ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಂಗಳೂರು ಗ್ರಾಮಾಂತರ/ನಗರ ಜಿಲ್ಲೆ ಸಹಯೋಗದೊಂದಿಗೆ
ರಾಜರ್ಷಿ ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಕೃಪಾಷೀರ್ವಾದ ಹಾಗೂ ಮಾರ್ಗ ದರ್ಶನಗಳೊಂದಿಗೆ ಬೆಂಗಳೂರು ಗ್ರಾಮಾಂತರ/ನಗರ ಜಿಲ್ಲಾ ಜನಜಾಗೃತಿ ವೇದಿಕೆ ಪದಾದಿಕಾರಿಗಳ ಸಭೆಯನ್ನು ವಿ. ಸಿ. ಎನ್. ಆರ್ ಸಭಾಂಗಣ ನೆಲಮಂಗಲದಲ್ಲಿ ನಡೆಸಲಾಯಿತು.ದೇವನಹಳ್ಳಿ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ರವಿರಾಜ್ ರವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಸ್ವಾಗತವನ್ನು ಬಯಸಿದರು.ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಗಾಟಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಬೆಂಗಳೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಶೀನಪ್ಪ. ಎಂ ಸರ್ ರವರು ಮಾತನಾಡುತ್ತಾ ಯಾವುದೇ ಪ್ರತಿಪಲಾಪೇಕ್ಷಯನ್ನು ಬಯಸದೆ ತಮ್ಮ ಅಮೂಲ್ಯವಾದ ಸಮಯವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಗ್ರಾಮಾಭಿವೃದ್ದಿ ಯೋಜನೆಗೆ ನೀಡುತ್ತಿರುವವರೆಂದರೆ ಅದು ಜನಜಾಗೃತಿ ವೇದಿಕೆಯ ಪದಾಧಿಕಾರಿಗಳೆಂಬುದು ಹೆಮ್ಮೆಯ ವಿಷಯವೆಂದು ತಿಳಿಸಿದರು. ಕಳೆದ ತಿಂಗಳು ಬೆಂಗಳೂರಿನ ಫ್ರೀಡಂ ಫಾರ್ಕ್ ನಲ್ಲಿ ನಡೆದ ಧರ್ಮಸಂರಕ್ಷಣಾ ಸಮಾವೇಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರನ್ನು ಒಗ್ಗೂಡಿಸಿದ ಕೀರ್ತಿ ಸದಸ್ಯರಿಗೆ ಸಲ್ಲುತ್ತದೆ ಎಂದು ತಿಳಿಸಿದರು ಈ ವಿಚಾರವಾಗಿ ಪೂಜ್ಯರಿಗೂ ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯಮೇಲೆ ವಿಷೇಷವಾದ ಪ್ರೀತಿ ಮತ್ತು ಕಾಳಜಿ ಇದೆ ಎಂದು ತಿಳಿಸಿದರು. ಪೂಜ್ಯರ ಮೇಲೆ ಎಷ್ಟೇ ಅಪಪ್ರಚಾರ ಮಾಡಿದರುಸಹ ಪೂಜ್ಯರು ದೃತಿಗೆಡದೆ ಸಮಾಜಕ್ಕೆ ಯಾವ ಕೆಲಸಗಳು ಅಗತ್ಯವಿದೆ ಆ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸುವಬಗ್ಗೆ ಸದಾ ಚಿಂತನೆ ನಡೆಸುತ್ತಿರುತ್ತಾರೆ ಎಂದು ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಸಮಗ್ರ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.ಬೆಂಗಳೂರು ಗ್ರಾಮಾಂತರ/ನಗರ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಕಾರ್ಯದರ್ಶಿಗಳು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಉಮರಬ್ಬ ರವರು ಗತಸಭೆಯ ಸಮಗ್ರ ವರದಿಯನ್ನು ಮಂಡನೆಮಾಡಿದರು ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಕಾರ್ಯಕ್ರಮಗಳ ಆರ್ಥಿಕ ವರ್ಷದ ಗುರಿ ಸಾಧನೆಗಳ ವಿವರವನ್ನು ಸಭೆಯಲ್ಲಿ ಮಂಡನೆ ಮಾಡಿದರು.
