ಜಗಳೂರು ತಾಲೂಕಿನಲ್ಲಿ ಗಾಂಧೀ ಸ್ಮರಣೆ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾವೇಶ ಕಾರ್ಯಕ್ರಮವನ್ನು ಸನ್ಮಾನ್ಯ ಶಾಸಕರಾದ ಶ್ರೀ ಬಿ ದೇವೇಂದ್ರಪ್ಪನವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಡಿ ಷಡಕ್ಷರಪ್ಪ ಇವರು ವಹಿಸಿಕೊಂಡಿದ್ದರು, ಸಂಪನ್ಮೂಲ ವ್ಯಕ್ತಿಗಳಾಗಿ ನಾಲಂದ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಲ್ ಎಂ ಪ್ರಭಾಕರ್, ಜಗಲೂರು ಆರಕ್ಷಕ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀ ಶ್ರೀನಿವಾಸರಾವ್, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾದ ಡಾ. ಪಿ ಎಸ್ ಅರವಿಂದನ್, ಉಪಾಧ್ಯಕ್ಷರಾದ ಶ್ರೀ ಬಿ ಮಂಜುನಾಥ ಗುಂಡುಗತ್ತಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಗೌರವ ಸಲಹೆಗಾರರಾದ ಫಾದರ್ ವಿಲಿಯಂ ಮಿರಾಂದ, ಶ್ರೀ. ಕ್ಷೇ.ಧ.ಗ್ರಾ.ಯೋ ಬಿ. ಸಿ ಟ್ರಸ್ಟ್ (ರಿ) ಜಗಳೂರು ಜಿಲ್ಲಾ ನಿರ್ದೇಶಕರಾದ ಜನಾರ್ಧನ್ ಎಸ್, ಜಿಲ್ಲಾ ಜನಜಾಗೃತಿ ವೇದಿಕೆಯ ಎಲ್ಲಾ ಪದಾಧಿಕಾರಿಗಳು, ಯೋಜನಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
