ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 259 ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯರು ಆಗಮಿಸಿ 60 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ದುಶ್ಚಟಕ್ಕೆ ಅಥವಾ ಮದ್ಯವ್ಯಸನಕ್ಕೆ ಬಲಿಯಾಗುವುದು ಅಥವಾ ಅಭ್ಯಾಸ ಪ್ರಾರಂಭ ಮಾಡುವುದು ಸುಲಭ.ಅದನ್ನು ಬಿಡುವುದು ಅಷ್ಟೇ ಕಷ್ಟ ಕೆಟ್ಟ ವಸ್ತುಗಳಿಗೆ ಆಕರ್ಷಣೆ ಜಾಸ್ತಿ ಆಕರ್ಷಣೆ ಬಂದಾಗ 10 ನಿಮಿಷಗಳ ಕಾಲ ವಿರಮಿಸಿದ್ದಲ್ಲಿ ನಿಮಗೆ ಒಳ್ಳೆಯ ವಿಚಾರ ಆಲೋಚನೆ ಮಾಡಲು ಸಹಾಯವಾಗುತ್ತದೆ. ಶಿಬಿರದಲ್ಲಿ ಹೇಳಿಕೊಟ್ಟ ಧ್ಯಾನ, ವ್ಯಾಯಾಮ,ಯೋಗ, ಸಂಗೀತ, ಭಜನೆ ಆಧ್ಯಾತ್ಮಿಕ ಚಿಂತನೆಗಳು ಮನಸ್ಸನ್ನು ಪರಿವರ್ತನೆ ಮಾಡುತ್ತದೆ. ಕೌನ್ಸಿಲಿಂಗ್ ಅಥವಾ ನವಜೀವನ ಸಮಿತಿ ಸಭೆಗೆ ಭಾಗವಹಿಸುವುದು ನಿಜವಾಗಿಯೂ ಬದುಕು ಕಟ್ಟುವ ಕೆಲಸವಾಗಿದೆ ಮನಃಪರಿವರ್ತನೆ ಆದಮೇಲೆ ಅದರ ನಿರಂತರತೆ ಕಾಯ್ದುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಶಿಬಿರದಿಂದ ಹೋದಮೇಲೆ ಹಳೆಯ ಸ್ನೇಹಿತರಿಂದ ಅಹಿತಕರ ಸನ್ನಿವೇಶಗಳಲ್ಲಿ ಮೋಸ ಹೋಗಬೇಡಿ , ದುಶ್ಚಟ ದೂರ ಮಾಡಿದಾಗ ಮಾತ್ರ ಸಂಸಾರದಲ್ಲಿ ಹಾಗೂ ಸಮಾಜದಲ್ಲಿ ಒಬ್ಬ ವ್ಯಕ್ತಿ ಗೌರವ ಯುತಾವಾಗಿ ಬದುಕಲು ಸಾಧ್ಯ ಎಂದು ಪೂಜ್ಯರು ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಗಳು, ಜನಜಾಗೃತಿ ವೇದಿಕೆಯ ಕಾರ್ಯಕ್ರಮದ ಮಾರ್ಗದರ್ಶಕರು ಪೂಜ್ಯರ ಸಹೋದರರಾದ ಶ್ರೀ. ಡಿ. ಸುರೇಂದ್ರ ಕುಮಾರ್.ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮಾನ್ಯ ಶ್ರೀ ವಿವೇಕ್ ವಿ ಪಾಯಸ್, ಪೂಜ್ಯರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಆಡಳಿತ ಯೋಜನಾಧಿಕಾರಿಗಳಾದ ಮಾಧವ ಗೌಡ, ಶಿಬಿರಾಧಿಕಾರಿಯವರಾದ ವಿದ್ಯಾದರ್, ರಮೇಶ್, ದಿವಾಕರ ಪೂಜಾರಿ ಮತ್ತು ಆರೋಗ್ಯ ಸಹಾಯಕರಾದ ಕುಮಾರಿ ರಂಜಿತಾ, ತುಷಾರ, ಫಿಲೋಮಿನಾ ಡಿಸೋಜಾ, ಆಪ್ತಸಮಾಲೋಚಕರಾದ ಜಿ ಆರ್ ಮಧು ಮತ್ತು ಜಾಗೃತಿ ಸೌಧದ ಪ್ರಬಂಧಕರಾದ ಕಿಶೋರ್ ಉಪಸ್ಥಿತರಿದ್ದರು.
