260 ನೇ ವಿಶೇಷ ಮದ್ಯವರ್ಜನ ಶಿಬಿರದ (2015ನೇ ರಾಜ್ಯಮಟ್ಟದ ಶಿಬಿರ ) ಉದ್ಘಾಟನಾ ಕಾರ್ಯಕ್ರಮ

Janajagurthi Vedike Uncategorized

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 260 ನೇ ವಿಶೇಷ ಮದ್ಯವರ್ಜನ ಶಿಬಿರದ (2015ನೇ ರಾಜ್ಯಮಟ್ಟದ ಶಿಬಿರ ) ಉದ್ಘಾಟನಾ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಶ್ರೀಯುತ ವಿವೇಕ್ ವಿನ್ಸೆಂಟ್. ಪಾಯಸ್ ರವರು ಶಿಬಿರಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ದ ಜೊತೆಯಲ್ಲಿ ಶಿಬಿರದ ರೂಪುರೇಷೆಗಳ ಬಗ್ಗೆ ಮತ್ತು ಇಲ್ಲಿಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಆರ್ಯಭಟ ಪ್ರಶಸ್ತಿ ವಿಜೇತರು ವೈದ್ಯಾಧಿಕಾರಿಗಳು ಶ್ರೀಯುತ ಮೋಹನದಾಸ್ ಗೌಡ ರವರು ದೀಪ ಬೆಳಗಿಸಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಡಳಿತಾತ್ಮಕ ಯೋಜನಾಧಿಕಾರಿ ಶ್ರೀಯುತ ಮಾಧವ ಗೌಡ. ಜಾಗೃತಿ ಸೌಧ ಕಟ್ಟಡದ ಪ್ರಬಂಧಕರು ಶ್ರೀಯುತ ಕಿಶೋರ್ ಕುಮಾರ್. ಶಿಬಿರ ಅಧಿಕಾರಿಗಳು ಆರೋಗ್ಯ ಸಹಾಯಕರು ನವಜೀವನದ ಸದಸ್ಯರು ಉಪಸ್ಥಿತರಿದ್ದರು.