ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದಿಂದ ಶಾಲಾ ಮೈದಾನದಲ್ಲಿ ಗಿಡ ನಾಟಿ ಕಾರ್ಯಕ್ರಮ

Janajagurthi Vedike Uncategorized

ಬೆಳ್ತಂಗಡಿ, ಆಗಸ್ಟ್ 19: ಶ್ರೀ ಧರ್ಮಸ್ಥಳ ಸೇವಾ ನಡ ಗ್ರಾಮದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಿಂದ ಹಿರಿಯ ಪ್ರಾಥಮಿಕ ಶಾಲೆ ಮಂಜೊಟ್ಟಿಯಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಜಿತ್ ಆರಿಗ ಅವರು ದೀಪ ಬೆಳಗಿಸುವ ಹಾಗೂ ಶಾಲೆಯ ಮುಖ್ಯ ಶಿಕ್ಷಕರಿಗೆ ಗಿಡ ವಿತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿ ಶ್ರೀ  ಧರ್ಮಸ್ಥಳ  ಸೇವಾ ವಿಪತ್ತು ನಿರ್ವಹಣಾ ಘಟಕ ಬೆಳ್ತಂಗಡಿ ತಾಲೂಕಿನಲ್ಲಿ ಬಹಳ  ಉತ್ತಮ ಸೇವಾಕಾರ್ಯವನ್ನು ನಡೆಸುತ್ತಿದೆ. ಕಿಂಡಿ ಅಣೆಕಟ್ಟು ಸ್ವಚ್ಛತೆಯಂತಹ ಕಾರ್ಯ ನಡೆಸಿ ಸಂಭವನೀಯ ಅನೇಕ ಅನಾಹುತಗಳನ್ನು ತಪ್ಪಿಸಿದೆ. ಮನೆ ಹಾನಿಗೆ ಒಳಗಾದವರಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಗ್ರಾಮದಲ್ಲಿ ವಿಪತ್ತು ನಿರ್ವಹಣೆ ಸ್ವಯಂಸೇವಕರು ಮಾಡಿರುತ್ತಾರೆ. ಸ್ವಯಂಪ್ರೇರಣೆಯಿಂದ ಸಮುದಾಯದ ಹಿತಚಿಂತನೆಯಲ್ಲಿ ತೊಡಗಿರುವ ವಿಪತ್ತು ನಿರ್ವಹಣೆ ತಂಡದ  ಸೇವಾಕಾರ್ಯ ಮಾದರಿಯಾಗಿದೆ ಎಂದರು.

 ನಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ  ಮೈದಾನದ ಸುತ್ತ ಮುತ್ತ ಸುಮಾರು ಮೂವತ್ತು ವಿವಿಧ ಬಗೆಯ ಗಿಡಗಳನ್ನು ನಾಟಿ  ಮಾಡಲಾಯಿತು.  ನಾಟಿಗೆ ಅಗತ್ಯವಿರುವ ಗಿಡಗಳನ್ನು ಜನಜಾಗೃತಿ ವೇದಿಕೆಯ ತಾಲೂಕು ಸದಸ್ಯರಾದ ತನಿಯಪ್ಪ ಗೌಡ ಅವರು  ನೀಡಿರುತ್ತಾರೆ.

ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಜೈವಂತ್  ಪಟಗಾರ, ಜನಜಾಗೃತಿ ತಾಲೂಕು ಸಮಿತಿ ಸದಸ್ಯರಾದ ತನಿಯಪ್ಪ ಗೌಡ, ಕನ್ಯಾಡಿ ವಿಭಾಗದ ಸ್ವಚ್ಛತಾ ಸೇನಾನಿ ಪವನ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ್ ಗೌಡ, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿಯಾದ ಶ್ರೀಮತಿ ಅಶ್ವಿನಿ,  ಮೇಲ್ವಿಚಾರಕರಾದ ಶ್ರೀಮತಿ ಅಶ್ವಿತಾ, ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಪುಷ್ಪ, ಅಧ್ಯಾಪಕಿಯಾದ ಶ್ರೀಮತಿ ಸುಜಾತ, ಸೇವಾಪ್ರತಿನಿಧಿ ಶಕುಂತಲಾ, ವಿಪತ್ತು ನಿರ್ವಹಣೆ ಘಟಕದ ಸಂಯೋಜಕಿ ವಸಂತಿ ಗಿಡನಾಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಡ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಮಂಜುನಾಥ್, ಕಾರ್ತಿಕ್, ಜೀವನ್ ಡಿಸೋಜಾ, ಮೋಹನ್, ಅನಿಲ್ ಡಿಸೋಜಾ,  ಒಲಿವಿನ್ ಡಿಸೋಜಾ, ಹರ್ಷದ್, ಜಯರಾಮ, ಉಮೇಶ್, ಸಂದೇಶ್ ಹಾಗೂ ಪುಷ್ಪಲತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೆ ಕಾರಣರಾದರು.