಸಿ 1412 ಶಿಬಿರಾರ್ಥಿಗಳನ್ನು ಚಿಕಿತ್ಸೆಗೊಳಪಡಿಸಿ, ಇವರೆಲ್ಲರನ್ನೂ ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ಸಮಾವೇಶಗೊಳಿಸಿ ಸಾವಿರ ಶಿಬಿರಗಳು ಸಹಸ್ರಾರು ಮದ್ಯವರ್ಜಿತರ ಸಮಾವೇಶ ಕಾರ್ಯಕ್ರಮದಲ್ಲಿ ಒಟ್ಟು ಸೇರಿಸಿ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಪಾನಮುಕ್ತರು ಸಾಮಾಜಿಕ ಸಂಬಂಧವನ್ನು ಬಲಪಡಿಸಿ ಆತ್ಮವಿಶ್ವಾಸದಿಂದ ಬದುಕಲು ಪ್ರೇರಣೆ ನೀಡಲಾಗಿದೆ.
  • 2017-18ರ ಮದ್ಯವರ್ಜನ ಶಿಬಿರಗಳಿಗೆ ಮದ್ಯಪಾನ ಸಂಯಮ ಮಂಡಳಿಯಿಂದ ರೂ.15.00 ಲಕ್ಷ ದೇಣಿಗೆ ನೀಡಿರುತ್ತಾರೆ.
  • ಸಂಯಮ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ವೇದಿಕೆಯ ಪದಾಧಿಕಾರಿಗಳು ಭೇಟಿ ನೀಡಿ ಸಹಯೋಗದೊಂದಿಗೆ ಕೆಲಸ ಮಾಡುವ ಕುರಿತಾಗಿ ಚರ್ಚೆ ಮಾಡಲಾಗಿದೆ.
  • ವರದಿ ವರ್ಷದಲ್ಲಿ 1 ರಾಜ್ಯವೇದಿಕೆ ಸಭೆ , 125 ಜಿಲ್ಲಾ ವೇದಿಕೆ ಸಭೆ, 43 ತಾಲೂಕು ವೇದಿಕೆ ಸಭೆ,  240 ಶಿಬಿರ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಲಾಗಿದೆ.
  • ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಅಪರಾಧ ತಡೆಗಟ್ಟುವಿಕೆ ಮಾಸಾಚರಣೆಯ ಪ್ರಯುಕ್ತ ವೇದಿಕೆಯ ಕಿರುಚಿತ್ರಗಳನ್ನು ಪಡೆದು ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿರುತ್ತಾರೆ.
  • ಬೀದಿ ನಾಟಕ ಜನಜಾಗೃತಿ ಸಪ್ತಾಹವನ್ನು ಏರ್ಪಡಿಸಿ 20 ಕಡೆಗಳಲ್ಲಿ ‘ಹೆಣಗೂರು’ ಎಂಬ ಶೀರ್ಷಿಕೆಯ ಪ್ರಹಸನವನ್ನು ಪ್ರದರ್ಶಿಸಿ ಸಾವಿರಾರು ಜನರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
  • ಸರಕಾರದ ವತಿಯಿಂದ ಹೊನ್ನಾಳ್ಳಿಯಲ್ಲಿ ನಡೆದ ಲಂಬಾಣಿ ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಮಂದಿಗೆ ಜನಜಾಗೃತಿ ವೇದಿಕೆಯಿಂದ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
  • ಕೃಷಿಮೇಳ, ಕೃಷಿ ಉತ್ಸವ, ಲಕ್ಷದೀಪೋತ್ಸವ, ಧರ್ಮಸ್ಥಳ ಪದಗ್ರಹಣ, ಸಾವಿರನೇ ಶಿಬಿರ ಕಾರ್ಯಕ್ರಮದಲ್ಲಿ ಜನಜಾಗೃತಿ ಮಳಿಗೆಯ ಮೂಲಕ ವಿಚಾರಣೆಗೆ ಬಂದ ಜನರಿಗೆ ಉಪಯುಕ್ತ ಮಾಹಿತಿ ನೀಡಲಾಗಿದೆ.
  • ವೇದಿಕೆಯ ಸಹಾಯವಾಣಿ, ಲೋಗೋ ಬಿಡುಗಡೆಗೊಳಿಸಲಾಗಿದೆ ಹಾಗೂ ಜಾಲಾ ತಾಣಗಳಲ್ಲಿ ವೇದಿಕೆಯ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿಯನ್ನು ನೀಡಲಾಗುತ್ತಿದೆ.
