ಸಪ್ತ ವ್ಯಸನಗಳಲ್ಲಿ ಮದ್ಯಪಾನ ಮೊದಲ ಮೆಟ್ಟಿಲು ಇದನ್ನು ಜಾರಿದರೆ ಉಳಿದೆಲ್ಲವೂ ಜಾರಿದಂತೆ – ಪೂಜ್ಯರ ನುಡಿ
ಕತ್ತಲೆಯಿಂದ ಬೆಳಕಿನೆಡೆಗೆ. . ಅಸತ್ಯದಿಂದ ಸತ್ಯದೆಡೆಗೆ.. ಕರೆದೊಯ್ಯುವಂತೆ ಮಾಡುವ ಕಾರ್ಯಕ್ರಮ ನವ ಜೀವನೋತ್ಸವ
ಕಿತ್ತೂರು ತಾಲೂಕು ಸಂಗೊಳ್ಳಿ ವಲಯದಲ್ಲಿ ನಡೆದ ಜಿಲ್ಲಾ ಜನ ಜಾಗೃತಿ ವೇದಿಕೆ ಬೆಳಗಾಂ ಜಿಲ್ಲೆ ಕಿತ್ತೂರು ತಾಲ್ಲೂಕು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕು ಮಟ್ಟದ ನವಜೀವನೋತ್ಸವ ಕಾರ್ಯಕ್ರಮವನ್ನ ದೀಪ ಬೆಳಗಿಸುವ ಮೂಲಕ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ,ಪ್ರಾದೇಶಿಕ ನಿರ್ದೇಶಕರು ಜನ ಜಾಗ್ರತಿ ಪ್ರಾದೇಶಿಕ ವಿಭಾಗ ಧರ್ಮಸ್ಥಳ ಇವರು ನೆರವೇರಿಸಿದರು… ನಂತರ ಮಾತಾಡಿದ ಇವರು ಮದ್ಯದ ಚಟಕ್ಕೆ ಬಲಿಯಾದ ಜನರನ್ನು ಮದ್ಯಮುಕ್ತರನ್ನಾಗಿ ಮಾಡುವ ಪೂಜ್ಯರ ಅತ್ಯಂತ ಪ್ರೀತಿಯ ಕಾರ್ಯಕ್ರಮ ಮದ್ಯವರ್ಜನ ಶಿಬಿರ, ಇಂದು ಕಿತ್ತೂರು ತಾಲೂಕಿನಲ್ಲಿ ಸುಮಾರು 210 ಜನ ನವಜೀವನ ಸಮಿತಿ ಸದಸ್ಯರು ಪಾನ ಮುಕ್ತ ಬದುಕನ್ನು ನಡೆಸುತ್ತಿದ್ದು , ಬದುಕಿನಲ್ಲಿ ಮಂಜುನಾಥನ ಕೃಪೆಯಿಂದ ಉತ್ತಮ ರೀತಿಯ ಹೊಸ ಬದುಕು ನಡೆಸುತ್ತಿದ್ದು ನಿಮ್ಮ ಬದುಕು ಬಂಗಾರವಾಗಲಿ ಎಂದು ಶುಭ ಹಾರೈಸಿದರು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ..ಶ್ರೀ ಬಸವರಾಜ ಕೊಡ್ಲಿ ಸಂಗೊಳ್ಳಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ವಹಿಸಿದ್ದರು , ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳು ಇಡೀ ದೇಶಕ್ಕೆ ಮಾದರಿ ಎಂದು ಹೇಳಿ ಶುಭ ಹಾರೈಸಿದರು ಮುಖ್ಯ ಅಥಿತಿಗಳಾಗಿ ಶ್ರೀ ಸತೀಶ ನಾಯ್ಕ ಸರ್ ಜಿಲ್ಲಾ ನಿರ್ದೇಶಕರು ಬೆಳಗಾವಿ , ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಶ್ರೀಮತಿ ರಾಧಾಶ್ಯಾಮ ಕಾದ್ರೊಳ್ಳಿ ಮತ್ತು ಶ್ರೀಮತಿ ಉಮಾದೆವಿ ಬಿಕ್ಕಣ್ಣನವರ್ , ಸಂದರ್ಭಕ್ಕೆ ಪೂರಕವಾಗಿ ಶುಭ ಹಾರೈಸಿದರು. ಪ್ರಾದೇಶಿಕ ಕಚೇರಿಯ ಜನ ಜಾಗ್ರತಿ ಯೋಜನಾಧಿಕಾರಿ ಭಾಸ್ಕರ್ .. ತಾಲೂಕ ಯೋಜನಾಧಿಕಾರಿ ಯೋಗೀಶ್ B R ಕಾರ್ಯಕ್ರಮಕ್ಕೆ ಮುಂಚಿತವಾಗಿ ಮಂಜುನಾಥ ಸ್ವಾಮಿಯ ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು. ವಲಯದ ಮೇಲ್ವಿಚಾರಕರಾದ್ ಗಂಗಪ್ಪ kb. ವಂದನಾ ಸೇವಾಪ್ರತಿನಿಧಿಗಳು ನವಜಿವನ ಸಮಿತಿ ಸದಸ್ಯರು ಗ್ರಾಮ ಗಣ್ಯರು ಸಂಘದ ಸದಸ್ಯರ ಉಪಸ್ಥಿತರಿದ್ದರು,. ನವ ಜೀವನ ಸಮಿತಿ ಯ ಎಲ್ಲಾ ಸದಸ್ಯರನ್ನು ಈ ಸಮಾರಂಭದಲ್ಲಿ ಮಾನ್ಯ ಪ್ರಾದೇಶಿಕ ನಿರ್ದೇಶಕರ ಮೂಲಕ ಗೌರವಿಸಲಾಯಿತುನವಜೀವನೋತ್ಸವ ಕಾರ್ಯಕ್ರಮದಲ್ಲಿ ಗಮನಸೆಲೆದ ಕಣ್ಣಿನ ಪರೀಕ್ಷೆ ನವ ಜೀವನ ಸದಸ್ಯರ ಮತ್ತು ಅವರ ಮನೆಯವರ ಕಣ್ಣಿನ ಪರೀಕ್ಷೆಯನ್ನು ನಡೆಸಿ ದೃಷ್ಟಿ ದೋಷದ ಬಗ್ಗೆ ಮನವರಿಕೆ ಮಾಡಿ ಚಿಕಿತ್ಸೆ ಮತ್ತು ಕನ್ನಡಕ್ಕದ ವ್ಯವಸ್ಥೆಯ ತಿಳಿಸಲಾಯಿತು. ಈ ಕಾರ್ಯಕ್ರಮವು ನವಜೀವನ ಸದಸ್ಯರಲ್ಲಿ ಮತ್ತು ಅವರ ಮನೆಯವರಲ್ಲಿ ಕಾರ್ಯಕ್ರಮದ ಸಂಘಟನೆಯ ಬಗ್ಗೆ ಮತ್ತು ಇಂತಹ ಕಾರ್ಯಕ್ರಮ ಆಯೋಜಿಸಿದ ಪ್ರಶಂಸೆ ವ್ಯರ್ಥವಾಯಿತು.
