ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಜಾಗೃತಿ ಸೌಧದಲ್ಲಿ ನಡೆಯುತ್ತಿರುವ 246 ನೇ ವಿಶೇಷ ಮದ್ಯವರ್ಜನ ಶಿಬಿರದ ಆರನೇ ದಿವಸದ ಕಾರ್ಯಕ್ರಮಕ್ಕೆ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆ ಯವರು ಆಗಮಿಸಿ 73 ಮಂದಿ ಶಿಬಿರಾರ್ಥಿಗಳಿಗೆ ವಿಶೇಷವಾಗಿ ಆಶೀರ್ವಚನ ನೀಡುತ್ತಾ ಪ್ರಾರ್ಥನೆ ಮತ್ತು ಧ್ಯಾನದಿಂದ ಮನ ಪರಿವರ್ತನೆಗೆ ಸಹಕಾರಿಯಾಗಲಿದೆ. ಜೀವನದಲ್ಲಿ ಆರೋಗ್ಯವೇ ಭಾಗ್ಯ, ಎಲ್ಲರೂ ಸೇವಾ ಕಾರ್ಯಗಳನ್ನು ಸದಾ ಮಾಡುತ್ತಿರಿ, ಈ ಶಿಬಿರದಿಂದ ಮಾನಸಿಕವಾಗಿ ಪರಿವರ್ತನೆ ಆಗಿದ್ದೀರಿ ಈ ದೇಶಕ್ಕೆ ಆಸ್ತಿಯಾಗಿ ಉತ್ತಮ ಜೀವನವನ್ನು ನಡೆಸಿ ತಂದೆ ತಾಯಿಗೆ ಉತ್ತಮ ಮಗನಾಗಿ, ಹೆಂಡತಿಗೆ ಒಳ್ಳೆಯ ಜವಾಬ್ದಾರಿ ಗಂಡನಾಗಿ, ತಂದೆಯಾಗಿ ತಮ್ಮ ಮಕ್ಕಳೊಂದಿಗೆ ಜೀವನ ನಡೆಸಿ ಮಾರ್ಗದರ್ಶನ ನೀಡಿದರು. ಕುಡಿತ ಬಿಟ್ಟು ನವಜೀವನ ನಡೆಸುವ ಸಂದರ್ಭ ಕುಟುಂಬ ಮತ್ತು ಸಮಾಜವನ್ನು ಪ್ರೀತಿಯಿಂದ ನೋಡುವ ಅವಕಾಶ ನಮಗೆ ದೊರಕುತ್ತದೆ ಎಂದು ಪರಮ ಪೂಜ್ಯರು ವಿಶೇಷ ಸಂದೇಶ ನೀಡುವುದರ ಮೂಲಕ ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್, ಪೂಜ್ಯರ ಕಛೇರಿ ಪ್ರಬಂಧಕರಾದ ಶ್ರೀ ರಾಜೇಂದ್ರ ದಾಸ್, ಜನ ಜಾಗೃತಿ ವಿಭಾಗದ ಆಡಳಿತ ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ, ಶಿಬಿರಾಧಿಕಾರಿ ಶ್ರೀ ದಿನೇಶ್, ಶ್ರೀ ನಂದಕುಮಾರ್, ಶ್ರೀ ಜಯಾನಂದ, ಜಾಗೃತಿ ಸೌಧದ ಪ್ರಬಂಧಕರಾದ ಶ್ರೀ ಕಿಶೋರ್ ಕುಮಾರ್, ಶಿಬಿರದ ಆಪ್ತ ಸಲಹೆಗಾರರಾದ ಶ್ರೀ ಮಧು ಜಿ. ಆರ್ ಹಾಗೂ ಆರೋಗ್ಯ ಸಹಾಯಕರಾದ ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಪ್ರೆಸಿಲ್ಲಾ ಮತ್ತು ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
