ಧಾರವಾಡ ಇದರ 2026- 27 ನೇ ಸಾಲಿನ ಪ್ರಥಮ ಮಾಸಿಕ ಸಭೆ

Janajagurthi Vedike Uncategorized

ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ ) ಸಭೆ ಪ್ರಥಮ ತ್ರೈಮಾಸಿಕ ಸಭೆ ಇಂದು ಧಾರವಾಡ ಜಿಲ್ಲಾ ಕಚೇರಿಯಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ರಿಜಿಸ್ಟರ್ ಧಾರವಾಡ ಇದರ 2026- 27 ನೇ ಸಾಲಿನ ಪ್ರಥಮ ಮಾಸಿಕ ಸಭೆ ನಡೆಯಿತು. ಸಭೆಯನ್ನು ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ಮೇಡಂ & ಜಿಲ್ಲಾಧ್ಯಕ್ಷರಾದ ವಸಂತ ಅರ್ಕಾಚಾರಿ ಹಾಗೂ ಜಿಲ್ಲಾ ನಿರ್ದೇಶಕರು ಮತ್ತು ಪದಾಧಿಕಾರಿಗಳು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು ಪ್ರಾದೇಶಿಕ ನಿರ್ದೇಶಕರಾದ ಸುಮತಿ ದಯಶೀಲ ಮೇಡಂ ರವರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆ ಕಾರ್ಯಕ್ರಮ ಅನುಷ್ಠಾನದಲ್ಲಿ ಪ್ರಥಮ ಸ್ಥಾನದಲ್ಲಿ ಇರುವುದನ್ನು ತಿಳಿಸಿ ಪ್ರಶಂಶಿಸಿದರು. ಮತ್ತು 2026- 27 ನೇ ಸಾಲಿನಲ್ಲಿ ಇನ್ನು ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಂತೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಸಂತ್ ಅರ್ಕಾಚಾರ ರವರು ವಹಿಸಿದ್ದರು. ಈ ಸಂದರ್ಭ ಸಮಾಜಮುಖಿ ಕೆಲಸದಲ್ಲಿ ಗುರುತಿಸಿಕೊಂಡಿರುವ ಮತ್ತು ಪ್ರಶಸ್ತಿಗೆ ಭಾಜನರಾಗಿರುವ ಮಹಾವೀರ್ ಉಪಾಧ್ಯಾಯ, ರಮೇಶ್ ಮಾದೇವಪ್ಪನವರ್, ಸವಿತಾ ಅಮರ್ ಶೆಟ್ಟಿ ಇವರನ್ನು ವೇದಿಕೆ ವತಿಯಿಂದ ಗೌರವಿಸಲಾಯಿತು. ಮಾರುತಿ ಸೇಟ್ ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಲಾಯಿತು. ಸಭೆಯಲ್ಲಿ 2026 -27 ನೇ ಸಾಲಿನಲ್ಲಿ ಅನುಷ್ಠಾನ ಮಾಡುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಹನುಮಂತ ನಾಯಕ ರವರು ಜನಜಾಗೃತಿ ಕಾರ್ಯಕ್ರಮದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು, ಜಿಲ್ಲೆಗೆ ಹೊಸದಾಗಿ ಬಂದ ಯೋಜನಾಧಿಕಾರಿಗಳನ್ನು ಪರಿಚಯಿಸಲಾಯಿತು ಮತ್ತು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು, ಜನಜಾಗೃತಿ ಕಾರ್ಯಕ್ರಮಗಳ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ಜಲಜಾಗೃತಿ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಅನುದಾನ, ಮಧ್ಯವರ್ಜನ ಶಿಬಿರಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು , ಉಪಾಧ್ಯಕ್ಷರಾದ ದೇಮನಿ ಸಿರೋಜಿ ಮತ್ತು ಜಿಲ್ಲಾಧ್ಯ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರು, ಎಲ್ಲ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಕ್ಷೇತ್ರ ಯೋಜನಾಧಿಕಾರಿಗಳಾದ ಸೋಮಲಿಂಗ ಸ್ವಾಗತಿಸಿದರು. ಲೀಲಾ ಮೂರ್ತಿ ಚೌಟರ್, ವಂದಿಸಿದರು. ಜಿಲ್ಲಾ ಆಡಿಟ್ ಪ್ರಬಂಧ ಗಣೇಶ್ ಸಹಕರಿಸಿದರು.