ಜನಜಾಗೃತಿ ವೇದಿಕೆಯ ತಾಲೂಕು ಪದಾಧಿಕಾರಿಗಳ ಸಭೆಯು ಇಂದು ಪುತ್ತೂರು ಯೋಜನಾ ಕಚೇರಿಯ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷರಾದ ಲೋಕೇಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಿತು

Janajagurthi Vedike Uncategorized

ಎಸ್ಐಟಿ ತನಿಖೆಗೆ ಸ್ವಾಗತಿಸುತ್ತೇವೆ…. ಆದರೆ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರಕ್ಕೆ ಜನಜಾಗೃತಿ ಪುತ್ತೂರು ತಾಲೂಕು ವೇದಿಕೆಯಿಂದ ತೀವ್ರ ಖಂಡನೆ*ವ್ಯಕ್ತಪಡಿಸಿದೆ ಜನಜಾಗೃತಿ ವೇದಿಕೆಯ ತಾಲೂಕು ಪದಾಧಿಕಾರಿಗಳ ಸಭೆಯು ಇಂದು ಪುತ್ತೂರು ಯೋಜನಾ ಕಚೇರಿಯ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷರಾದ ಲೋಕೇಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಸಭೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿಗಳು ಸಮಾಜದಲ್ಲಿ ನೊಂದವರ ಕಣ್ಣೆರಿಸುವಂತಹ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ. ಇಂಥವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರದ ಮೂಲಕ ಅಪಪ್ರಚಾರ ಮಾಡುತ್ತಿರುವುದು ನಮ್ಮೆಲ್ಲರಿಗೂ ನೋವನ್ನು ತಂದಿದೆ .ಇದನ್ನು ನಮ್ಮ ವೇದಿಕೆ ವತಿಯಿಂದ ತೀವ್ರವಾಗಿ ಖಂಡಿಸುತ್ತೇವೆ ಮತ್ತು ಮತ್ತು ಮುಂದಿನ ದಿನಗಳಲ್ಲಿ ಪೂಜ್ಯರಿಗೆ ಬೆಂಬಲವಾಗಿ ನಮ್ಮೆಲ್ಲ ಪದಾಧಿಕಾರಿಗಳ ತಂಡ ಇರುತ್ತದೆ ಎಂದು ತಿಳಿಸಿದರು . ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಬಗ್ಗೆ ಸರಕಾರ ಕೈಗೊಂಡಿರುವ SIT ತನಿಖೆಯನ್ನು ಸ್ವಾಗತಿಸುತ್ತೇವೆ .ಈ ಮೂಲಕ ಸತ್ಯ ಹೊರಬಂದು ವ್ಯವಸ್ಥಿತ ಷಡ್ಯಂತರ ಮಾಡುತ್ತಿರುವವರ ನಿಜ ಬಣ್ಣ ಬಯಲಾಗಲಿದೆ . ತದನಂತರ ಷಡ್ಯಂತರ ಮಾಡಿದವರ ವಿರುದ್ಧ ಕ್ಷೇತ್ರದ ಪರವಾಗಿ ದೊಡ್ಡ ಮಟ್ಟದ ಹೋರಾಟ ಮಾಡಲಿಕ್ಕಿದ್ದೇವೆ ಎಂದು ತಿಳಿಸಿದರು . ಕ್ಷೇತ್ರದ ಪರವಾಗಿ ಮಾತನಾಡಿದವರ ವೈಯಕ್ತಿಕ ತೇಜೋವಧೆಯನ್ನು ಮಾಡಿ ಅವರ ನೈತಿಕ ಸ್ಥೈರ್ಯ ಕುಗ್ಗಿಸುವಂತಹ ಷಡ್ಯಂತ್ರವು ಒಂದು ಕಡೆಯಲ್ಲಿ ನಡೆಯುತ್ತಿದೆ. ಇದಕ್ಕೆ ನಾವೆಲ್ಲ ಒಗ್ಗಟ್ಟಾಗಿ ಸತ್ಯದ ಪರ ನಿಲ್ಲಬೇಕಾಗಿದೆ ಎಂದರು . ಮಾಜಿ ಜಿಲ್ಲಾ ಅಧ್ಯಕ್ಷರಾಗಿರುವ ಸಾಜರಾಧಾಕೃಷ್ಣ ಆಳ್ವ ರವರು ಮಾತನಾಡುತ ಪೂಜ್ಯರು ಗ್ರಾಮಭಿವೃದ್ಧಿ ಯೋಜನೆ ಮೂಲಕ SBI ಬ್ಯಾಂಕುಗಳಿಂದ ಬಡ ಜನರಿಗೆ ಸ್ವಸಹಾಯ ಸಂಘದ ಪರಿಕಲ್ಪನೆಯಲ್ಲಿ ತಾನು ಬ್ಯಾಂಕುಗಳಿಗೆ ಧೈರ್ಯ ತುಂಬಿ ಬಡವರ ಅಭಿವೃದ್ಧಿಗಾಗಿ ಸಾಲ ಸೌಲಭ್ಯ ಪಡೆಯಲು ಸಹಕಾರ ನೀಡುತ್ತಿದ್ದಾರೆ. ಈ ಸಂಸ್ಥೆಯಿಂದ ಬಂದ ಲಾಭವನ್ನು ಪೂಜ್ಯರು ಒಂದು ರೂಪಾಯಿ ತನ್ನ ಸಂತಕ್ಕೆ ವಿನಿಯೋಗ ಮಾಡದೆ ಮರಳಿ ಇದನ್ನು ಸಮಾಜಕ್ಕೆ ಬೇರೆ ಬೇರೆ ಕಾರ್ಯಕ್ರಮದ ಮೂಲಕ ಕೊಡುವಂತ ಕೆಲಸವನ್ನು ಮಾಡುತ್ತಿದ್ದಾರೆ .