ಕೊಪ್ಪಳ ಪ್ರಾದೇಶಿಕ ವಿಭಾಗದ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದ ಹಿರಿಯರೆಲ್ಲಾ ಸೇರಿಕೊಂಡು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಆರಕ್ಷಕ ಠಾಣೆಯ ಸಹಕಾರದೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ “ಮದ್ಯಪಾನ ಮುಕ್ತ ಗ್ರಾಮ” ಎಂಬ ಕನಸನ್ನು ನನಸು ಮಾಡಲು “ಮದ್ಯಪಾನ ಮುಕ್ತ ಗ್ರಾಮ” ಎಂಬ ವಿಶೇಷ ಫಲಕವನ್ನು ಅಳವಡಿಸಿ ಉದ್ಘಾಟನೆಗೊಳಿಸಿ ಗ್ರಾಮದಲ್ಲಿ ಇನ್ನು ಮುಂದೆ ಮದ್ಯ ಮಾರಾಟ ಮಾಡುವುದಾಗಲಿ ಅಥವಾ ಮಾರಾಟಕ್ಕೆ ಪ್ರೇರಣೆ ನೀಡುವುದಾಗಲಿ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಸೂಚಿಸಿರುತ್ತಾರೆ.
