ಶಿರಸಿ: ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಶಿರಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಶಿರಸಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಶಿರಸಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಶಿರಸಿ , ನವಜೀವನ ಸಮಿತಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಶಿರಸಿ ತಾಲೂಕು, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಅಂಗವಾಗಿ ಜರುಗುವ 2032ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ ಕರ್ಜಗಿ ಕಲ್ಯಾಣ ಮಂಟಪದಲ್ಲಿ ನಡೆಯಿತು.ಕುಟುಂಬ ದಿನ ಕಾರ್ಯಕ್ರಮವನ್ನು ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ ಪಾಯಸ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮದ್ಯ ವ್ಯಸನಿಗಳು ತನ್ನ ಕುಟುಂಬದಲ್ಲಿ ಯಾವ ರೀತಿಯ ತೊಂದರೆ ನೀಡುತ್ತಾನೆ ಎಂದು ಮನಮುಟ್ಟುವಂತೆ ಮಾಹಿತಿ ನೀಡಿ, ಸಮಾಜದಲ್ಲಿ ಗೌರವ ಸಿಗಬೇಕಾದರೆ ನಾವು ಒಳ್ಳೆಯವರಾಗಿ ಬದುಕಬೇಕು. ಶಿಬಿರಕ್ಕೆ ಯಾವ ಮನಸ್ಥಿತಿ ಬಂದಿದ್ದಾರೆ ಅನ್ನುವುದು ಮುಖ್ಯವಲ್ಲ ಇಲ್ಲಿಂದ ಹೇಗೆ ಬದಲಾವಣೆ ಆಗುತ್ತೀರಿ ಎನ್ನುವುದು ಮುಖ್ಯ, ದುಶ್ಚಟಗಳಿಂದ ದೂರ ಇದ್ದು ಮನಸ್ಥಿತಿ ಬದಲಾಯಿಸಿದರೆ ಮನೆಸ್ಥಿತಿ ಕೂಡ ಬದಲಾಗುತ್ತದೆ ಎಂದರು.2032ನೇ ಮದ್ಯವರ್ಜನ ಶಿಬಿರದಲ್ಲಿ 98 ಜನ ಶಿಬಿರಾರ್ಥಿಗಳು ಮನ ಪರಿವರ್ತನೆಗೊಂಡು ನವಜೀವನಕ್ಕೆ ಕಾಲಿಟ್ಟರುವೇದಿಕೆಯಲ್ಲಿ ಶ್ರೀ ಉಪೇಂದ್ರ ಪೈ, ಗೌರವಾಧ್ಯಕ್ಷರು 2032ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ. ಶ್ರೀ ದಿನೇಶ್ M ಜಿಲ್ಲಾ ನಿರ್ದೇಶಕರು.ಶ್ರೀ ಅರುಣ್ ನಾಗೇಶ್ ಶೆಟ್ಟಿ ಅಧ್ಯಕ್ಷರು 2032ನೇ ಮದ್ಯವರ್ಜನ ವ್ಯವಸ್ಥಾಪನ ಸಮಿತಿ.ಶ್ರೀ ಉದಯ್ ಶೆಟ್ಟಿ ಅಧ್ಯಕ್ಷರು ನವಜೀವನ ಸಮಿತಿ ಶಿರಸಿ ತಾಲೂಕು.
ಶ್ರೀ ರಾಘವೇಂದ್ರ ಯೋಜನಾಧಿಕಾರಿ ಶಿರಸಿ ತಾಲೂಕು , ಶ್ರೀ ಗಣೇಶ್ ಆಚಾರ್ಯ ಜನಜಾಗೃತಿ ಯೋಜನಾಧಿಕಾರಿ ಹಾಗೂ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಶೌರ್ಯ ಸ್ವಯಂ ಸೇವಕರು ಉಪಸ್ಥಿತರಿದ್ದರು.