ಜಿಲ್ಲಾ ವೇದಿಕೆಯ ಪದಾಧಿಕಾರಿಗಳು ಆರೋಗ್ಯಕರ ಚರ್ಚೆಯನ್ನು ನಡೆಸುವ ಮೂಲಕ ಸಂತಸ ವ್ಯಕ್ತಪಡಿಸುವ ಮೂಲಕ ವೖಯಕ್ತಿಕ ಸಲಹೆಗಳನ್ನು ಸಭೆಯಲ್ಲಿ ತಿಳಿಸಿದರು.ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ತಿಮ್ಮಯ್ಯನಾಯ್ಕ ರವರು ಮಾತನಾಡಿ ನವಜೀವನ ಸಮಿತಿಗಳ ಬಲವರ್ದನೆಗಳ ಬಗ್ಗೆ ತಿಳಿಸಿದರು. ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಗಾಂಧಿ ಜಯಂತಿ ಕಾರ್ಯಕ್ರಮದ ಬಗ್ಗೆ ಕೇಂದ್ರ ಕಛೇರಿಯಿಂದ ನೀಡಿದ ಮಾಹಿತಿ ಪತ್ರವನ್ನು ಓದಿ ತಿಳಿಸಿದರು. ಅಕ್ಟೋಬರ್ ತಿಂಗಳ ಕೊನೆಯವಾರ ದಿಂದ ನವೆಂಬರ್ ತಿಂಗಳಲ್ಲಿ 2000ನೇ ಮದ್ಯವರ್ಜನ ಶಿಬಿರವನ್ನು ನಡೆಸಲು ತಿಳಿಸಿರುವ ಬಗ್ಗೆ ಮಾಹಿತಿಯನ್ನು ನೀಡಿದರು. ಜಿಲ್ಲಾ ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮಗಳ ಬಾಕಿ ಉಳಿದ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳ ಕೊನೆಯ ವಾರದೊಳಗೆ ಪೂರ್ಣಗೊಳಿಸುವಂತೆ ಮಾಹಿತಿಯನ್ನು ನೀಡಿದರು.ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ ನಾಲ್ಕು ಯೋಜನಾಕಛೇರಿಗಳು ಸೇರಿ ದೊಡ್ಡಬಳ್ಳಾಪುರ ದಲ್ಲಿ ಜಿಲ್ಲಾ ಮಟ್ಟದ ಗಾಂಧಿಜಯಂತಿ ಕಾರ್ಯಕ್ರಮವನ್ನು ನಡೆಸುವಂತೆ ಮತ್ತು ಕೆ.ಆರ್ ಪುರಂ ಮತ್ತು ಹೊಸಕೋಟೆ ಯೋಜನಾಕಛೇರಿಗಳು ಸೇರಿ ಹೊಸಕೋಟೆ ಯಲ್ಲಿ ಗಾಂಧಿಜಯಂತಿ ಕಾರ್ಯಕ್ರಮ ಹಾಗೂ ಆನೇಕಲ್ ಯೋಜನಾಕಛೇರಿಯವರು ಆನೇಕಲ್ ನಲ್ಲಿ ಗಾಂಧಿಜಯಂತಿ ಕಾರ್ಯಕ್ರಮಗಳನ್ನು ನಡೆಸುವಂತೆ ಚರ್ಚಿಸಿ ನಿರ್ಣಯಿಸಲಾಯಿತು.ಜನಜಾಗೃತಿ ವೇದಿಕೆಯ ಮೂರು ಸಭೆಗಳಿಗೂ ಹೆಚ್ಚು ಸಭೆಗೆ ಭಾಗವಹಿಸದ ಸದಸ್ಯರನ್ನು ವೇದಿಕೆಯಿಂದ ಬೖಲಾಪ್ರಕಾರ ಕೖಬಿಡುವ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು.2025-26ನೇ ವರ್ಷದ ಆಯವ್ಯಯ ಬಳಕೆಯಬಗ್ಗೆ ಸಭೆಗೆ ತಿಳಿಸಲಾಯಿತು.ಸದಸ್ಯರ ಸೂಚನೆಯ ಮೇರೆಗೆ ಸರ್ವಾನುಮತದಿಂದ ಹೋಸಕೋಟೆ ತಾಲ್ಲೋಕಿನ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ವೆಂಕಟೇಶ್ ರವರನ್ನು ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.ಸದಸ್ಯರ ಸೂಚನೆಯ ಮೇರೆಗೆ ಸರ್ವಾನುಮತದಿಂದ ದೊಡ್ಡಬಳ್ಳಾಪುರ ತಾಲ್ಲೋಕಿನ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ನಾಗೇಶ್ ರವರನ್ನು ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.ಸದಸ್ಯರ ಸೂಚನೆಯ ಮೇರೆಗೆ ಸರ್ವಾನುಮತದಿಂದ ಕೆ.ಆರ್ ಪುರಂ ತಾಲ್ಲೋಕಿನ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಲಕ್ಮಣ್ ಕಲ್ಕುಂಟೆ ರವರನ್ನು ನೂತನ ಜಿಲ್ಲಾ ಕೋಷಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.ಸರ್ವಸದಸ್ಯರ ವೖಯಕ್ತಿಕ ಪರಿಚಯವನ್ನು ಮಾಡಲಾಯಿತು.ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾದ್ಯಕ್ಷರಾದ ಶ್ರೀ ನರಸಿಂಹರಾಜುರವರು ಮಾತನಾಡಿ ನವಜೀವನ ಸಮಿತಿ ಸದಸ್ಯನಾದ ನನ್ನನ್ನು ಜಿಲ್ಲಾಉಪಾಧ್ಯಕ್ಷರಾಗಿ ಆಯ್ಕೆಮಾಡಿ ಸೇವೆಯನ್ನು ಸಲ್ಲಿಸಿರುವುದು ನನಗೆ ತೃಪ್ತಿಯಿದ್ದು ನಾನು ನವಜೀವನ ಸಮಿತಿಯ ಸದಸ್ಯನಾಗಿರುವುದು ನನಗೆ ಹಮ್ಮೆಯಿದೆ ಎಂದು ತಿಳಿಸಿ ಶುಭಹಾರೖಸಿದರು.