  • ವೇದಿಕೆಯ ಸಹಯೋಗದಲ್ಲಿ ವನ್‍ಟೈಮ್ ಕ್ರೀಯೇಷನ್ಸ್ ರವರು ‘ಬಾರಲ್ಲೊಂದಿನ’ ಕಿರುಚಿತ್ರವನ್ನು ಪೂಜ್ಯರ ಮೂಲಕ ಬಿಡುಗಡೆಗೊಳಿಸಿ ಜಾಲತಾಣಗಳಲ್ಲಿ ಪ್ರಕಟಿಸಿರುತ್ತಾರೆ. ಇದುವರೆಗೆ 8000ಕ್ಕೂ ಮಿಕ್ಕಿದ ಜನರು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
  • ರಜತ ಸಂಭ್ರಮ, ಸಹಸ್ರ ಮದ್ಯವರ್ಜನ ಶಿಬಿರ ಸಾವಿರಾರು ಮದ್ಯಮುಕ್ತರು ಎಂಬ ಸ್ಮರಣ ಸಂಚಿಕೆಗಳು, ಪರಿವರ್ತನೆ ಎಂಬ ಧ್ವನಿಸುರುಳಿ ಬಿಡುಗಡೆಯಾಗಿರುತ್ತದೆ.
  • ಸುಳ್ಯದ ಉಬರಡ್ಕ ನವಜೀವನ ಸಮಿತಿಯ ಒಂದೇ ಗ್ರಾಮದ 175 ನವಜೀವನ ಸದಸ್ಯರು ಅದ್ದೂರಿಯ ದಶಮಾನೋತ್ಸವ ಕಾರ್ಯಕ್ರಮವನ್ನು ಗ್ರಾಮಸ್ಥರೊಂದಿಗೆ ಏರ್ಪಡಿಸಿರುತ್ತಾರೆ. ಈ ಗ್ರಾಮವು ಪಾನಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಶ್ರಮಿಸುತ್ತಿದ್ದಾರೆ. ಸಮಿತಿಯ ಸದಸ್ಯರು ವೇದಿಕೆಗೆ ರೂ.10,000/- ದೇಣಿಗೆ ನೀಡಿರುತ್ತಾರೆ.
  • ರಾಜ್ಯದಲ್ಲಿ ಒಟ್ಟು ರೂ.13,65,954/- ಮೊತ್ತವನ್ನು ಕಷ್ಟ-ಕಾರ್ಪಣ್ಯದಲ್ಲಿರುವ ನವಜೀವನ ಸದಸ್ಯರಿಗೆ  ಮತ್ತು ಅವರ ಕುಟುಂಬದವರಿಗೆ ವಿತರಿಸಿ ಸಹಕರಿಸಲಾಗಿದೆ.
  • ಭಜನಾ ಕಮ್ಮಟದಲ್ಲಿ ಭಾಗವಹಿಸಿದ್ದ ಭಜಕರಿಗೆ ಜನಜಾಗೃತಿ ಮಾಹಿತಿಯನ್ನು ನೀಡಲಾಗಿದೆ.
  • ವೇದಿಕೆಯ ಮೂಲಕ ಘೊಷವಾಕ್ಯ ಸ್ಪರ್ಧೆಯನ್ನು ಏರ್ಪಡಿಸಿ 333 ಘೋಷವಾಕ್ಯಗಳನ್ನು ಪಡೆದು ಆಯ್ದ 10 ಘೋಷವಾಕ್ಯಗಳಿಗೆ ಬಹುಮಾನವನ್ನು ನೀಡಲಾಗಿದೆ.
  • ರಾಜ್ಯಾದ್ಯಂತ ಇದುವರೆಗೆ 27 ಸ್ವ- ಉದ್ಯೋಗ ತರಬೇತಿಗಳ ಮೂಲಕ 761 ನವಜೀವನ ಸಮಿತಿ ಸದಸ್ಯರಿಗೆ ಪ್ರೇರಣೆ ನೀಡಲಾಗಿದೆ.
  • ಸಾಧಕ ನವಜೀವನ ಸದಸ್ಯರಿಗೆ 53 ಜಾಗೃತಿ ಅಣ್ಣ ಹಾಗೂ 133 ಜಾಗೃತಿ ಮಿತ್ರ ಪ್ರಶಸ್ತಿಗಳನ್ನು ಪೂಜ್ಯ ಖಾವಂದರ ಮೂಲಕ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
  • ನವಜೀವನ ಸಮಿತಿ ಸದಸ್ಯರಿಗೆ ವಾರದ ಏಳು ದಿನಗಳಲ್ಲಿ ಫ್ರೀ ಕಾನ್ಫ್ ರೆನ್ಸ್ ಕಾಲ್ ಸಭೆಗಳನ್ನು ಆಯೋಜಿಸಿ ಪ್ರೇರಣೆ ನೀಡಲಾಗುತ್ತಿದೆ.
  • ಪಾನಮುಕ್ತರಾದ ನವಜೀವನ ಸದಸ್ಯರಿಗೆ ಗುರುತುಚೀಟಿ ವಿತರಿಸಲಾಗುತ್ತಿದೆ.