ಚಿಕ್ಕೋಡಿಯಲ್ಲಿ ಇಂದು ನಡೆದ 1959 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಪಾಲ ಮುನ್ನೊಳ್ಳಿ ಯವರು, ಯೋಜನೆಯು ಪೂಜ್ಯರ ನೇತೃತ್ವದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅದರಲ್ಲಿ ಜನಜಾಗೃತಿ ವೇದಿಕೆ ಕಾರ್ಯಕ್ರಮಗಳು ಜನರು ದುಶ್ಚಟಮುಕ್ತ ಬದುಕನ್ನು ಸಾಗಿಸಲು ಪರಿಣಾಮಕಾರಿ ಸೇವೆಯನ್ನು ನೀಡುತ್ತಿವೆ ಎಂದರು..ಕಬ್ಬುರು ರೈತ ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷರಾದ ಮಹಾನಿಂಗ ಹಂಜಿ ಯವರು ಮಾತನಾಡಿ ಪೂಜ್ಯರು ಸಮಾಜಕ್ಕೆ ನೀಡುತ್ತಿರುವ ಕಾರ್ಯಕ್ರಮಗಳು ಅಪಾರ, ಅವರ ಆಶೀರ್ವಾದದಿಂದ ಕಳೆದ ಎರಡು ವರ್ಷದ ಹಿಂದೆ ಕಬ್ಬೂರು ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಯೋಗ ಕೂಡಿ ಬಂತು, ಅಷ್ಟೇ ಅಲ್ಲ, ಕುಡಿತ ಮಾಡುತ್ತಿದ್ದ ಹಲವು ಶಿಬಿರಾರ್ಥಿಗಳು ಆ ಶಿಬಿರದಲ್ಲಿ ಭಾಗವಹಿಸಿ ಬದಲಾವಣೆಗೊಂಡು ಉತ್ತಮ ಬದುಕನ್ನ ಸಾಗಿಸುತ್ತಿರುವುದು ನನ್ನ ಸೇವೆಗೆ ಸಂತೋಷ ಕೊಟ್ಟಿದೆ ಎಂದರು.ಚಿಕ್ಕೋಡಿ ಜಿಲ್ಲೆಯ ನಿರ್ದೇಶಕರಾದ ಶ್ರೀ ವಿಠ್ಠಲ್ ಸಾಲಿಯಾನ್ ರವರು ರವರು ಮಾತನಾಡಿ ನಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಈ ವರ್ಷ 4 ಕ್ಯಾಂಪ್ ಇದ್ದು, ಈಗಾಗಲೇ ನಿಪ್ಪಾಣಿಯ ಶಿಬಿರವನ್ನು ಉತ್ತಮವಾಗಿ ಸಂಘಟನೆ ಮಾಡಿದ್ದೇವೆ.ಚಿಕ್ಕೋಡಿ ಯಲ್ಲಿ ಇಂದು ಶಿಬಿರ ಪ್ರಾರಂಭವಾಗಿದೆ, ಮುಂದಿನ ಹುಕ್ಕೇರಿ ಮತ್ತು ಸಂಕೇಶ್ವರ ಶಿಬಿರಗಳನ್ನು ಕೂಡ ಉತ್ತಮವಾಗಿ ಸಂಘಟನೆ ಮಾಡುತ್ತೇವೆ.. ಜಿಲ್ಲೆಯಲ್ಲಿ ಶಿಬಿರಗಳನ್ನು ನಡೆಸಲು ಎಲ್ಲ ಕಡೆಯಿಂದಲೂ ಬೇಡಿಕೆ ಬರುತ್ತಿದೆ, ಆದರೆ ಅನುಪಾಲನೆ ದೃಷ್ಟಿಯಿಂದ ಈ ವರ್ಷಗಳಲ್ಲಿ 4 ಶಿಬಿರಗಳನ್ನು ಉತ್ತಮ ರೀತಿಯಲ್ಲಿ ಸಂಘಟನೆ ಮಾಡಿ, ಉತ್ತಮ ಅನುಪಾಲನೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದರು.ಸಭೆಯಲ್ಲಿ ಪುರಸಭೆ ಸದಸ್ಯರಾದ ಸಿದ್ದಪ್ಪ ದಂಗೇರ, ಶ್ರೀ ನಾಗರಾಜ್ ಮೇದಾರ, ಎಲ್ಐಸಿ ಚೀಪ್ ಅಡ್ವೈಸರ್ ಮಾರುತಿ ಹಿರೇಕೋಡಿ, ಜೈ ಕರ್ನಾಟಕ ಸಂಘಟನಾ ತಾಲೂಕು ಅಧ್ಯಕ್ಷರಾದ ಶ್ರೀ ರಾಹುಲ್ ವಾಳಕೆ, ಮಾಜಿ ಸೈನಿಕರಾದ ಶ್ರೀ ರಮೇಶ್ ಬಸ್ತವಾಡೇ, ಬೀರೇಶ್ವರ ಕೋಪ ಸೊಸೈಟಿ ಕಬ್ಬೂರು ಇದರ ನಿರ್ದೇಶಕರಾದ ರಮೇಶ್ ಕಾಮಗೌಡ,ಜೈನಪುರ ಗ್ರಾಮ ಪಂಚಾಯತ ಸದಸ್ಯರಾದ ತಮ್ಮಣ್ಣ, ಜಿಲ್ಲಾ ಆಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷರಾದ ಅಸ್ಪಾಕ್, ಸಹ್ಯಾದ್ರಿ ಹೋಟೆಲ್ ಮಾಲೀಕರಾದ ಪುಂಡಲೀಕ್ ಚೌಹಾನ್, ಪುಡಾರಿ ದಿನಪತ್ರಿಕೆಯ ಜಿಲ್ಲಾ ವರದಿಗಾರರು ಶ್ರೀ ಕಾಶಿನಾಥ್ ಹುಳಕೊಡೆ, ಶ್ರೀ ಗುಲಾಬ್ ಹುಸೇನ್ ಭಾಗವಾನ್, ಬೆನ್ನೆಹಳ್ಳಿ ಪಿಕೆಪಿಎಸ್ ಅಧ್ಯಕ್ಷರಾದ ದುಂಡಪ್ಪ ಬೆಂಡವಾಡೆ, ಹಾಲಟ್ಟಿ ಒಕ್ಕೂಟದ ಅಧ್ಯಕ್ಷರಾದ ರೇಖಾ ಕುಲಗುಡಿ, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಶ್ರೀ ನಾಮದೇವ ದೇಶಪಾಂಡೆ, ಶ್ರೀಹರೀಶ್ ಪಾವಸ್ಕರ್, ತಾಲೂಕಿನ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು, ಸಿಬಿರಾಧಿಕಾರಿ ಶಿಬಿರಾಧಿಕಾರಿ, ಆರೋಗ್ಯ ಸಹಾಯಕರು, ಜನಜಾಗೃತಿ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ನವ ಜೀವನ ಸದಸ್ಯರು ಉಪಸ್ಥಿತರಿದ್ದರು..
