224 ನೇ ವಿಶೇಷ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ “ಜಾಗೃತಿಸೌಧ” ದಲ್ಲಿ 224ನೇ ವಿಶೇಷ ಮದ್ಯವರ್ಜನ ಶಿಬಿರ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿಬಿರದ ವೈದ್ಯಾಧಿಕಾರಿ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ವೈದ್ಯರಾದ ಡಾ| ಶ್ರೀ ಮೋಹನದಾಸ ಗೌಡ ಇವರು ನೆರವೇರಿಸಿದರು. ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ಕಛೇರಿ ಬೆಳ್ತಂಗಡಿ ಇವರು ಜನಜಾಗೃತಿ ವೇದಿಕೆಯ ಹುಟ್ಟು, ಬೆಳವಣಿಗೆ, ನಡೆದು ಬಂದ ಹಾದಿ ಮತ್ತು ಅಸಾಮಾನ್ಯ ಸಾಧನೆಗಳ ಪರಿಚಯದೊಂದಿಗೆ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀ ಮಾಧವ ಗೌಡ ಆಡಳಿತಾತ್ಮಕ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ಕಛೇರಿ ಬೆಳ್ತಂಗಡಿ, ಶ್ರೀ ಕಿಶೋರ್ ಪ್ರಬಂಧಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಶಿಬಿರಾಧಿಕಾರಿಗಳಾದ ಶ್ರೀ ದಿವಾಕರ್ ಪೂಜಾರಿ, ಶ್ರೀ ನಂದಕುಮಾರ್ ಪಿ ಪಿ, ಶ್ರೀ ವಿದ್ಯಾಧರ್, ಆರೋಗ್ಯ ಸಹಾಯಕಿಯರಾದ ಕುಮಾರಿ ರಂಜಿತ,
ಶ್ರೀಮತಿ ಫಿಲೋಮಿನಾ ಡಿ’ಸೋಜ, ಶ್ರೀಮತಿ ನೇತ್ರಾವತಿ, ಕುಮಾರಿ ರಂಜನ, ಉಪಸ್ಥಿತರಿದ್ದರು.