ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಜಾಗೃತಿ ಸೌಧದಲ್ಲಿ ನಡೆಯುತ್ತಿರುವ 223ನೇ ವಿಶೇಷ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ವಿವೇಕ್ ವಿ. ಪಾಯಸ್ ರವರು ಪ್ರಾಸ್ತಾವಿಕ ಮಾತಿನೊಂದಿಗೆ ಜನಜಾಗೃತಿ ವೇದಿಕೆಯ ಕಾರ್ಯಕ್ರಮದ ವಿಚಾರವಾಗಿ ಮಾಹಿತಿ ತಿಳಿಸಿದರು,ಈ ಸಂದರ್ಭದಲ್ಲಿ ಶಿಬಿರದ ವೈದ್ಯಾಧಿಕಾರಿಗಳು ಡಾಕ್ಟರ್ ಮೋಹನ್ ದಾಸ್ ಗೌಡ ರವರು, ವೇದಿಕೆಯ ಆಡಳಿತಾತ್ಮಕ ಯೋಜನಾಧಿಕಾರಿಗಳಾದ ಮಾಧವ ರವರು, ಜಾಗೃತಿ ಸೌಧದ ಪ್ರಬಂಧಕರು ಶ್ರೀಯುತ ಕಿಶೋರ್ ರವರು, ಶಿಬಿರಾಧಿಕಾರಿಗಳಾದ ಶ್ರೀಯುತ ದಿವಾಕರ್ ಪೂಜಾರಿ, ಶ್ರೀಯುತ ಚಿತ್ತರಂಜನ್, ಆರೋಗ್ಯ ಕಾರ್ಯಕರ್ತರು ಶ್ರೀಮತಿ ನೇತ್ರಾವತಿ, ಶ್ರೀಮತಿ ಪ್ರೆಸಿಲ್ಲಾ ಡಿ’ಸೋಜ , ಶ್ರೀಮತಿ ಫಿಲೋಮಿನಾ ಡಿ’ಸೋಜ, ಕುಮಾರಿ ರಂಜನಾ ಹಾಗೂ ರಾಜ್ಯದ ಕೆಲವೊಂದು ತಾಲೂಕುಗಳಿಂದ ಆಗಮಿಸಿದ 17 ಜನ ನವಜೀವನ ಸದಸ್ಯರು ಉಪಸ್ಥಿತರಿದ್ದು ಉದ್ಘಾಟನೆ ಕಾರ್ಯಕ್ರಮ ನೆರವೇರಿತು.
