ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಜಾಗೃತಿ ಸೌಧದಲ್ಲಿ ನಡೆಯುತ್ತಿರುವ 236 ನೇ ವಿಶೇಷ ಮದ್ಯವರ್ಜನ ಶಿಬಿರದ 7 ನೇ ದಿನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಪರಮಪೂಜ್ಯರು ದಿವ್ಯ ಸಾನಿಧ್ಯವನ್ನು ವಹಿಸಿ 68 ಜನ ಶಿಬಿರಾರ್ಥಿಗಳಿಗೆ ಆಶೀರ್ವಾದದ ನುಡಿಯೊಂದಿಗೆ ಪೂಜ್ಯರ ಮಾರ್ಗದರ್ಶನದ ಅನುಗ್ರಹ ಪ್ರಾಪ್ತಿಯಾಯಿತು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಬೆಳ್ತಂಗಡಿ ತಾಲೂಕಿನ ಮಾಜಿ ಅಧ್ಯಕ್ಷರು ಶ್ರೀ ಡಿ. ಎ. ರಹಿಮಾನ್ ರವರು, ಶ್ರೀ ಗಂಗಾಧರ ರೈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕರು, ಶ್ರೀ ವೀರುಶೆಟ್ಟಿ ಧರ್ಮಸ್ಥಳ, ಜನಜಾಗೃತಿ ವೇದಿಕೆಯ ಆಡಳಿತಾತ್ಮಕ ಯೋಜನಾಧಿಕಾರಿಗಳು ಶ್ರೀ ಮಾಧವ ಗೌಡ ರವರು, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರು ಮಾನ್ಯ ಶ್ರೀ ವಿವೇಕ್ ವಿವೇಕ್ ವಿ. ಪಾಯಸ್ ರವರು ಉಪಸ್ಥಿತರಿದ್ದರು.
