1947ನೇ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike Uncategorized

ಸವದತ್ತಿ ತಾಲೂಕಿನಲ್ಲಿ ದಿನಾಂಕ : 08.07.2025 ರಿಂದ 15.07.2025 ರವರೆಗೆ ನಡೆಯುವ 1947ನೇ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ರಾಜಕೀಯ ಧುರೀಣರಾದ ಶ್ರೀ ವಿರೂಪಾಕ್ಷಪ್ಪ ಮಾವನಿಯವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಸುಭಾಷ್ ಹನಸಿ ವಹಿಸಿದ್ದರು. ಕಾರ್ಯಕ್ರಮದಲ್ಲಿ PSI ಶ್ರೀ ಕಲ್ಮೇಶ್ ಬನ್ನೂರು, THO ಶ್ರೀ ಶ್ರೀಪಾದ್ ಸಬನಿಸ್, ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಪಂಚನಗೌಡ ದ್ಯಾಮನಗೌಡರ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರವೀಣ ಪಟ್ಟಣಶೆಟ್ಟಿ, ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ಪಲ್ಲವಿ ಪದಕಿ, ಪುರಸಭೆಯ ಅಧ್ಯಕ್ಷರು, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ಭಾಸ್ಕರ್, ಪತ್ರಿಕಾ ವರದಿಗಾರರು, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು, ನಮ್ಮ ಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 60 ಮಂದಿ ಶಿಬಿರಾರ್ಥಿಗಳ ನೋಂದಾವಣೆ ಮಾಡಿಕೊಳ್ಳಲಾಯಿತು.