ಸುಳ್ಯ ತಾಲೂಕಿನಲ್ಲಿ ನಡೆಯುತ್ತಿರುವ 1753ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಪ್ರಾದೇಶಿಕ ವಿಭಾಗದ ದಕ್ಷಿಣ ಕನ್ನಡ 2 ಜಿಲ್ಲೆಯ ಸುಳ್ಯ ತಾಲೂಕಿನ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿರುವ 1753 ನೇ ಮಧ್ಯವರ್ಜನ ಶಿಬಿರದ 8ನೇ ದಿನದಲ್ಲಿ ಕುಟುಂಬ ದಿನ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ರವರು ನೆರವೇರಿಸಿ ಕೊಟ್ಟರು ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಶ್ರೀ ಶಿವ ಪ್ರಕಾಶ್ ರವರು, ಜನಜಾಗೃತಿ ಸುಳ್ಯ ತಾಲೂಕು ಅಧ್ಯಕ್ಷರು ಲೋಕನಾಥ್ ಅಮೆಚೂರ್, ಜನಜಾಗೃತಿ ಮಾಜಿ ಅಧ್ಯಕ್ಷರು ಮಹೇಶ್ ಕುಮಾರ್ ಮೇನಾಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ 2 ಜಿಲ್ಲೆಯ ನಿರ್ದೇಶಕರು ಪ್ರವೀಣ್ ಕುಮಾರ್ ರವರು, ಸುಳ್ಯ ತಾಲೂಕು ಯೋಜನಾಧಿಕಾರಿಗಳು ಶ್ರೀಯುತ ನಾಗೇಶ್ ರವರು, ಜನಜಾಗೃತಿ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳು ಶ್ರೀಯುತ ಗಣೇಶ್ ಆಚಾರ್ಯರವರು, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ರವರು, ವಲಯದ ಮೇಲ್ವಿಚಾರಕರಾದ ವಿಶಾಲ ರವರು, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು, ಭಾಸ್ಕರ್ ಅಡ್ಕರ್ ನಿವೃತ್ತ ಸಹಾಯಕ ಪೊಲೀಸ್ ನಿರೀಕ್ಷಕರು, ಮಲ್ಲೇಶ್ ಬಿಟ್ಟಂಪಾಡಿ, ಸುಬ್ಬ ಪಾಟಾಲಿ ಸಮಿತಿ ಪದಾಧಿಕಾರಿಗಳು, ನವ ಜೀವನ ಸಮಿತಿಯ ಸದಸ್ಯರು, ವಿಪತ್ತು ಶೌರ್ಯ ತಂಡದ ಮಾಸ್ಟರ್ ಸತೀಶ್ ಮತ್ತು ಶೌರ್ಯ ತಂಡದ ಸದಸ್ಯರು ಉಪಸ್ಥಿತರಿದ್ದರು.