ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಶೃಂಗೇರಿ ಇದರ ಸಹಯೋಗದಲ್ಲಿ 1878 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಜಯಪುರ ವಲಯದ ಮಕ್ಕಿಕೊಪ್ಪದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷರಾದ ಶ್ರೀ ಜಯಂತ್ ಭಟ್ ರವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತನಾಡಿದ ಜನಜಾಗೃತಿ ಯೋಜನಾಧಿಕಾರಿಯವರಾದ ಶ್ರೀ ನಾಗರಾಜ್ ರವರು ಶಿಬಿರದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಹೆಚ್. ಎಂ. ಸತೀಶ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ಅಂಬರೀಶ್, ಜಿಲ್ಲಾ ನಿರ್ದೇಶಕರಾದ ಶ್ರೀ ಸದಾನಂದ ಬಂಗೇರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಚಿಕ್ಕಮಗಳೂರು ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಶ್ರೀ ಅರವಿಂದ ಸೋಮಯಾಜಿ, ಗಣ್ಯರಾದ ಶ್ರೀ ಶ್ರೀನಿವಾಸ್ ಗೌಡ ಕೌಳಿ ಏಸ್ಟೇಟ್, ಶ್ರೀ ಹೆಚ್. ವಿ. ಮಂಜುನಾಥ್ ಗೌಡ ಹೆಗ್ಗದ್ದೆ, ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂಪತ್ ಕುಮಾರ್, ಉಪಾಧ್ಯಕ್ಷರಾದ ಶ್ರೀ ಜಯ ಮುರುಗೇಶ್, ಶ್ರೀ ಎಂ. ಜಿ. ಪ್ರದೀಪ್ ಗುತ್ತಿಗಾನೆ ಎಸ್ಟೇಟ್, ಶ್ರೀ ಬಾಲಕೃಷ್ಣ ಭಟ್ ಸದಸ್ಯರು, ಶ್ರೀ ಶಾಂತಕುಮಾರ್ ಜೈನ್, ಶ್ರೀ ಡಿ. ಬಿ. ರಾಜೇಂದ್ರ, ಶ್ರೀ ರವಿ ಭಟ್ ಕೃಷಿಕರು, ಶ್ರೀಮತಿ ಲಲಿತ, ಶ್ರೀ ವಿಠ್ಠಲ್ ದಾಸ ಶೆಟ್ಟಿ, ಯೋಜನಾಧಿಕಾರಿಯವರಾದ ಶ್ರೀಮೂರ್ತಿ ಶೆಟ್ಟಿ, ತಾಲೂಕಿನ ಮೇಲ್ವಿಚಾರಕರು, ತಾಲೂಕಿನ ನವಜೀವನ ಸಮಿತಿ ಸದಸ್ಯರು, ತಾಲೂಕಿನ ಶೌರ್ಯ ವಿಪತ್ತು ಘಟಕದ ಸದಸ್ಯರು, ಸೇವಾ ಪ್ರತಿನಿಧಿಗಳು, ವಲಯದ ಸೇವಾಪ್ರತಿನಿಧಿಗಳು, ಶಿಬಿರಾರ್ಥಿಗಳು ಮತ್ತು ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.