ದುರ್ಬಲ ಮನಸ್ಸು ಮತ್ತು ದುರ್ಬಲ ವ್ಯಕ್ತಿತ್ವ ವ್ಯಸನಕ್ಕೆ ಮೂಲ ಕಾರಣವಾಗುತ್ತದೆ, ವ್ಯಕ್ತಿಯೊಬ್ಬನ ವೀಕ್ನೆಸ್ ನಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳಿಯುವಂತೆ ಆಗಬಾರದು, ದೊಡ್ಡ ದೊಡ್ಡ ಹಡಗುಗಳು ಮುಳುಗುವುದು ಅದರಲ್ಲಿ ಇದ್ದ ತಾಂತ್ರಿಕ ದೋಷವೇ ಕಾರಣ ಹಾಗೆ ನಮ್ಮಲ್ಲಿ ದೋಷಗಳು ಜಾಸ್ತಿಯಾದಾಗ ನೈತಿಕ ಅದಪತನಕ್ಕೆ ಕಾರಣವಾಗುತ್ತದೆ. ದೋಷ ಮುಕ್ತ ವ್ಯಕ್ತಿತ್ವ ನಾವೇ ನಿರ್ಮಿಸಿಕೊಳ್ಳಬೇಕು,ನಮ್ಮ ಮೇಲೆ ನಾವೇ ಹತೋಟಿ ಇಟ್ಟುಕೊಂಡಾಗ ಮಾತ್ರ ಹೀರೋ ಆಗಲು ಸಾಧ್ಯ, ಇನ್ನೊಬ್ಬರ ಹತೋಟಿಯಲ್ಲಿದ್ದಾಗ ಸಾಧ್ಯವಿಲ್ಲ, ದಿಕ್ಕು ತಪ್ಪಿದ ತಮಗೆ ಇದೊಂದು ದೀಕ್ಷಾ ಕೇಂದ್ರವಾಗಬೇಕು, ಇಲ್ಲಿರುವ ಎಲ್ಲರೂ ಸನ್ನಡತೆಯ ದೀಕ್ಷೆ ತೆಗೆದುಕೊಳ್ಳಬೇಕು. ಇಲ್ಲಿ ಎಷ್ಟು ಸನ್ನಡತೆಯಿಂದ ಇರುತ್ತೀರೋ, ಅದಕ್ಕಿಂತ ಮುಖ್ಯವಾಗಿ ಇಲ್ಲಿಂದ ಹೊರಗಡೆ ಹೋದ ನಂತರ ಸನ್ನಡತೆಯಿಂದ ಜೀವನ ನಡೆಸಿದಾಗ ಮಾತ್ರ ನಿಮ್ಮ ವ್ಯಕ್ತಿತ್ವಕ್ಕೆ ನಿಜಬೆಲೆ ಸಿಗುತ್ತದೆ. ನಿಮ್ಮ ಬದುಕಿಗೆ ಬಂದ ಈ ಗ್ರಹಣ – ಸನ್ನಡತೆಯಿಂದ ದೂರವಾಗಲಿ ಎಂದು ವಿಶೇಷ ಮಾರ್ಗದರ್ಶನ ನೀಡಿದರು.ಕೊಪ್ಪಳ ಪ್ರಾದೇಶಿಕ ವಿಭಾಗದ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹ ಸಜಾಬಂಧಿಗಳಿಗೆ ಮನ: ಪರಿವರ್ತನೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಹೇಮಂತ್ ಕುಮಾರ್ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವರು ಗಿಡಕ್ಕೆ ನೀರರೇಯುವ ಮೂಲಕ ಚಾಲನೆ ನೀಡಿದರು, ಸದ್ರಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ರವರು ಸಜಾಬಂದಿಗಳಿಗೆ ಬಹಳ ವಿಶೇಷವಾದ ಮನಃಪರಿವರ್ತನೆಯ ಮಾರ್ಗದರ್ಶನ ನೀಡಿದರು, ಸಭೆಯ ಅಧ್ಯಕ್ಷತೆಯನ್ನು ಶ್ರೀ ಅಂಬರೀಶ್ ಎಸ್ ಪೂಜಾರ್ ಅಧೀಕ್ಷಕರು ಜಿಲ್ಲಾ ಕಾರಾಗೃಹ ಕೊಪ್ಪಳ, ವಹಿಸಿದ್ದರು.ಈ ಸಂದರ್ಭದಲ್ಲಿ ಶ್ರೀ ಪ್ರಕಾಶ್ ರಾವ್ ನಿರ್ದೇಶಕರು, ಶ್ರೀ ನೀಲಕಂಠಪ್ಪ ನಾಗಶೆಟ್ಟಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಕೊಪ್ಪಳ, ಶ್ರೀಮತಿ ಯಮುನಾ, ಘಟಕ ಅಧಿಕಾರಿ ಸಖಿ ಒಂನ್ ಸ್ಟಾಪ್ ಸೆಂಟರ್, ಕೊಪ್ಪಳ, ಶ್ರೀ ಮಾಧವ ಗೌಡ, ಶ್ರೀ ನಾಗೇಶ್ ವೈ. ಎ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಟೋಟಾ ಸ್ಪರ್ಧೆಯಲ್ಲಿ ವಿಜೇತರಾದ ಸಜಾ ಬಂದಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
