ಬೆಳಗಾವಿ 1951 ನೇ ಮದ್ಯ ವರ್ಜನ ಶಿಬಿರದ ಉದ್ಘಾಟನೆ.

Janajagurthi Vedike Uncategorized

ಬೆಳಗಾವಿ -1 ಯೋಜನಾ ವ್ಯಾಪ್ತಿಯ 1951 ನೇ ಮದ್ಯವರ್ಜನ ಶಿಬಿರದ ಉದ್ಘಾಟನೆಯನ್ನು ಕೆಪಿಸಿಸಿ ಸದಸ್ಯರಾದ ಶ್ರೀ ಮಲ್ಲಗೌಡ ಕಲ್ಲುಗೌಡ ಪಾಟೀಲ ರವರು ಉದ್ಘಾಟಿಸಿದರು.ಸರಕಾರ ಮಾಡದ ಸಮಾಜಮುಖಿ ಕಾರ್ಯಗಳನ್ನು ಪೂಜ್ಯರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸಿಕೊಂಡು ಹೋಗುತ್ತಿದೆ, ಪೂಜ್ಯರು ಸಮಾಜಮುಖಿ ಚಿಂತನೆಗಳು ಮುಂದಿನ ಪೀಳಿಗೆಗೆ ಮಾದರಿ ಎಂದರು.ಬೆಳಗಾವಿ -1 ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ್ ರವರು ಯೋಜನೆಯ ಮೂಲಕ ನಡೆಸಿಕೊಂಡು ಹೋಗುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾದ ಶ್ರೀ ಬಸವರಾಜ ಸೊಪ್ಪಿನ ಮಠ ಮಾತನಾಡಿ ಯೋಜನೆ ಮೂಲಕ ನಡೆಸಲಾಗುವ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಸಭೆಯಲ್ಲಿ ಜನಜಾಗೃತಿ ಸದಸ್ಯರುಗಳಾದ ಶ್ರೀ ಜಿ ಆರ್ ಸೋನೇರ, ಶ್ರೀ ರಾಜು ಬೆಲ್ಲದ, ಶ್ರೀ ರಾಜು ಮಿರ್ಜನ, ಶ್ರೀ ಪ್ರಭಾಕರ್ ಕುಂದೂರ, ಜಗಜಂಪಿ, ಕಡೂಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಾಗರ ಪಾಟೀಲ, ಅಗಸಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಮೃತ್ ಮುದ್ದಣ್ಣವರ, ಗಡೋಲಿ ಗ್ರಾಮ ಪಂಚಾಯತ್ ಸದಸ್ಯರಾದ ಗೌಡಪ್ಪ ಪಾಟೀಲ್, ಯೋಜನಾಧಿಕಾರಿಗಳಾದ ಶ್ರೀ ಭಾಸ್ಕರ ಏನ್ , ಶ್ರೀರಾಮ, ಶಿಬಿರಾಧಿಕಾರಿ ದಿವಾಕರ ಪೂಜಾರಿ, ರಂಜನಾ, ಮೇಲ್ವಿಚಾರಕ ನಾಗಪ್ಪ, ಉಮೇಶ ಉಪಸ್ಥಿತರಿದ್ದರು.