ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಜಾಗೃತಿ ಸೌಧದಲ್ಲಿ ನಡೆಯುತ್ತಿರುವ 238 ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಪರಮಪೂಜ್ಯ ಖಾವಂದರು ಭೇಟಿ ನೀಡಿ 65 ಜನ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಮಧ್ಯಪಾನ ಚಟದಿಂದ ದೂರ ಇರಬೇಕಿದ್ದರೆ ದೃಢವಾದ ಸಂಕಲ್ಪ ಮಾಡಬೇಕಾಗುತ್ತದೆ, ಶಿಬಿರದಿಂದ ಹೋದ ಮೇಲೆ ಮುಂದಿನ ಹೊಸ ಜೀವನದ ಬಗ್ಗೆ ಉತ್ತಮ ಚಿಂತನೆ ಹಾಗೂ ಒಳ್ಳೆಯವರ ಸಹವಾಸವನ್ನು ಮಾಡೋದು, ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಡುವುದು ಬಹಳ ಮುಖ್ಯ ಎಂದು ಮಾರ್ಗದರ್ಶನ ನೀಡಿದರು. ಈ ಸಂದರ್ಭ ಜನಜಾಗೃತಿ ಆಡಳಿತಾತ್ಮಕ ಯೋಜನಾಧಿಕಾರಿ, ಶಿಬಿರಾಧಿಕಾರಿ, ಆರೋಗ್ಯ ಸಹಾಯಕರು, ಜಾಗೃತಿ ಸೌಧದ ಪ್ರಬಂಧಕರು ಮತ್ತು ಆಪ್ತ ಸಮಾಲೋಚಕರು ಉಪಸ್ಥಿತರಿದ್ದರು.
