1942ನೇ ಮದ್ಯವರ್ಜನ ಶಿಬಿರದ ನವಜೀವನ ಸಮಿತಿ ಸದಸ್ಯರ ಪ್ರಥಮ ಮಾಸಿಕ ಸಭೆ

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಚಿಕ್ಕನಾಯಕನಹಳ್ಳಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ತುಮಕೂರು-2 ಜಿಲ್ಲೆ ರವರ ಸಹಯೋಗದೊಂದಿಗೆ
ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯ ಸಾದರಹಳ್ಳಿಯಲ್ಲಿ 1942ನೇ ಮದ್ಯವರ್ಜನ ಶಿಬಿರದ ನವಜೀವನ ಸಮಿತಿ ಸದಸ್ಯರ ಪ್ರಥಮ ಮಾಸಿಕ ಸಭೆಯನ್ನು ನಡೆಸಲಾಯಿತು.ಪ್ರಥಮ ಮಾಸಿಕ ಸಭೆಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಅಥಿತಿಗಳು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಉದ್ಗಾಟನೆ ಮಾಡಿದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯನಾಯ್ಕ ಸರ್ ರವರು ಶಿಬಿರಾರ್ಥಿಗಳು ಮತ್ತು ಕುಟುಂಬ ಸದಸ್ಯರನ್ನು ಮೌಕಿಕವಾಗಿ ಮಾತನಾಡಿಸಿ ಕುಡಿತದ ಜೀವನ ಮತ್ತು ಕುಡಿತದ ನಂತರದ ಜೀವನದಬಗ್ಗೆ ವೖಯಕ್ತಿಕ ಅಭಿಪ್ರಾಯಗಳನ್ನು ಹೇಳಿಸುವ ಮೂಲಕ ಸಂಸಾರಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆಯ ಮಹತ್ವವನ್ನು ತಿಳಿಸುವ ಮೂಲಕ ಸದಸ್ಯರ ಪಾನಮುಕ್ತ ಜೀವನಕ್ಕೆ ಶುಭಾಷಯಗಳನ್ನು ತಿಳಿಸಿದರು ಮತ್ತು ಶಿಬಿರಾರ್ಥಿಗಳು ಕುಡಿತದ ಚಟದಿಂದ ಹೊರಬಂದು ಒಂದು ತಿಂಗಳಲ್ಲಿ ಮೊಬೖಲ್ ಖರೀದಿ, ಹೖನುಗಾರಿಗೆ ಪೂರಕವಾಗಿ ಹಸುಗಳ ಖರೀದಿ, ಬೖಕ್ ಖರೀದಿ, ಸಾಲ ಮರುಪಾವತಿ ಗಳನ್ನು ಮಾಡಿದ ವಿಷಯಗಳನ್ನು ಗಮನಿಸಿ ಮುಂಡಿನ ದಿನಗಳಲ್ಲಿ ಸ್ವ ಉದ್ಯೋಗ ತರಬೇತಿಯನ್ನ ನಡೆಸುವ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.ಚಿಕ್ಕನಾಯಕನಹಳ್ಳಿ ಯೋಜನಾಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ಪ್ರೇಮಾನಂದ್ ಸರ್ ರವರು ಮಾತನಾಡಿ ನವಜೀವನ ಸಮಿತಿ ಸದಸ್ಯರು ಕಡ್ಡಾಯವಾಗಿ ನವಜೀವನ ಸಮಿತಿಗಳ ವಾರದ ಸಭೆಗೆ ಹಾಗೂ ಮಾಸಿಕಸಭೆಗಳಿಗೆ ಕಡ್ಡಾಯವಾಗಿ ಹಾಜರಾಗುವ ಮೂಲಕ ಪಾನಮುಕ್ತರಾಗಿ ಪೂಜ್ಯ ಖಾವಂದರ ಪ್ರೀತಿಯ ಕಾರ್ಯಕ್ರಮದ ಯಶಸ್ಸಿನ ಪಾಲುದಾರರಾಗಬೇಕೆಂದು ತಿಳಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು-2 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಉಮೇಶ್ ರವರು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕರಾದ ಶ್ರೀ ಎಂ. ಎಸ್ ದರ್ಶನ್ ಕಂದೀಕೆರೆ ವಲಯ ಮೇಲ್ವಿಚಾರಕರಾದ ಶ್ರೀಮತಿ ಗಾಯತ್ರಿ, 1942ನೇ ಮದ್ಯವರ್ಜನ ಶಿಬಿರದ ಕೋಶಾಧಿಕಾರಿ ಶ್ರೀ ರಂಗನಾಥ್ ಕಂದೀಕೆರೆ ವಲಯದ ಸೇವಾಪ್ರತಿನಿಧಿಗಳು ಶೇ90ನವಜೀವನ ಸಮಿತಿ ಸದಸ್ಯರು ಮತ್ತು ಕುಟುಂಬ ಸದಸ್ಯರು ಭಾವಹಿಸಿದ್ದರು.