ತಾಲೂಕಿನಲ್ಲಿ 55 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು, ಅನೇಕ ಭಜನಾ ಮಂದಿರಗಳು ದೇವಸ್ಥಾನಗಳಿಗೆ, ಗುಡಿ ಗೋಪುರಗಳಿಗೆ ಅನುದಾನ,ಶಾಲೆಗಳಿಗೆ ಬೆಂಚು, ಕೊಠಡಿಗಳ ನಿರ್ಮಾಣಕ್ಕೆ ಅನುದಾನ, ಹಿಂದು ರುದ್ರ ಭೂಮಿಗಳಿಗೆ ಅನುದಾನ, ಉನ್ನತ ವ್ಯಾಸಂಗ ಮಾಡುವಂತ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಿ ಸಮಾಜಕ್ಕೆ ಇದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಂತಹ ಸಂಸ್ಥೆಯ ಮೇಲೆ ಅಪಪ್ರಚಾರ ಮಾಡುತ್ತಿರುವುದು ಮತ್ತು ಇದನ್ನು ನೋಡಿ ನಾವು ಸುಮ್ಮನಿರುವುದು ಅತ್ಯಂತ ನೋವಿನ ವಿಚಾರವಾಗಿದೆ. ಮುಂದಿನ ದಿನದಲ್ಲಿ ಈ ರೀತಿಯ ಅಪಪ್ರಚಾರ ಮಾಡುವವರ ವಿರುದ್ಧ ಹೋರಾಟ ಮಾಡೋದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಇನ್ನೋರ್ವ ಮಾಜಿ ಅಧ್ಯಕ್ಷರು ಮಹಾಬಲ ರೈ ವಲತಡ್ಕ ಮಾತನಾಡಿ ಪೂಜ್ಯರು ಪುತ್ತೂರು ತಾಲೂಕಿನ ಅನೇಕ ದೇವಸ್ಥಾನಗಳಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ, ದೇವಿಯ ಗುಡಿಗೆ ಅನುದಾನ ಒದಗಿಸಿದ್ದಾರೆ. ಅಲ್ಲದೆ ರಾಜ್ಯದ ಬೇರೆ ಬೇರೆ ದೇವಸ್ಥಾನಗಳಿಗೆ ಅನುದಾನವನ್ನು ನೀಡಿ ಆಶಕ್ತರಿಗೆ ಶಕ್ತಿ ತುಂಬುವಂತ ಕೆಲಸ ಮಾಡುತ್ತಿದ್ದಾರೆ . ಪುತ್ತೂರು ತಾಲೂಕಿನ ಬಡವರ ಜೀವನದ ಬದಲಾವಣೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಬಹುದೊಡ್ಡದಿದೆ ನಾವು ಇದನ್ನು ಸ್ಮರಿಸಿಕೊಳ್ಳೇಬೇಕಾಗಿದೆ. ಪೂಜ್ಯರ ವಿರುದ್ಧ ಮಾಡುತ್ತಿರುವ ಅಪಪ್ರಚಾರವನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜನಜಾಗೃತಿ ವೇದಿಕೆಯ ಈ ವರ್ಷದ ಕಾರ್ಯಕ್ರಮಗಳ ಕುರಿತು ಚರ್ಚೆಯನ್ನು ನಡೆಸಲಾಯಿತು. ಮಧ್ಯವರ್ಜನ ಶಿಬಿರ, ಮಾದಕ ವಸ್ತು ವಿರೋಧಿ ದಿನ , ತಂಬಾಕು ವಿರೋಧಿ ದಿನ ಅಕ್ಟೋಬರ್ 2 ಗಾಂಧಿ ಜಯಂತಿ ಕಾರ್ಯಕ್ರಮ, ನವಜೀವನ ಸಮಿತಿ ಸಮಾವೇಶ, ಶೌರ್ಯ ಘಟಕದ ಸೇವೆ, ನವ ಜೀವನ ಸಮಿತಿ ಸದಸ್ಯರ ಅನು ಪಾಲನೆ ತಿಂಗಳ ಸಭೆಯ ಬಗ್ಗೆ ಚರ್ಚೆಯನ್ನು ನಡೆಸಲಾಯಿತು. ಸಭೆಯಲ್ಲಿ 9 ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರು ಮತ್ತು ಸದಸ್ಯರು ನವ ಜೀವನ ಸಮಿತಿ ಪೋಷಕರು ಒಳ್ಳೆಯದ ಎಲ್ಲ ಮೇಲ್ವಿಚಾರಕರು ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಶಶಿಧರ್ ಅವರು ತಾಲೂಕಿನ ಸಾಧನ ವರದಿಯನ್ನು ಮಂಡನೆ ಮಾಡಿ ಎಲ್ಲರನ್ನು ಸ್ವಾಗತಿಸಿ ಬೆಟ್ಟಂಪಾಡಿ ಮೇಲ್ವಿಚಾರಕ ಸೋಹನ್ ನಿರೂಪಣೆ ಮಾಡಿದರು