1947 ನೇ ಮದ್ಯವರ್ಜನ ಶಿಬಿರದ ಸಮಾರೊಪ ಸಮಾರಂಭ

Janajagurthi Vedike Uncategorized

ಪರಮಪೂಜ್ಯ ರಾಜರ್ಷಿ ಡಾ//ಡಿ. ವೀರೇಂದ್ರ ಹೆಗ್ಗೆಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ನಡೆದ 1947 ನೇ ಮದ್ಯವರ್ಜನ ಶಿಬಿರದ ಸಮಾರೊಪ ಸಮಾರಂಭ ಹರಿಹರ ನಗರದಲ್ಲಿರುವ ಬಿರ್ಲಾ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಬಾಲಯೋಗಿ ಪೂಜ್ಯ ಶ್ರೀ ಜಗದೀಶ್ವರ ಸ್ವಾಮಿಜಿಯವರು ಹಾಗೂ ಶ್ರೀ ಶಾರದೇಶಾನಂದಜೀ ಮಹಾರಾಜ್ ಮತ್ತು ಧರ್ಮ ಗುರುಗಾಳಾದ ಮೌಲಾನ ಮಕ್ಸೋದ್ ಅಹಮದ್ ಉಮ್ರಿ ವಹಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಮರಾವತಿ ಪರಮೇಶ್ವರಪ್ಪ ವಹಿಸಿದ್ದರು ಕಾರ್ಯಕ್ರಮದ ಮಖ್ಯ ಅತಿಥಿಗಳಾಗಿ ಶ್ರೀ ನಟರಾಜ್ ಬಾದಾಮಿ ಜಿಲ್ಲಾ ನಿರ್ದೇಶಕರಾದ ಶ್ರೀ ಲಕ್ಷ್ಮಣ ಎಂ . ಶ್ರೀ ಚಂದ್ರಶೇಕರ ಅಣಜಿ ಶ್ರೀವೀರೇಶ್ ಹನಗಾವಡಿ ಶ್ರೀ ನಾಗನಗೌಡ್ರ ಶ್ರೀ ಎಚ್ ಬಿ ಬಸವರಾಜ ಶ್ರೀ ಹಾಲೇಶ್ ಗೌಡ್ರು ಶ್ರೀ ಕೃಷ್ಣ ಮೂರ್ತಿ ಶ್ರೀ ಕುಮಾರ ಹನಗವಾಡಿ ಶ್ರೀ ಮಂಜುನಾಥ ಪೂಜಾರ ಶ್ರೀ ಎಚ್ ಬಿ ರುದ್ರಗೌಡ ಶ್ರೀ ವಿ ನಿಜಲಿಂಗಪ್ಪ ಶ್ರೀ ಅಮರಾವತಿ ಹನಮಗೌಡ್ರು ಮುಂತಾದ ಗಣ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶೀ ಗಳು ಆಶೀರ್ವಚನ ಮಾಡಿ ಶಿಬಿರಾರ್ಥಿಗಳು ಹಿಂದಿನ ಜೀವನ ಹಾಳು ಮಾಡಿಕೊಂಡಿದ್ದು ಇನ್ನು ಮುಂದೆ ಧರ್ಮಸ್ಥಳದ ಖಾವಂದರ ಮಾರ್ಗದರ್ಶನದಲ್ಲಿ ಪಾನ ಮುಕ್ತರಾಗಿ ಹೊಸ ಜೀವನ ನಡೆಸಿದರೆ ನಿಮ್ಮ ಕುಟುಂಬಕ್ಕೆ ದೇವರ ಅನುಗೃಹ ಸಿಗುವುದು ಎಂದು ಆಶೀರ್ವಾದಿಸಿದರು.