ಇಂಡಿ ತಾಲೂಕಿನಲ್ಲಿ 1827 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಪರಮಪೂಜ್ಯ ಡಾ| ಡಿ. ವಿರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಇಂಡಿ ತಾಲೂಕು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಇಂಡಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ವಿಜಯಪುರ ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನಾ ಕೆಂದ್ರ ಲಾಯಿಲ, ಉಜಿರೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶದೊಂದಿಗೆ ಶ್ರೀ ವಿಶ್ವಕರ್ಮ ವಿಕಾಸ ಸಂಸ್ಥೆ ಇಂಡಿ, ಸರ್ಕಾರಿ ಆಸ್ಪತ್ರೆ ಇಂಡಿ, ಆರಕ್ಷಕ ಠಾಣೆ ಶಹರ ಇಂಡಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇಂಡಿ ವಲಯ, ಸ್ಥಳೀಯ ಸಂಘ ಸಂಸ್ಥೆಗಳ ದಾನಿಗಳ ಸಹಕಾರದೊಂದಿಗೆ ಜರಗುವ 1827 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ರಾಜೇಶ್ ಕೆ. ಯೋಜನಾಧಿಕಾರಿಗಳು ಜನಜಾಗೃತಿ ಪ್ರಾದೇಶಿಕ ವಿಭಾಗ ಕಲಬುರ್ಗಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಬ್ರ.ಅಭಿನವ ರಾಚೋಟೇಶ್ವರ ಹಿರೇಮಠ ತಢವಲಗಾ ರವರು ವಹಿಸಿ ಆಶಿರ್ವಚನ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಧನ್ಯಕುಮಾರ ರವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಕಾಸುಗೌಡ ಬಿರಾದಾರ ಅಧ್ಯಕ್ಷರು ಶ್ರೀ ಶಾಂತೇಶ್ವರ ದೇವಸ್ಥಾನ ಟ್ರಸ್ಟ್ ಇಂಡಿ, ಶ್ರೀ ಪ್ರಕಾಶ ಬಿರಾದಾರ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ 1827 ನೇ ಮದ್ಯವರ್ಜನ ಶಿಬಿರ, ಶ್ರೀ ಭೀಮರಾಯ ಬಡಿಗೇರ್ ವಿಶ್ವಕರ್ಮ ವಿಕಾಸ ಸಂಸ್ಥೆ ಅಧ್ಯಕ್ಷರು ಇಂಡಿ, ಶ್ರೀ ಸಂತೋಷ್ ಕುಮಾರ್ ರೈ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ (ರಿ.) ವಿಜಯಪುರ, ಶ್ರೀ ಪ್ರಭಾಕರ ಬಗಲಿ, ಶ್ರೀ ಎಂ. ಸಿ. ಪಾಟೀಲ ಪ್ರಜಾವಾಣಿ ವರದಿಗಾರರು, ಶ್ರೀ ಮುಸ್ತಾಕ ನಾಯ್ಕೋಡಿ, ಶ್ರೀ ನಟರಾಜ್ ಎಲ್. ಎಂ. ಯೋಜನಾದಿಕಾರಿಗಳು ಶ್ರೀ ಕ್ಷೇ ಧ.ಗ್ರಾ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಇಂಡಿ, ಶ್ರೀ ರಾಜೇಶ್ ಯೋಜನಾಧಿಕಾರಿಗಳು ಜನಜಾಗೃತಿ ಪ್ರಾದೇಶಿಕ ವಿಭಾಗ ಕಲ್ಬುರ್ಗಿ, ಶ್ರೀ ನಾಗೇಂದ್ರ ಶಿಬಿರಾಧಿಕಾರಿ, ಶ್ರೀ ಸೌಮ್ಯ ಆರೋಗ್ಯ ಸಹಾಯಕರು, ಶ್ರೀ ಮಲ್ಲೇಶಪ್ಪ ಕೆ. ಮೇಲ್ವಿಚಾರಕರು, ಶ್ರೀ ಡಿ. ಎಸ್. ಪಾಟೀಲ ಇಂಡಿ ಯೋಗ ಶಿಕ್ಷಕರು, ತಾಲೂಕಿನ ಮೇಲ್ವಿಚಾರಕರು, ಊರಿನ ಗಣ್ಯರು, ಗುರುಹಿರಿಯರು, ನವಜೀವನ ಸಮಿತಿಯ ಸದಸ್ಯರು ಮತ್ತು ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.