ಪೂಜ್ಯ ಖಾವಂದರ ಆಶಯದಂತೆ ಜಾಗೃತಿ ಸೌಧದಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ .

Janajagurthi Vedike News

ದಿನಾಂಕ ೦೫.೦೫.೨೦೨೧: ಉಜಿರೆಯ ಜಾಗೃತಿ ಸೌಧ ದಲ್ಲಿ ಕೋವಿಡ್-19 ನಿಯಂತ್ರಿಸಲು 200 ಹಾಸಿಗೆಗಳ ವಿಶೇಷ ಕೋವಿಡ ಕೇರ್ ಸೆಂಟರ್ ಪ್ರಾರಂಭಿಸಲು ಪೂಜ್ಯ ಖಾವಂದರು ಒಪ್ಪಿಗೆ ನೀಡಿದ ಪ್ರಕಾರ ಇಂದು ಬೆಳಿಗ್ಗೆ10:45 ಗಂಟೆಗೆ ಸೆಂಟರ್ ಪ್ರಾರಂಭಗೊಂಡಿತು.ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್ ಪೂಂಜಾ, ಸಂಸದರಾದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧಿಕಾರಿಗಳಾದ ಡಾ .ರಾಜೇಂದ್ರ ಎಸಿ, ಡಾ. ಸತೀಶ್ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕುಮಾರ್, ತಹಶೀಲ್ದಾರ್ ರಾದ ಮಹೇಶ್, ಡಿ.ಹೆಚ್.ಓ ಡಾ. ಕಿಶೋರ್ ಟಿ.ಎಚ್.ಓ ಡಾ. ಕಲಾಮಧು, ಎಸ್ ಡಿಎಂ ಆಸ್ಪತ್ರೆಯ ನಿರ್ದೇಶಕರಾದ ಶ್ರೀ ಜನಾರ್ಧನ್, ಎಸ್ ಡಿ ಎಂ ಟ್ರಸ್ಟ್ ನ ಕಾರ್ಯದರ್ಶಿ ಶಿಶುಪಾಲ, ಮೆಡಿಕಲ್ ಸುಪರಿಟೆಂಡೆಂಟ್ ಡಾ ರಂಜನ್ , ವೈದ್ಯ ಅಧಿಕಾರಿಗಳಾದ ಡಾ ವಿದ್ಯಾವತಿ, ಡಾ ತಾರಕೇಸರಿ, ಜಿಲ್ಲಾ ಎಸ್ ಪಿ ಯವರು ಮಾನ್ಯ ಹೃಷಿಕೇಶ್ ಹಾಜರಿದ್ದರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳು ,ಸಿಬ್ಬಂದಿಗಳು, ಪದಾಧಿಕಾರಿಗಳು , ವಿಪತ್ತು ನಿರ್ವಹಣಾ ಸ್ವಯಂಸೇವಕರು, ಆರೋಗ್ಯ ಕಾರ್ಯಕರ್ತರು ಹಾಜರಿದ್ದರು.