2000ನೇ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆ ಗದಗ

Janajagurthi Vedike Uncategorized

ಕೊಪ್ಪಳ ಪ್ರಾದೇಶಿಕ ವಿಭಾಗದ. ಗದಗ ಜಿಲ್ಲೆಯ ಗದಗ ತಾಲೂಕಿನ ಶ್ರೀ ಈಶ್ವರಿ ವಿದ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ವತಿಯಿಂದ ನಡೆಸಲಾಗುವ 2000ನೇ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯನ್ನುನಡೆಸಲಾಯಿತು.ಈ ಸಭೆಯಲ್ಲಿ ಶ್ರೀ ಈಶ್ವರಿ ವಿಶ್ವವಿದ್ಯಾಲಯದ ಸಂಘಟಕರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಘಟನಾ ಅಧ್ಯಕ್ಷರಾದ ಶ್ರೀ ನಟರಾಜ್ ಬಾದಾಮಿ, ಶ್ರೀ ಕೇಶವ ದೇವಾಂಗ ನಿರ್ದೇಶಕರು, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ಗದಗ ಪಟ್ಟಣದ ವಿವಿಧ ಸಂಘಟನೆಯ ಸದಸ್ಯರು, ಉದ್ದಿಮೆದಾರರು, ರೈತ ಮುಖಂಡರು, ನಿವೃತ್ತ ಶಿಕ್ಷಕರು, ನಿವೃತ್ತ ಇಂಜಿನಿಯರ್ ಗಳು, ವಿವಿಧ ಮಹಿಳಾ ಸಂಘಟನೆಯ ಸದಸ್ಯರು, ರೈತ ಮುಖಂಡರು, ಗದಗ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರುಗಳು ಪದಾಧಿಕಾರಿಗಳು, ನವ ಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.ಈ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು, ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪರಮ ಪೂಜ್ಯರ ಸಮಾಜಮುಖಿ ಚಿಂತನೆಗಳು ಮತ್ತು ಕಾರ್ಯಗಳು, ಜನಜಾಗೃತಿ ವೇದಿಕೆಯ ಪರಿಣಾಮ ಮತ್ತು ಫಲಿತಾಂಶ ಬಗ್ಗೆ ವಿಶೇಷ ಮಾರ್ಗದರ್ಶನ ನೀಡಲಾಯಿತು.ಸಭೆಯಲ್ಲಿ ಪಾಲ್ಗೊಂಡ ಸರ್ವ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಗದಗ ಸಮಾಜಕ್ಕೆ 2000ನೇ ಮಧ್ಯವರ್ಜನ ಶಿಬಿರ ನಡೆಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದು ನಮ್ಮೆಲ್ಲರ ಭಾಗ್ಯ ಎಂದು ಭಾವಿಸಿ ಶಿಬಿರದ ಯಶಸ್ವಿಗಾಗಿ ಅಧ್ಭುತ ಹಣಕಾಸಿನ ಸಹಕಾರ ನೀಡಿರುವುದು ಶ್ಲಾಘನೀಯ.
ಸರ್ವ ಸದಸ್ಯರ ಸಮ್ಮುಖದಲ್ಲಿ ಸಮಿತಿ ರಚನೆ ಮಾಡಲಾಗಿದ್ದು ಸಮಿತಿಯ ಅಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ್ ಸಂತೋಷ್ ಸರ್ ರವರನ್ನು ಆಯ್ಕೆ ಮಾಡಿದ್ದು, ಉಪಾಧ್ಯಕ್ಷರನ್ನು ಗೌರವ ಸಲಹೆಗಾರರು ಹಾಗೂ ಕೋಶಾಧಿಕಾರಿ ರವರನ್ನು ಆಯ್ಕೆ ಮಾಡಿ ವ್ಯವಸ್ಥಿತವಾದ ಸಮಿತಿ ರಚನೆ ಮಾಡಲಾಯಿತು.