ಸಿಂದಗಿ ತಾಲೂಕಿನಲ್ಲಿ ಶ್ರೀಶ್ರೀ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಭವನದಲ್ಲಿ ಗಾಂಧೀ ಸ್ಮರಣೆ ಮತ್ತು ದುಶ್ಚಟಗಳ ವಿರುದ್ದ ಜಾಗೃತಿ ಕಾರ್ಯಕ್ರಮ ಕಲಬುರಗಿ ಮಪ್ರಾದೇಶಿಕ ನಿರ್ದೇಶಕರು ಶ್ರೀ ಶಿವರಾಯ ಪ್ರಭು ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಪ್ರಸ್ತುತ ದಿನದಲ್ಲಿ ದುಶ್ಚಟ ಮದ್ಯಪಾನದಿಂದ ಜನರು ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳುತ್ತಿದ್ದು ಇದರ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜೆನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರಂತರ ಕಾರ್ಯಕ್ರಮ ಆಯೋಜನೆ ಮಾಡವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತ ಕೆಲಸ ಮಾಡುತ್ತಿದೆ ಎಂದರು ಪ್ರಸ್ತುತ ವರ್ಷಾದಿಂದ ಕಲ್ಬುರ್ಗಿ ಪ್ರಾದೇಶಿಕ ವ್ಯಾಪ್ತಿ ಜನಜಾಗೃತಿ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದ್ದು ತಾಲೂಕು ಮಟ್ಟದಲ್ಲಿ ಸಮುದಾಯ ಮಧ್ಯವರ್ಜಿನ ಶಿಬಿರ ಆಯೋಜನೆ ಮಾಡಿ 8 ದಿನದಲ್ಲಿ ಮಧ್ಯವೇಶನಿಗಳ ಮನಃ ಪರಿವರ್ತನೆ ಮಾಡಿ ನವಜೀವನ ಸಮಿತಿ ಮಾಡಲಾಗುವುದು ಪ್ರಸ್ತುತ ದಿನದಲ್ಲಿ ಯುವಕ ಯುವತಿಯರು ದುಶ್ಚಟಕ್ಕೆ ಒಳಗಾಗುತ್ತಿದ್ದು ಶಾಲಾ ಕಾಲೇಜ್ನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಆಯೋಜನೆ ಮಾಡಿ ಸದೃಢ ಸಮಾಜ ನಿರ್ಮಾಣಕ್ಕೆ ಯೋಜೆನೆ ವತಿಯಿಂದ ಕಾರ್ಯಕ್ರಮ ಆಯೋಜನೆಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ದೇ ಹಿಪ್ಪರಗಿ ಪೊಲೀಸ್ ಠಾಣೆ ಪಿಎಸ್ಐ ಶ್ರೀ ರವಿ ಯಡವಣ್ಣವರ ಪ್ರಸ್ತುತ ದಿನದಲ್ಲಿ ದುಶ್ಚಟದಿಂದ ಮತ್ತು ಮಧ್ಯ ಸೇವನೆಯಿಂದ ಹೆಚ್ಚು ಅಪರಾದಗಳು ಆಗುತ್ತಿದ್ದು ಇದಕ್ಕೆ ಮೂಲಕಾರಣ ಸಮಾಜದಲ್ಲಿ ಗಂಡು ಹೆಣ್ಣು ಬೇದಭಾವ ಎಂದು ತಿಳಿಸಿದರು ಮತ್ತು ಮಹಿಳೆಯರು ಆರ್ಥಿಕ ಜ್ಞಾನ ಹೊಂದಿದರೆ ತನ್ನ ಕುಟುಂಬವನ್ನು ಅಭಿವೃದ್ಧಿ ಮಾಡಲು ಸಾಧ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುವುದರ ಜೋತೆಗೆ ಎಲ್ಲಾ ಗ್ರಾಮಗಳ ಅಭಿವೃದ್ಧಿಗಾಗಿ ಸತತ ಪರಿಶ್ರಮವನ್ನು ಮಾಡುತ್ತಿರುವುದು ತುಂಬಾ ಶ್ಲಾಘನೀಯ ಎಂದು ಹೇಳಿದರು. ದಿವ್ಯ ಸಾನಿಧ್ಯ ವಹಿಸಿದ ಜಗದ್ಗುರು ಪರಮಪೂಜ್ಯ ಶ್ರೀಶಿವಯೋಗಿ ಮಹಾಸ್ವಾಮಿಗಳು ಆಶೀರ್ವವಚನ ನೀಡುತ್ತಾ ಪೂಜ್ಯ ವೀರೇಂದ್ರ ಹೆಗ್ಗಡೆಯವರು ನಮ್ಮ ಸಮಾಜ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡುತ್ತಿದ್ದಾರೆ ಅಂದು ಗಾಂಧೀಜಿಯವರು ಯಾವ ರೀತಿಯಲ್ಲಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು ಅದೇ ರೀತಿಯಲ್ಲಿ ಇಂದು ವೀರೇಂದ್ರ ಹೆಗ್ಗಡೆಯವರು ನಮ್ಮ ಸಮಾಜದಲ್ಲಿರುವ ಎಲ್ಲಾ ದುಶ್ಚಟಗಳನ್ನು ಹೋಗಲಾಡಿಸಲು ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಇಂದಿನ ಕಾರ್ಯಕ್ರಮದಲ್ಲಿ ಯೋಜನೆಯಿಂದ ಮಂಜೂರಾದ ಕುಕ್ ಸ್ಟವ್ , ಮಾಸಾಶನ, ಹಾಗೂ ಮೈಕ್ರೋ ಬಚೆತ್ ಮತ್ತು ಪ್ರಗತಿ ರಕ್ಷಾ ಕವಚ ಮಂಜೂರಾದ ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸಯ್ಯ k ಮಲ್ಲಿಕಾರ್ಜುನಮಠ ವಹಿಸಿದ್ದರು. ಮುಖ್ಯ ಅತಿಥಿಗಳಾದ ತಾಲೂಕು ದಂಡಧಿಕಾರಿ ಶ್ರೀ C. A. ಗುಡದಿನ್ನಿ ಶ್ರೀ V G ಹೊಸಹಳ್ಳಿ ಶ್ರೀ ಮುನ್ನಾ ಮಾಲಖೆಡ ಶ್ರೀ S N ಬಸವರೆಡ್ಡಿ ಉಪಸ್ಥಿತಿ. ವಿಜಯಪುರ ಜಿಲ್ಲಾ ನಿರ್ದೇಶಕರಾದ ಗಣೇಶ್ ಎಂ ತಾಲೂಕು ಯೋಜನಾಧಿಕಾರಿ ಗಿರೀಶ್ ಎಂ ಕಲಬುರಗಿ ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿ ಕಲ್ಲನಗೌಡ ಎಸ್ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ ವರ್ಗದವರು ಸೇವಾ ಪ್ರತಿನಿಧಿಗಳು ಒಕ್ಕೂಟದ ಪದಾಧಿಕಾರಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.
