ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆಯ ಟ್ರಸ್ಟ್ ರಿಜಿಸ್ಟರ್ ನ ಪ್ರಥಮ ಸಭೆ ಇಂದು ಯೋಜ ನೆಯ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ ಹುಲ್ಲತ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿಂದಿನ ಸಭೆಯ ವರದಿ ಮಂಡನೆಯನ್ನು ಜಿಲ್ಲಾ ಕಾರ್ಯದರ್ಶಿ ಶಿವರಾಯ ಪ್ರಭು ರವರು ಮಂಡಿಸಿದರು.ಕಳೆದ ವರ್ಷದ ಜನಜಾಗೃತಿಯ ಜಿಲ್ಲಾ ಮಟ್ಟದ ಸಾಧನೆ ಹಾಗೂ ವರದಿ ವರ್ಷದ ಗುರಿ ಗಳ ಬಗ್ಗೆ ವಿಶೇಷ ರೀತಿಯ ಚರ್ಚೆ ನಡೆಯಿತು.ಮದ್ಯ ವರ್ಜನ ಶಿಬಿರಗಳ ಆಯೋಜನೆ.ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಧೂಮಪಾನ ವಿರೋಧಿ ದಿನಾಚರಣೆ & ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಕಾರ್ಯಕ್ರಮಗಳ ಬಗ್ಗೆ.ನವಜೀವನೋತ್ಸವ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ.ಜಿಲ್ಲಾ ಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮ ಬಗ್ಗೆ.ನವಜೀವನ ಸಮಿತಿಗಳ ಸಭೆಯ ಬಗ್ಗೆ ನವಜೀವನ ಸದಸ್ಯರ ಸಂಘ ಸೇರ್ಪಡೆ ಬಗ್ಗೆ.ಸ್ವಉದ್ಯೋಗ ತರಬೇತಿ ಮತ್ತು ಐ ಎಸ್ ಬಿ ತಂಡದ ಆಗಮನದ ಬಗ್ಗೆ ಹಕ್ಕೋತ್ತಾಯ & ಪತ್ರಿಕಾಗೋಷ್ಠಿಯ ಬಗ್ಗೆ.ಪ್ರತಿ ತಾಲೂಕಿನಲ್ಲಿ ತಾಲೂಕು ಸದಸ್ಯರು ಮತ್ತು ಯೋಜನಾಧಿಕಾರಿಗಳು ಸಭೆ ನಡೆಸಿ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಚರ್ಚಿಸುವ ಕುರಿತು ಪೋಷಕರ ಮತ್ತು ಸ್ವಾಸ್ಥ ಸಂಕಲ್ಪ ಸಂಪನ್ಮೂಲ ವ್ಯಕ್ತಿಗಳ ತರಬೇತಿದಾರರ ತರಬೇತಿ ನಡೆಸುವ ಬಗ್ಗೆ.ನಿರಂತರ ಗೈರು ಹಾಜರಾತಿಯ ಸದಸ್ಯರನ್ನು ಕೈಬಿಡುವಂತೆ ಮತ್ತು ಹೊಸ ಸದಸ್ಯರ ಸೇರ್ಪಡೆಯನ್ನು ತಕ್ಷಣ ನಡೆಸುವಂತೆ.
ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಯ ಪ್ರಭು ಅವರು ಸಭೆಯಲ್ಲಿ ಪೂರಕ ಸಲಹೆ ಮತ್ತು ಮಾರ್ಗದರ್ಶನ ನೀಡಿದರು, ಈ ಸಂದರ್ಭ ಗೌರವಾನ್ವಿತ ಜನಜಾಗೃತಿ ವೇದಿಕೆಯ ಸದಸ್ಯರು ಆರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಂಡರು.ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಏನ್ ರವರು ಜನಜಾಗೃತಿ ಕಾರ್ಯಕ್ರಮದ ಅನುಷ್ಠಾನಕ್ಕೆ ಪೂರಕವಾಗಿರುವ ಸುತ್ತೋಲೆ 85 ಮತ್ತು ಕ್ರಿಯಾ ಯೋಜನೆಯ ಅನುದಾನಗಳ ಬಗ್ಗೆ, ಸದಸ್ಯರಿಗಿರುವ ಆರೋಗ್ಯ ಭದ್ರತೆಯ ವಿಮೆಯ ಬಗ್ಗೆ, ಪೂಜ್ಯರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್ ಎಸ್ ರವರು ಜನಜಾಗೃತಿ ಸದಸ್ಯರು ಹಾಗೂ ಕಾರ್ಯಕ್ರಮದ ಬಗ್ಗೆ ಇಟ್ಟಿರುವ ಕಾಳಜಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.ಸಭೆಗೆ ಆಗಮಿಸಿದ ಸರ್ವರನ್ನು ರಾಣೆಬೆನ್ನೂರು ಒಂದು ತಾಲೂಕಿನ ಯೋಜನಾಧಿಕಾರಿ ಮಂಜುನಾಥ್ ಸ್ವಾಗತಿಸಿ mis ಯೋಜನಾಧಿಕಾರಿ ತೀರ್ಥ ಪ್ರಸಾದ್ ವಂದಿಸಿದರು. ಜಿಲ್ಲೆಯ ಗೌರವಾನ್ವಿತ ಸದಸ್ಯರು, ಕ್ಷೇತ್ರ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.ಜಿಲ್ಲಾ ಆಡಿಟ್ ಪ್ರಬಂಧ ಪ್ರದೀಪ್ ರವರು ಸಹಕರಿಸಿದರು.
