ಇದೊಂದು ಭಾವನೆಗಳ ಪ್ರಪಂಚದಲ್ಲಿ ಉತ್ಕೃಷ್ಟ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಲು ಬಯಸುವ ನೈಜ ಕಾರ್ಯಕ್ರಮ. ಮಾತಿಗಿಂತ ಮೌನ ಸುಮ್ಮನೆ ತಬ್ಬಿಕೊಂಡು ಒಂದೆಡೆಗೆ ಕುಳ್ಳರಿಸಿದೆ. ಬದುಕು ಎಂದರೆ ಭಾವಗಳ ಸಂಗಮ.ಅಂತ ಮಹಾನ ಸoಗಮವಾಗಿದ್ದು ಮಾತ್ರ ಸದಾ ಸ್ಮರಣೀಯ…ಇನ್ನೂ ಕಾರ್ಯಕ್ರಮದ ತೆರೆಯ ಹಿಂದೆ ಕಷ್ಟ ಪಟ್ಟ ಅದೆಷ್ಟೋ ಕಾಣದ ಕೈಗಳು ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಮಂಜುನಾಥನ ಕೃಪೆಗೆ ಪಾತ್ರರಾಗಿದ್ದಾರೆ.ಬೇಡಿಕೆಗಿಂತ ಬೇಧವಿಲ್ಲದೆ ಎಲ್ಲರೂ ಒಂದಾಗಿ ಮಾನವ ಕುಲವನ್ನು ಬೆಳಗುವ ಸದುದ್ದೇಶದಿಂದ ಹಗಲಿರುಳು ಇಷ್ಟಪಟ್ಟು ಪ್ರೀತಿಯಿಂದ ದುಡಿದ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಹನ್ನೆರಡು ವರ್ಷಗಳ ಅವಿನಾಭಾವ ನಂಟು ಹೊಂದಿರುವ ನನಗೆ ಈ ಎಂಟು ದಿನಗಳ ಕಾರ್ಯಕ್ರಮ ಮಾತ್ರ ಮತ್ತಷ್ಟು ಭಾವುಕರನ್ನಾಗಿ ಮಾಡಿದ್ದು ಮರೆಯಲಾಗದ ಅನುಭವ. ಇಡೀ ಗ್ರಾಮಾಭಿವೃದ್ಧಿ ಯೋಜನೆಯ ತಂಡದ ಶ್ರಮ ನೋಡುತ್ತಿದ್ದರೆ ಸಾಕ್ಷಾತ್ ದೇವನೇ ಧರೆಗಿಳಿದು ನೋಡುತ್ತಿರುವನೋ ಏನೋ ಅನಿಸುವಷ್ಟು ನಿಷ್ಕಾಮ ಕಾರ್ಯ ಇವರದೆಲ್ಲ..ಇಂತ ನಿಷ್ಕಲ್ಮಷ ಹೃದಯವಂತ ತಂಡದ ಜೊತೆಗೆ ಸ್ವಲ್ಪ ಕಾಲ ಮಂಜುನಾಥನ ಸೇವೆ ಮಾಡುವ ಅದೃಷ್ಟ ಸಿಕ್ಕಿದ್ದು ನಮ್ಮ ಪುಣ್ಯವೇ ಸರಿ . ನಿಮ್ಮೆಲ್ಲರ ಪ್ರೀತಿಯ ಕಾರ್ಯ ವೈಖರಿ ಮಾತ್ರ ಸಾಕ್ಷಾತ್ ಶ್ರೀ ಮಂಜುನಾಥನಿಗೆ ಅರ್ಪಣೆಯಾಗಿದೆ. ನಿಮಗೆಲ್ಲಾ ದೇವರು ಆಯುಷ್ಯ ಆರೋಗ್ಯ ಸರ್ವ ಸುಖ ಸಂಪತ್ತು ಕೊಟ್ಟು ಕರುಣಿಸಲಿ…ಧರ್ಮದ ದಾರಿ ನಿತ್ಯ ಬೆಳಗಲಿ . ನಿಮ್ಮೆಲ್ಲರ ಕಾಯಕ ಪ್ರಸಾದ ದಾಸೋಹ ಪರಂಪರೆ ಇತಿಹಾಸದ ಪುಟಗಳಲ್ಲಿ ದಾಖಲಾಗಿ ದೈವ ಕೃಪೆ ಪಡೆಯಲಿ.ಇಡೀ ಸವದತ್ತಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಸ್ತ ಪದಾಧಿಕಾರಿಗಳಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತಾ..
