ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದಿ ಯೋಜನೆ ಬಿ. ಸಿ ಟ್ರಸ್ಟ್ (ರಿ )ಹಾವೇರಿ ಜೆಲ್ಲೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ )ಹಾವೇರಿ ಜಿಲ್ಲೆ.
ಪ್ರಗತಿ ಬಂಧು ಸ್ವ -ಸಹಾಯ ಸಂಘಗಳ ಒಕ್ಕೂಟ ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲಿ ಪರಮಾಪೂಜ್ಯ ಪದ್ಮವಿಭೂಷಣ ರಾಜಶ್ರೀ ವೀರೇಂದ್ರ ಹೆಗ್ಗಡೆ ಯವರು ಹಾಗೂ ಮಾತೃಶ್ರೀ ಡಾಕ್ಟರ್ ಹೇಮಾವತಿ ವಿ ಹೆಗ್ಗಡೆಯವರು ಮಾರ್ಗದರ್ಶನದೊಂದಿಗೆ ನಡೆದಿದ ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಅಭಿನಂದನ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಮೊದಲಿನದಾಗಿ ಜಾಥ ದ ಮೂಲಕ ಕಿತ್ತೂರಾಣಿ ಚೆನ್ನಮ್ಮ ವೃತ್ತದಿಂದ ವಿರಕ್ತ ಮಠದವರೆಗೆ ಜಾಥ ಮಾಡಿದ್ದು ಈ ಜಾಥ ವನ್ನು ಶ್ರೀ ನಿಂಗಪ್ಪ ನೆಗಳೂರು ಸರ್ ರವರು ಚಾಲನೆ ನೀಡಿದರು ಈ ಜಾಥದಲ್ಲಿ ಘೋಷವಾಕ್ಯಗಳಿಂದ ಸುಮಾರು ಒಂದು ಕಿಲೋಮೀಟರ್ ವರೆಗೂ ಜೊತೆ ನಡೆಯಲಾಗಿತ್ತು ಆನಂತರ ವಿರಕ್ತಮಠದಲ್ಲಿ ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಅಭಿನಂದನಾ & ಜನ ಜಾಗೃತಿ ಸಮಾವೇಶದಲ್ಲಿ ಅತಿಥಿಗಳನ್ನು ಯೋಜನಾಧಿಕಾರಿಗಳಾದ ಶ್ರೀ ಶೇಖರ್ ನಾಯ್ಕ ಸರ ರವರು ಸ್ವಾಗತಿಸಿದರು.
ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮ. ನಿ. ಪ್ರ ಸಂಗನಬಸವ ಮಹಾಸ್ವಾಮಿಗಳು ದೀಪ ಹಚ್ಚುವುದರ ಮೂಲಕ ಉದ್ಘಾಟನೆ ಮಾಡಿದರು. ಭಾಗವಹಿಸಿದ ಹಾಗೂ ಎಲ್ಲಾ ನಮ್ಮ ನವ ಜೀವನ ಸಮಿತಿಯ ಸದ್ಯಸರಿಗೆ ಹಾಗೂ ಅವರ ಕುಟುಂಬದವರಿಗೆ ಆಶೀರ್ವಚನಗಳನ್ನು ನೀಡಿ… ಧರ್ಮಸ್ಥಳದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಜಿಲ್ಲಾ ನಿರ್ದೇಶಕರಾದ ಶ್ರೀ ಶಿವರಾಯ ಪ್ರಭು ಅವರು ಯೋಜನೆಯ ನಡೆದು ಬಂದ ದಾರಿ ಯೋಜನೆಗಳ ವಿವಿಧ ಕಾರ್ಯಕ್ರಮಗಳ ವಿಮರ್ಶಕವಾಗಿ ಮಾಹಿತಿ ತಿಳಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧಾರವಾಡ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಭಾಸ್ಕರ್ ರವರು ಪ್ರಸ್ತಾವಿಕ ಮಾತಾಡಿ ಜನಜಾಗೃತಿ ವೇದಿಕೆ ಮೂಲಕ ಕರ್ನಾಟಕ ರಾಜ್ಯದಲ್ಲಿ 30 ಜಿಲ್ಲೆಯಲ್ಲಿ ವೇದಿಕೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಮದ್ಯಾವರ್ಜನಾ ಶಿಬಿರ, ಮಾದಕ ವಸ್ತು ವಿರೋಧಿ ದಿನಾ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಮೂಲಕ ಇವಾಗ ಲಕ್ಷಾಂತರ ಕುಟುಂಬ ಕುಡಿತ ಬಿಟ್ಟು ನೆಮ್ಮದಿ ಜೀವನ ಮಾಡುತ್ತಿದ್ದಾರೆ ಅಂತ ವಿವರ ವಾಗಿ ಮಾಹಿತಿ ನೀಡಿದರು.ತದನಂತರ ಮುಖ್ಯ ಅತಿಥಿಗಳಾದ ಶಿಗ್ಗಾವ್ ತಾಲೂಕಿನ ತಹಸೀಲ್ದಾರವರು ಶ್ರೀ ಯಲ್ಲಪ್ಪ ಗೊಣ್ಣೆನವರು ಇಂದಿನ ದಿನಗಳಲ್ಲಿ ಯುವ ಪ್ರಜೆಗಳು ದುಚ್ಚಟಕ್ಕೆ ಜಾಸ್ತಿ ಬಲಿ ಆಗುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಜನಪರ ಕೆಲಸಗಳಲ್ಲಿ ತುಂಬಾ ಮುತವರ್ಜಿ ವಹಿಸಿ ಕೆಲಸ ಮಾಡುತ್ತಿದೆ ಸಾಮಾಜಿಕ ಕಾರ್ಯಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ , ಅನೇಕ ರೀತಿಯಲ್ಲಿ ಒಳ್ಳೊಳ್ಳೆ ಕೆಲಸಗಳನ್ನು ಮಾಡುತ್ತಿದೆ. ತದನಂತರ ಗೌರವ ಉಪಸ್ಥಿತಿರಾರಾದ ಶ್ರೀ ಶಿವಾನಂದ ಮ್ಯಾಗೇರಿ ರವರು ಪೂಜ್ಯ ಖಾವಂದರು ದುಶ್ಚಟಗಳ ನಿರ್ಮೂಲನೆಗೆ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಮಧ್ಯವರ್ಜನ ಶಿಬಿರಗಳನ್ನು ನಡೆಸಿ ಕುಡಿತದಿಂದ ಜನರನ್ನು ದೂರ ಮಾಡುವ ಬಿರವನ್ನು ಮಾಡುತ್ತಿದ್ದು ಅನೇಕ ಜನರ ಬದುಕಿನಲ್ಲಿ ಒಳ್ಳೆಯ ವಾತಾವರಣ ತಂದು ಕುಡಿತದಿಂದ ಮುಕ್ತಿಯನ್ನು ಮಾಡಲಾಗಿದೆ ಹಾಗೂ ಮಹಿಳೆಯರ ಸಾವಲಂಬನಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಯಾವಾಗಲೂ ಸದಾ ಸಿದ್ಧವಾಗಿದೆ ಸಾಲ ಕೊಡುವುದರ ಮೂಲಕ ಆರ್ಥಿಕವಾಗಿ ಪ್ರಗತಿ ಹೊಂದಲು ಸಹಾಯ ಮಾಡುತ್ತದೆ ಇನ್ನು ಮುಂದೆ ಇದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಆಶಿಸುತ್ತೇನೆ. ಸನ್ಮಾನ್ಯ ಶ್ರೀಯುತ ಶಾಸಕರಾದ ಶ್ರೀ ಯಾಸಿರ್ ಅಹಮದ್ ಖಾನ್ ಪಠಾಣ್ ರವರು ಸಭೆಯನ್ನು ಉದ್ದೇಶಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು ಜನಪರ ಕಾರ್ಯ ಕೆಲಸಗಳಿಗೆ ಸದಾ ಸಿದ್ದ ನಾನು ಕೂಡ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕೆಲಸಗಳಿಗೆ ತುಂಬಾ ಅಭಿನಂದಿಸುತ್ತೇನೆ ಪಾನ ಮುಕ್ತರ ಸದಸ್ಯರನ್ನು ಉದ್ದೇಶಿಸಿ ನೀವು ಇವಾಗ ಕುಡಿತ ಬಿಟ್ಟು ಒಳ್ಳೆಯ ಜೀವನವನ್ನು ನಡೆಸುತ್ತಿದ್ದೀರಿ ಇನ್ನುಮುಂದೆ ಕುಡಿತಕ್ಕೆ ಒಳಗಾಗದೆ ಇದೇ ರೀತಿಯ ಜೀವನವನ್ನು ನಡೆಸಬೇಕು ಹಾಗೆ ಇತರ ಒಳ್ಳೆಯ ಸಾಮಾಜಿಕ ಕೆಲಸಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಲ್ಲಿ ಮಾಡಲು ಮಾತ್ರ ಸಾಧ್ಯ.
ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿರುವ ಪಾನಮುಕ್ತರಿಗೆ ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಕಲಾವಿದರಿಗೂ ಅಭಿನಂದಿಸಲಾಯಿತು . ಹಾಗೆ ಹಿರೇಕೆರೂರು ಯೋಜನಾಧಿಕಾರಿಯವರಾದ ಶ್ರೀಮತಿ ಸುನಿತಾ ಮೇಡಂ ಇವರು ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲಾ ಅಧಿಕಾರಿ ವರ್ಗದವರಿಗೂ ಹಾಗೂ ಕಾರ್ಯಕರ್ತರಿಗೂ ಹಾಗೂ ಸ್ವ ಸಹಾಯ ಸಂಘದ ಸದಸ್ಯರಿಗೆ ಹಾಗೂ ಕಾರ್ಯಕ್ರಮಕ್ಕೆ ಶ್ರಮಿಸಿದಂತ ಎಲ್ಲರಿಗೂ ಧನ್ಯವಾದ ತಿಳಿಸಿ ಕಾರ್ಯಕ್ರಮ ಧನ್ಯವಾದ ಹೇಳಲಾಯಿತು.
