ದುಶ್ಚಟಮುಕ್ತ ಸ್ವಸ್ಥ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮವೇ ಜನಜಾಗೃತಿ ವೇದಿಕೆ. 1992ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭವಾದ ಈ ಆಂದೋಲನದಲ್ಲಿ ಸಮಾಜದ ಸಮಾನಮನಸ್ಕರು ‘ಜನಜಾಗೃತಿ ವೇದಿಕೆ’ ಎಂಬ ಸಂಘಟನೆಯ ಮೂಲಕ ಮದ್ಯಪಾನಾದಿ ದುಶ್ಚಟಗಳು, ಜೂಜು, ಕಳ್ಳಭಟ್ಟಿ ದಂಧೆ ಮುಂತಾದ ಸಮಾಜಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಹಾಗೂ ವ್ಯಸನಿಗಳ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದೆ. ಅಂದಿನ ವೇದಿಕೆಯ ಹೋರಾಟವು 1996ರಂದು ಬೆಳ್ತಂಗಡಿ ತಾಲೂಕಿನಲ್ಲಿ ಪಾನನಿಶೇಧ ಜ್ಯಾರಿಯಾಗುವಂತೆ ಮಾಡಿತ್ತು. ಸಮಾಜದಲ್ಲಿ ಜನರಿಗೆ ಜಾಗೃತಿ ಮತ್ತು ವ್ಯಸನಿಗಳ ಮನಪರಿವರ್ತನೆಯ ವಿಚಾರದಲ್ಲಿ ಈ ಪಾನ ನಿಶೇಧದ ಸಾಧಕ ಬಾಧಕಗಳನ್ನು ಅರ್ಥಮಾಡಿಕೊಂಡು ಪೂಜ್ಯರ ಮಾರ್ಗದರ್ಶನದಲ್ಲಿ ಮನಪರಿವರ್ತನೆಯ ಕಾರ್ಯವೇ ವ್ಯಸನಮುಕ್ತ ಸಮಾಜ ನಿರ್ಮಾಣದ ಮುಖ್ಯ ಸಾಧನವೆಂದು ಸೂಚಿಸಿದ ಪೂಜ್ಯರು 1998ರಲ್ಲಿ ಮದ್ಯವರ್ಜನ ಶಿಬಿರಗಳನ್ನು ಸಮುದಾಯದಲ್ಲಿ ಮಾಡಲು ಪ್ರೇರಣೆ ನೀಡಿ ಮಂಗಳೂರಿನ ‘ಪ್ರಜ್ಞಾ’ ಮತ್ತು ‘ಲಿಂಕ್’ ವ್ಯಸನಮುಕ್ತಿ ಕೇಂದ್ರಗಳ ಮೂಲಕ ಈ ಶಿಬಿರಗಳನ್ನು ಪ್ರಪ್ರಥಮವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಲಾಯಿತು. ಇದು ಮನೋರೋಗ ನಿಯಂತ್ರಣ ವ್ಯವಸ್ಥೆಯಲ್ಲಿಯೇ ಒಂದು ದೊಡ್ಡ ಹೆಜ್ಜೆ ಎಂದು ತಿಳಿದ ಭಾರತೀಯ ಮನೋವೈದ್ಯಕೀಯ ಸೊಸೈಟಿಯು ಇದರ ಕರ್ನಾಟಕ ಶಾಖಾ ವತಿಯಿಂದ 2000ನೇ ಇಸವಿಯಲ್ಲಿ ಪೂಜ್ಯರಿಗೆ ‘ಸ್ಪಂದನಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದರು. ಹೀಗೆ ವೇದಿಕೆಯ ಮೂಲಕ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮಗಳು, ಹಕ್ಕೊತ್ತಾಯ ಮತ್ತು ಹೋರಾಟ, ಸಮುದಾಯ ಮದ್ಯವರ್ಜನ ಶಿಬಿರ, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ, ಮನೆಭೇಟಿ, ಬೀದಿ ನಾಟಕ, ಸಾಕ್ಷö್ಯಚಿತ್ರ, ಕರಪತ್ರ, ಸ್ಟಿಕ್ಕರ್ ಆಂದೋಲನ, ವರ್ಣಜಾಗೃತಿ, ಪತ್ರ ಜಾಗೃತಿ, ಘೋಷವಾಕ್ಯ ಮತ್ತು ವಿವಿಧ ಸ್ಪರ್ಧೆಗಳು, ಪುಸ್ತಕ ಬಿಡುಗಡೆ, ಮನೆಭೇಟಿ ಕಾರ್ಯಕ್ರಮ, ಕಿರುಚಿತ್ರ ಪ್ರದರ್ಶನ, ಗಾಂಧಿಸ್ಮೃತಿ ಕಾರ್ಯಕ್ರಮ, ನವಜೀವನ ಸಮಿತಿಗಳು, ಟೆಲಿಕೌನ್ಸಲಿಂಗ್, ಟೆಲಿ ಮೆಡಿಸಿನ್, ನವಜೀವನ ಸದಸ್ಯರಿಗೆ ಪ್ರೇರಣಾ ಕಾರ್ಯಕ್ರಮಗಳು, ಜಾಗೃತಿ ಅಣ್ಣ-ಮಿತ್ರ ಪ್ರಶಸ್ತಿ, ಫ್ರೀ ಕಾನ್ಫರೆನ್ಸ್ ಕಾಲ್ ಸಭೆಗಳು, ಪತ್ರಿಕಾ ಪ್ರಕಟಣೆಗಳು, ವಿವಿಧ ಸಂಘಟನೆಗಳೊAದಿಗೆ ಕಾರ್ಯಕ್ರಮಗಳು, ಕಾರ್ಯಾಗಾರಗಳು., ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ವೇದಿಕೆಯ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮತ್ತು ಪರಿವರ್ತನೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದೆ.
ಇದೀಗ ಈ ಸಂಘಟನೆಯು ರಾಜ್ಯಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ್ದು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಎಂಬ ನೊಂದಾಯಿತ ಸಂಸ್ಥೆಯಾಗಿ ಮಾರ್ಪಟ್ಟಿದೆ. ಈ ಸಂಸ್ಥೆಯ ಕಾರ್ಯಕ್ರಮದ ಅನುಷ್ಠಾನವನ್ನು ಸಮಾಜದ ಜನರ ಭಾಗವಹಿಸುವಿಕೆ ಮತ್ತು ಸಹಭಾಗಿತ್ವದೊಂದಿಗೆ ನಡೆಸಲು ರಾಜ್ಯದಲ್ಲಿ 1 ರಾಜ್ಯವೇದಿಕೆ, 37 ಜಿಲ್ಲಾ ವೇದಿಕೆ, 16 ತಾಲೂಕು ವೇದಿಕೆ, 112 ವಲಯ ವೇದಿಕೆಗಳ ಮೂಲಕ 1467 ಪದಾಧಿಕಾರಿಗಳು, 10 ಸಾವಿರಕÀÆ್ಕ ಮಿಕ್ಕಿದ ಸ್ವಯಂಸೇವಕರು ಯಾವುದೇ ತಾರತಮ್ಯವಿಲ್ಲದೆ ಈ ಆಂದೋಲನದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ನ ಅಧೀನದಲ್ಲಿರುವ ಬೆಳ್ತಂಗಡಿ ತಾಲೂಕಿನ ಉಜಿರೆಯ, ಲಾÊಲದಲ್ಲಿರುವ ಜಾಗೃತಿ ಸೌಧ ಎಂಬ ಕಟ್ಟಡವನ್ನು ಸಂಪೂರ್ಣವಾಗಿ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ’ವನ್ನಾಗಿ ಪೂಜ್ಯರು ಪರಿವರ್ತಿಸಿ ಇಂದು ಪ್ರತೀ ತಿಂಗಳಲ್ಲಿ 2 ಬಾರಿ ವಿಶೇಷ ಶಿಬಿರಗಳನ್ನು ಈ ಸಂಸ್ಥೆಯ ಮೂಲಕ ನಡೆಸಲಾಗುತ್ತಿದೆ. ಈ ಶಿಬಿರಗಳಿಗೆ ರಾಜ್ಯಾದ್ಯಂತ ಆಸಕ್ತರು ಹೆಸರು ನೊಂದಾಯಿಸಿ ಪ್ರೇರಣೆಯಿಂದಲೇ ದಾಖಲಾಗುತ್ತಿದ್ದಾರೆ. ಪೂಜ್ಯರು ಈ ಶಿಬಿರಗಳಿಗೆ ಖುದ್ದಾಗಿ ಭೇಟಿ ನೀಡಿ ಆಶೀರ್ವದಿಸುತ್ತಿರುವುದು ಈ ಶಿಬಿರಗಳ ವಿಶೇಷ ಆಕರ್ಷಣೆಯಾಗಿದೆ. ಸಮುದಾಯದಲ್ಲಿರುವ ಮದ್ಯವರ್ಜನ ಶಿಬಿರಗಳನ್ನೂ ಸಹಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದ ವಿಸ್ತರಣಾ ಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ. ಈ ಶಿಬಿರಗಳ ಆಯೋಜನೆಯಲ್ಲಿ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆಯ ಮನೋವೈದ್ಯಕೀಯ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆಯ ಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ. ಸಮುದಾಯ ಮತ್ತು ವಿಶೇಷ ಮದ್ಯವರ್ಜನ ಶಿಬಿರಗಳ ಮೂಲಕ ದಾಖಲಾದ ಶಿಬಿರಾರ್ಥಿಗಳ ಅಂಕಿ ಅಂಶವನ್ನು ಪಡೆದು……10 ಪ್ರಕಟಣೆಗಳು, 13 ಸಂಶೋಧನಾ ಪ್ರಬಂಧಗಳು, 2 ಮಂದಿಗೆ ಡಾಕ್ಟರೇಟ್ ಲಭಿಸಿದೆ. ವೇದಿಕೆಯ ಕಾರ್ಯಚಟುವಟಿಕೆಗಳಿಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಜನಜಾಗೃತಿ ವೇದಿಕೆಯೊಂದಿಗೆ ಕಳೆದ 25 ವರ್ಷಗಳಿಂದ ಸಂಸ್ಥೆಯ ಸಹಯೋಗ, ಸಹಕಾರವನ್ನು ನೀಡುತ್ತಿದ್ದಾರೆ. ಮಂಡಳಿಯು 2000ನೇ ಇಸವಿಯಲ್ಲಿ ಮಂಡಳಿಯ ವತಿಯಿಂದ ಪ್ರಪ್ರಥಮ ಬಾರಿಗೆ ಘೋಷಿಸಲ್ಪಟ್ಟ ‘ಸ್ಪಂದನ ಪ್ರಶಸ್ತಿ’ಯು ಪರಮಪೂಜ್ಯರ ಜನಜಾಗೃತಿ ವೇದಿಕೆಗೆ ಲಭಿಸಿರುವುದು ಸರಕಾರದ ದೊಡ್ಡ ಮನ್ನಣೆಯಾಗಿದೆ. ಪ್ರಸ್ತುತ 2000ನೇ ಮದ್ಯವರ್ಜನ ಶಿಬಿರದ ಐತಿಹಾಸಿಕ ಕ್ಷಣ. 1998ರಲ್ಲಿ ಬೆಳ್ತಂಗಡಿ ತಾಲೂಕಿನ ಕುಲಾಲ ಮಂದಿರದಲ್ಲಿ ಆರಂಭಗೊAಡ ಈ ಶಿಬಿರದ ಕಾರ್ಯಕ್ರಮಗಳು ಇಂದು 1987 ಶಿಬಿರಗಳನ್ನು ನಡೆಸಿ 1.33 ಲಕ್ಷಕ್ಕೂ ಮಿಕ್ಕಿದ ಜನರಿಗೆ ವ್ಯಸನ ಮುಕ್ತರಾಗಲು ಚಿಕಿತ್ಸೆ, ಸಲಹೆ ನೀಡಿದೆ. ದ್ವಿಸಹಸ್ರ ಮದ್ಯವರ್ಜನ ಶಿಬಿರದ ಸಹಸ್ರಾರು ಮದ್ಯವರ್ಜಿತರ ಸಮಾವೇಶ: ಈ ಎಲ್ಲಾ ಮದ್ಯವರ್ಜಿತರನ್ನು ಮತ್ತು ಅವರ ಕುಟುಂಬಸ್ಥರನ್ನು, ಸಮಿತಿಯ ಸದಸ್ಯರನ್ನು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳನ್ನು, ಕಾರ್ಯಕರ್ತರನ್ನು ದಿನಾಂಕ 06.11.2025ನೇ ಗುರುವಾರದಂದು ಶ್ರೀ ಕ್ಷೇತ್ರಕ್ಕೆ ಆಮಂತ್ರಿಸಿ 2000ನೇ ಶಿಬಿರದ ಸಂಭ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 3000ಕ್ಕೂ ಮಿಕ್ಕಿದ ಜನಜಾಗೃತಿ ಕುಟುಂಬದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ 9.30ರಿಂದ 10.30ರವರೆಗೆ ಜನಜಾಗೃತಿ ನವಜೀವನೋತ್ಸವ ಜಾಥಾವನ್ನು ದೇವಸ್ಥಾನದ ಪ್ರವೇಶದ್ವಾರದಿಂದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಮುಂಭಾಗದಿAದ ಸಾಗಿ ಅಮೃತವರ್ಷಿಣಿ ಸಭಾಭವನಕ್ಕೆ ಮೆರವಣಿಗೆ ಸಾಗಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ. ಶ್ರೀ ಗುರು ಶಾಂತೇಶ್ವರ ಸಂಸ್ಥಾನ ಹಿರೇಮಠ ಹುಕ್ಕೇರಿ, ಬೆಳಗಾವಿಯ ಷ. ಬ್ರ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಮತ್ತು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜನಜಾಗೃತಿ ಡಾಕ್ಯÄಮೆಂಟರಿ ಬಿಡುಗಡೆಯನ್ನು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು, ಅಧ್ಯಕ್ಷರು, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಇವರು ಬಿಡುಗಡೆ ಮಾಡಲಿದ್ದಾರೆ. ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಶರಣಪ್ಪ ಸಲದಾಪುರ, ಅಧ್ಯಕ್ಷರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇವರು ನೆರವೇರಿಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಶ್ರೀ ಪ್ರತಾಪಸಿಂಹ ನಾಯಕ್, ವಿಧಾನಪರಿಷತ್ ಸದಸ್ಯರು, ಶ್ರೀ ಡಿ. ಹರ್ಷೇಂದ್ರ ಕುಮಾರ್, ಕಾರ್ಯದರ್ಶಿಗಳು, ಶ್ರೀ ಧ.ಮ. ಎಜ್ಯುಕೇಶನಲ್ ಸೊಸೈಟಿ (ರಿ.)ಉಜಿರೆ ಭಾಗವಹಿಸಲಿದ್ದಾರೆ. ಬೆಳಗ್ಗಿನ ಜಾಥಾವನ್ನು ಶ್ರೀ ಹರೀಶ್ ಕುಮಾರ್, ಅಧ್ಯಕ್ಷರು, ಮೆಸ್ಕಾಂ, ಮಂಗಳೂರು ಇವರು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ 14 ಮಂದಿಗೆ ಜಾಗೃತಿ ಅಣ್ಣ-ಮಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ವೇದಿಕೆಯ ಹಿರಿಯರಾದ ಶ್ರೀ ಕೆ.ವಸಂತ ಸಾಲ್ಯಾನ್, ವೇದಿಕೆಯ ದಾನಿಗಳಾದ ಶ್ರೀ ಆರ್.ಬಿ.ಹೆಬ್ಬಳ್ಳಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಸಂಧರ್ಭ ಜನಜಾಗೃತಿ ವೇದಿಕೆಯವರು, ಶಿಬಿರ ವ್ಯವಸ್ಥಾಪನಾ ಸಮಿತಿಯವರು, ಯೋಜನೆಯ ಸಿಬ್ಬಂದಿ ವರ್ಗದವರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್.,(9480498266) ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಾದ ಶ್ರೀ ನಟರಾಜ್ ಬಾದಾಮಿ(9448000891), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಇದರ ರಾಜ್ಯ ಕಾರ್ಯದರ್ಶಿಯವರಾದ ಶ್ರೀ ವಿವೇಕ್ ವಿ. ಪಾÊಸ್(9972272756) ಮಾಹಿತಿಯಲ್ಲಿ ತಿಳಿಸಿರುತ್ತಾರೆ.
