ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ ಯೋ ಬಿ ಸಿ ಟ್ರಸ್ಟ್ (ರಿ),ಅಥಣಿ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ದರ್ಮಸ್ಥಳ.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಥಣಿ ಜಿಲ್ಲೆ,ಪರಮ ಪೂಜ್ಯ ಪದ್ಮ ವಿಭೂಷಣ ಡಾ!! ಡಿ, ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಶುಭಾರ್ಷಿವಾದಗೊಳಂದಿಗೆ
ಇ ದಿನ ಅಥಣಿ ಜಿಲ್ಲಾ ವ್ಯಾಪ್ತಿಯ ಅಥಣಿ SMS ಕಾಲೇಜ್ ಸಭಾಭವನದಲ್ಲಿ ಗಾಂಧಿ ಸ್ಮೃತಿ ಪಾನ ಮುಕ್ತರಿಗೆ ಅಭಿನಂದನೆ ಮತ್ತು ಪದಗ್ರಹಣ ಕಾರ್ಯಕ್ರಮ🇮🇳” ಹಮ್ಮಿಕೊಂಡಿದ್ದು ವೇದಿಕೆಯ ಮೇಲೆ ಉಪಸ್ಥಿತವಿರುವ ಗಣ್ಯರಿಂದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ದಿವ್ಯ ಸಾನಿಧ್ಯ/ ಅಶಿರ್ವಚನ:_ ಶ್ರೀ ಬಸವರಾಜ ಶರಣರು ಝಂಜರವಾಡ ಅವರು ವಹಿಸಿಕೊಂಡಿದ್ದರು ಅವರು ಮಾತನಾಡಿ ಮಹಾತ್ಮಗಾಂಧಿಜೀ ಅವರು ಕಂಡ ರಾಮರಾಜ್ಯದ ಕನಸು ,ಅವರ ತತ್ವಗಳ ಬಗ್ಗೆ ತಿಳಿಸಿ, ಮದ್ಯಪಾನದಿಂದ ಮನುಷ್ಯ ಜೀವನದ ಮೇಲೆ, ಅವರ ಕುಟುಂಬದ ಮೇಲೆ ಬಿರುತ್ತಿರುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಮದ್ಯಪಾನ ತ್ಯಜೀಸಿ ನವಯುಗದ ನಿರ್ಮಾಣವಾಗಬೇಕಾಗಿದೆ ಎಂದು ಕರೆ ನೀಡಿ ಎಲ್ಲಾ ನವಜೀವನ ಸದಸ್ಯರಿಗೆ ಪದಾಧಿಕಾರಿಗಳಿಗೆ ಶುಭಕೋರಿದರು.ಗಾಂದೀಜಿ ಭಾವಚಿತ್ರಕ್ಕೆ ಪುಷ್ಪಾಚರ್ನೆ : ಶ್ರೀ ಭರಮಣ್ಣ ಲ ಉಪ್ಪಾರ -ಜಿ,ಜಿ,ಜಾ ವೇದಿಕೆಯ ಸದಸ್ಯರು/ ಅದ್ಯಕ್ಷರು ಕೆ,ಉ,ಅ,ನಿ,ನಿ ಕರ್ಣಾಟಕ ಸರ್ಕಾರ,ಅವರು ಮಾತನಾಡಿ ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇವತ್ತಿನ ದಿನ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು , ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಯಿತು ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.ನ,ಜೀ, ಸದಸ್ಯರಿಗೆ ಅಭಿನಂದನೆ: ಶ್ರೀ ಸಂಜಯ ನಾಡಗೌಡ JJV ಸ್ಥಾಪಕ ಅದ್ಯಕ್ಷರು ಅಥಣಿ ಜಿಲ್ಲೆ. ಅವರು ಮಾತನಾಡಿ ಮಹಾತ್ಮ ಗಾಂಧೀಜಿಯವರ ತತ್ವಗಳು ಹಾಗೂ ಜೀವನ ಚರಿತ್ರೆ ಮತ್ತು ಅವರ ಸಿದ್ದಾಂತಗಳನ್ನು ಪೂಜ್ಯ ಖಾವಂದರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜನಜಾಗೃತಿ ವೇದಿಕೆ ಮೂಲಕ ಸಮಾಜದಲ್ಲಿ ಮದ್ಯಪಾನ ಮುಕ್ತ ಸಮಾಜದ ನಿರ್ಮಾಣ ಅಗಬೇಕು ಎಂದು ಚಿಂತನೆ ನಡೆಸಿದವರು ಪೂಜ್ಯ ಖಾವಂದರು ಎಂದು ತಿಳಿಸಿದರು, ಪ್ರಸ್ತುತ ಯುವ ಪಿಳಿಗೆ ಅನೇಕ ರೀತಿಯ ದುಷ್ಟ್ ಚಟಗಳಿಗೆ ಮಾರಿಹೋಗಿದ್ದು ಇದರಿಂದ ಜನ ಹೋರಗೆ ಬರಬೇಕು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು, ಧರ್ಮಸ್ಥಳದ ಧರ್ಮಾಧಿಕಾರಿಗಳು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಬಡವರು ಬದುಕು ಕಟ್ಟಿಕೊಳ್ಳಲು ಅನೇಕ ಕಾರ್ಯಗಳನ್ನು ಹಮ್ಮಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಅವುಗಳ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿ ನವ ಜೀವನ ಸದಸ್ಯರಿಗೆ ಶುಭಕೋರಿದರು,ದ್ಯಕ್ಷತೆ :ಶ್ರೀ ಅಮರ ದುರ್ಗಣ್ಣವರ ಅದ್ಯಕ್ಷರು JJV ಅಥಣಿ ಜಿಲ್ಲೆ, ಅವರು ವಹಿಸಿಕೊಂಡಿದ್ದರು,ಅವರು ಮಾತನಾಡಿ ಪರಮ ಪೂಜ್ಯರು ಸಮಾಜದ ಮೇಲೆ ಇಟ್ಟುಕೊಂಡಿರುವ ಕಾಳಜಿ, ಸಮಾಜದ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು , ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸೇರಿದ್ದು ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದರು.
