ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಜಾಗೃತಿ ಸೌಧದಲ್ಲಿ ನಡೆಯುತ್ತಿರುವ 231 ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳಿಗೆ ಪೂಜ್ಯ ಖಾವಂದರು ಆಶೀರ್ವಾದ ಮತ್ತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್, ಶೌರ್ಯ ಕಾರ್ಯಕ್ರಮದ ಯೋಜನಾಧಿಕಾರಿಯವರದ ಶ್ರೀ ಕಿಶೋರ್ ಮತ್ತು ಶ್ರೀ ಜೈವಂತ್ ಪಟಗಾರ, ಪ್ರಬಂಧಕರಾದ ಶ್ರೀ ಕಿಶೋರ್, ಶಿಬಿರಾಧಿಕಾರಿಗಳಾದ ಶ್ರೀ ವಿದ್ಯಾದರ್ ಮತ್ತು ಶ್ರೀ ಚಿತ್ತರಂಜನ್, ಆರೋಗ್ಯ ಕಾರ್ಯಕರ್ತರು ಶ್ರೀಮತಿ ಫಿಲೋಮಿನಾ ಡಿ’ಸೋಜ ಮತ್ತು ಕುಮಾರಿ ಶ್ವೇತಾ ಮತ್ತು ಶೌರ್ಯ ಸ್ವಯಂಸೇವಕರು ಉಪಸ್ಥಿತರಿದ್ದರು.