ನೂತನ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ್ ರವರು ಜನಜಾಗೃತಿ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷನನ್ನಾಗಿ ಆಯ್ಕೆಮಾಡಲು ಸಹಕರಿಸಿದ ಎಲ್ಲಾಸದಸ್ಯರಿಗೂ ಧನ್ಯವಾದವನ್ನು ತಿಳಿಸುವಮೂಲಕ ಅಧ್ಯಕ್ಷನಾಗಿ ಕರ್ತವ್ಯವನ್ನು ನಿರ್ವಹಿಸಲು ಸದಸ್ಯರ ಸಹಕಾರವನ್ನು ನೀಡುವಂತೆ ವಿನಂತಿಸಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಗೌರವಾನ್ವಿತ ಟ್ರಸ್ಟಿಗಳು ಹಾಗೂ ನಿಕಟಪೂರ್ವ ರಾಜ್ಯಸಂಗಟನಾ ಅಧ್ಯಕ್ಷರಾದ ಶ್ರೀ ವಿ. ರಾಮಸ್ವಾಮಿ ರವರು ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಹೆಗ್ಗಡೆಯವರು ಹೇಳಿದಂತೆ ನೀವೆಲ್ಲಾ ಜನಜಾಗೃತಿ ವೇದಿಕೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ನೀವೆಲ್ಲರು ಶ್ರೀ ಮಂಜುನಾಥಸ್ವಾಮಿಯ ಸೇವೆಯನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿದರು. ಪೂಜ್ಯರು ಅತಿ ಪ್ರೀತಿಸುವ ಕಾರ್ಯಕ್ರಮವೆ ಜನಜಾಗೃತಿ ವೇದಿಕೆ ಆ ವೇದಿಕೆಯ ಸದಸ್ಯನಾಗಿರುವುದಕ್ಕೆ ನನಗೆ ಹಮ್ಮೆಇದೆ ಎಂದು ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯರ ಬಗ್ಗೆ ಹವಹೇಳನಕಾರಿಯಾಗಿ ಮಾತನಾಡುವವರ ಬಾಯನ್ನು ಮುಚ್ಚಿಸಿ ಧರ್ಮಸ್ಥಳವನ್ನು ಉಳಿಸಿಕೊಳ್ಳುವ ಜವಬ್ದಾರಿ ನಮ್ಮೆಲ್ಲರ ಮೇಲಿದೆಎಂದು ತಿಳಿಸುವ ಮೂಲಕ ಶುಭಹಾರೖಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯ ಡಾ. ಡಿ ವೀರೇಂದ್ರಹೆಗ್ಗಡೆಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯರ ವಿರುದ್ಧ ಮಾಡುತ್ತಿರುವ ಅಪಪ್ರಚಾರವನ್ನು ಜಿಲ್ಲಾ ಜನಜಾಗೃತಿ ವೇದಿಕೆಯು ತೀವ್ರವಾಗಿ ಖಂಡಿಸಿ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆಯಲ್ಲಿ ಖಂಡಿಸಿ ನಿರ್ಣಯಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಗ್ರಾಮಾಂತರ /ನಗರ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ವೀಣಾರಮೇಶ್ ರವರು ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ಎಂ.ಐ. ಎಸ್ ಯೋಜನಾಧಿಕಾರಿ ಶ್ರೀ ರಿತೇಶ್ ಯೋಜನಾಧಿಕಾರಿಗಳಾದ ಶ್ರೀ ಪುರುಷೋತ್ತಮ್, ಶ್ರೀ ಹರೀಶ್, ಶ್ರೀ ದಿನೇಶ್, ಶ್ರೀ ನಾಗೇಶ್, ಶ್ರೀಮತಿ ಸುಜಾತಶೆಟ್ಟಿ, ಶ್ರೀಮತಿ ಸವಿತಾಶೆಟ್ಟಿ, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕ ಶ್ರೀ ಎಂ. ಎಸ್ ದರ್ಶನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಆಡಿಟ್ ಪ್ರಭಂದಕರಾದ ಶ್ರೀ ಆದರ್ಶ್, ಬೆಂಗಳೂರು ಗ್ರಾಮಾಂತರ/ನಗರ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳು ಜಿಲ್ಲಾ ವೇದಿಕೆ ಸಭೆಯಲ್ಲಿ ಭಾಗವಹಿಸಿದ್ದರು.