ಹಾಗೂ ವಿಶೇಷವಾಗಿ ಕಾರ್ಯಕ್ರಮದಲ್ಲಿ ಹೊಸದಾಗಿ ಅಯ್ಕೆಯಾಗಿರುವ ಜನಜಾಗೃತಿ ವೇದಿಕೆಯ ಸರ್ವ ಪದಾಧಿಕಾರಿಗಳಿಗೆ ವೇದಿಕೆಯ ಮೇಲೆ ಉಪಸ್ಥಿತಿಯಲ್ಲಿರುವ ಗಣ್ಯರಿಂದ ಪುಷ್ಪ ನೀಡಿ ಅಭಿನಂದಿಸಲಾಯಿತು
ಮುಖ್ಯ ಅಥಿತಿಗಳು ಶ್ರೀ *ಸಂತೋಷ ಹಳ್ಳೂರು CPI ಅಥಣಿ – ಮದ್ಯಪಾನ ಮಾಡಿ ವಾಹನ ಚಾಲನೆ ಇತೀಚೀನ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಅನೇಕರು ಮದ್ಯವಸನ ಮಾಡಿ ಜೀವನ ಕಳೆದುಕೊಳ್ಳುತ್ತಿದ್ದಾರೆ, ಸಂಚಾರಿ ನಿಯಮಗಳನ್ನು ಪಾಲಿಸುವ ಬಗ್ಗೆ ಮಾಹಿತಿ ನೀಡಿ, ಕ್ಷೇತ್ರದ ಕಾರ್ಯಕ್ತಮಗಳ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದರು. ಶ್ರೀ ಅಣ್ಣಾಸಾಬ ತೆಲಸಂಗ ,ಕ,ರ,ವೇ,ಜಿ,ಪ್ರ, ಕಾರ್ಯದರ್ಶಿ,ಗೌರವ ಉಪಸ್ಥಿತಿ:ಶ್ರೀಮತಿ ನಾಗರತ್ನಾ ಹೆಗಡೆ, ಜಿಲ್ಲಾ ನಿರ್ದೇಶಕರು ಅಥಣಿ ಜಿಲ್ಲೆ, ಶ್ರೀ D V ಅಗರಕೋಡ ಇಲಾಖಾದಿಕಾರಿಗಳು ಕಂದಾಯ ಇಲಾಖೆ,ಶ್ರೀ ಜೀನೆಂದ್ರ ಖೇಮಲಾಪೂರ- ಉಪಾದ್ಯಕ್ಷರು JJV ಅಥಣಿ ಜಿಲ್ಲೆ.
ಶ್ರೀ ವಿಠ್ಠಲ ಶಂ ಹಳ್ಳೊಳ್ಳಿ, ಸದಸ್ಯರು,JJV ಅಥಣಿ ಜಿಲ್ಲೆ.ಹಾಗೂ ಎಲ್ಲಾ ಗೌರವಾನ್ವಿತ JJV ಪದಾಧಿಕಾರಿಗಳು,ಭಾಸ್ಕರ್ ಎನ್ ಯೋಜನಾಧಿಕಾರಿ ಜನಜಾಗೃತಿ ವೇದಿಕೆ ಧಾರವಾಡ ಪ್ರಾಸ್ತಾವಿಕ ಮಾತಾಡಿ, ಆ ಜಾಗೃತಿ ವೇದಿಕೆಯ ಪದಾಧಿಕಾರಿಗಳಿಗೆ ಪದಗ್ರಹಣ, ಜನಜಾಗೃತಿ ಸದಸ್ಯರಿಗೆ ಗೌರವಿಸುವ ಸಂದರ್ಭ ತೊಡಗಿಸಿಕೊಂಡರು ಪ್ರತಿಕಾ ವರದಿಗಾರರು, ಕಾಗವಾಡ, ಅಥಣಿ, ಹಾರೊಗೇರಿ,,ರಾಯಭಾಗ,ಮುಡಲಗಿ ಐದು ತಾಲೂಕುಗಳ ಕ್ಷೇತ್ರ ಯೋಜನಾಧಿಕಾರಿಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ನವ ಜೀವನ ಸದಸ್ಯರು, ಒಕ್ಕೂಟದ ಪಧಾದಿಕಾರಿಗಳು, ಸ್ವ ಸಹಾಯ ಸಂಘದ ಸದಸ್ಯರು, ಐನಾಪುರ ವಲಯದ ಸೇವಾಪ್ರತಿನಿದಿಗಳು ಉಪಸ್ಥಿತಿ ಇದ್ದರು
