ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಮಂಗಳೂರು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಿಜಿಸ್ಟರ್ ಬಿಳ್ತಂಗಡಿ, ಕೆಎಸ್ ಹೆಗಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು, ಇದರ ಸಹಯೋಗದಲ್ಲಿ ನಡೆದ 1661 ನೇ ಮಧ್ಯವರ್ಜನ ಶಿಬಿರದ ಮಾಸಿಕ ಸಭೆ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಮಂಗಳೂರು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಿಜಿಸ್ಟರ್ ಬಿಳ್ತಂಗಡಿ, ಕೆಎಸ್ ಹೆಗಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು, ಇದರ ಸಹಯೋಗದಲ್ಲಿ ನಡೆದ 1661 ನೇ ಮಧ್ಯವರ್ಜನ ಶಿಬಿರದ ಮಾಸಿಕ ಸಭೆಯು ಕೆ ಎಸ್ ಹೆಗ್ಡೆ ಆಸ್ಪತ್ರೆಯ ಚಿಂತನಾ ಸಭಾಭವನದಲ್ಲಿ ನೆರವೇರಿತು, ಎಲ್ಲರ ಸಮಕ್ಷಮದಲ್ಲಿ ದೀಪವನ್ನು ಉದ್ದೀಪನ ಗೊಳಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಈ ಸಂದರ್ಭದಲ್ಲಿ ನವಜೀವನ ಸದಸ್ಯರ ಹಿತ ಚಿಂತನೆಯನ್ನು ಮುಂದಿಟ್ಟು ನವ ಜೀವನ ಸಮಿತಿಯ ಸದಸ್ಯರ ಭವಿಷ್ಯತ್ ಬದುಕಿನ ಭದ್ರತೆಯನ್ನು ರೂಪಿಸುವಲ್ಲಿ ತಮ್ಮ ಪಾನಮುಕ್ತ ಜೀವನದ ಪಾತ್ರ ಏನು ಎಂಬುದಾಗಿ ಬಹಳ ಸವಿಸ್ತಾರವಾಗಿ ವಿವರಿಸಿ, ಕೆ ಎಸ್ ಹೆಗ್ಡೆ ಆಸ್ಪತ್ರೆ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಶ್ರೀನಿವಾಸ್ ಭಟ್ ರವರು ಉತ್ತಮ ಮಾರ್ಗದರ್ಶನ ನೀಡಿದರು, ಈ ಸಂದರ್ಭದಲ್ಲಿ ಗುರುಪ್ರಸಾದ್ ಮತ್ತು ಶರೂನ್ ರವರು ಸಂಪನ್ಮೂಲ ವ್ಯಕ್ತಿಯ ನೆಲೆಯಲ್ಲಿ ತಮ್ಮ ಜೀವನದ ಅನುಭವವನ್ನು ಹಂಚಿಕೊಳ್ಳುವುದರೊಂದಿಗೆ ನವ ಜೀವನ ಬಂಧುಗಳ ಮನಮುಟ್ಟುವಂತೆ ಒಳ್ಳೆಯ ಮಾರ್ಗದರ್ಶನ ನೀಡಿದರು, ತದನಂತರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಮಂಗಳೂರು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಯುತ ಚೆನ್ನಕೇಶವವರು ನವ ಜೀವನ ಸಮಿತಿ ಸದಸ್ಯರ ಈಗಿನ ಜೀವನ ಬಹಳ ಜಾಗೃತಿಯಿಂದ ಮುನ್ನಡೆಸಬೇಕು ಎಂದು ಒಳ್ಳೆಯ ವಿಚಾರವನ್ನು ತಿಳಿಸಿದರು, ಇದೇ ಸಂದರ್ಭದಲ್ಲಿ ಕೆ ಎಸ್ ಹೆಗಡೆ ಆಸ್ಪತ್ರೆ ದೆರಳಕಟ್ಟೆಯ ಆಪ್ತ ಸಮಾಲೋಚಕರಾದ ಶ್ರೀಮತಿ ಸುಮನ್ ರವರು ನವ ಜೀವನ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ನವ ಜೀವನ ಸಮಿತಿಯ ವಾರದ ಸಭೆಯು ಕ್ಲಪ್ತ ಸಮಯಕ್ಕೆ ನಡೆಯ ಬೇಕು, ಕೌಟುಂಬಿಕವಾಗಿ ಒಳ್ಳೆಯ ಜೀವನವನ್ನು ನಡೆಸುವಲ್ಲಿ ನೀವು ಉತ್ತಮರಾಗಬೇಕು, ಯಾವುದೇ ಸಮಸ್ಯೆ ಬಂದರೂ ನಮ್ಮ ಕೆಎಸ್ ಹೆಗ್ಡೆ ಆಸ್ಪತ್ರೆಯ ಸಹಕಾರ ನಿಮಗಿದೆ ಎಂದು ನವಜೀವನ ಬಂಧುಗಳ ಮನಃಪರಿವರ್ತನೆಗೆ ಒತ್ತುಕೊಟ್ಟು ಉತ್ತಮ ಮಾರ್ಗದರ್ಶನ ನೀಡಿದರು, ಈ ಸಂದರ್ಭದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಮನೋರೋಗ ತಜ್ಞರು ಅಸಿಸ್ಟೆಂಟ್ ಪ್ರೊಫೆಸರ್ ಡಾಕ್ಟರ್ ಶಶಿರ್ ಕುಮಾರ್ ರವರು ಹಾಗೂ ಆಪ್ತ ಸಮಾಲೋಚಕರು ಶ್ರೀಮತಿ ಆಗ್ನೇಟಾ ಐಮನ್ ರವರು ಉಪಸ್ಥಿತರಿದ್ದರು, ಆಪ್ತ ಸಮಾಲೋಚಕರು ಶ್ರೀಮತಿ ಸುಮನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ ರವರು ಸ್ವಾಗತಿಸಿ,ತಾಲೂಕಿನ ಕೃಷಿ ಅಧಿಕಾರಿಗಳಾದ ಶ್ರೀಯುತ ಮೋಹನ್ ರವರು ವಂದನಾರ್ಪಣೆಗೈದರು