223 ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 223 ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬ ದಿನ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಗೌರವಾನ್ವಿತ
ಡಾ. ಎಲ್. ಎಚ್. ಮಂಜುನಾಥ್ ರವರು ಶಿಬಿರಾರ್ಥಿಗಳ ಭವಿಷ್ಯತ್ ಬದುಕಿನ ಭದ್ರತೆಯನ್ನು ರೂಪಿಸಬೇಕಾದರೆ ದುಶ್ಚಟದಿಂದ ದೂರವಿರಬೇಕು, ಮನುಷ್ಯ ದೇವರಾಗಬೇಕಾದರೆ ಭಗವಂತನನ್ನು ಹತ್ತಿರದಿಂದ ಪೂಜಿಸುವ ಏಕಾಗ್ರತೆ ಇರಬೇಕು,ರಾತ್ರಿ ಅಂದ ಮೇಲೆ ಹಗಲು ಇದ್ದೆ ಇರುತ್ತದೆ, ದೇವರು ಇದ್ದ ಮೇಲೆ ರಾಕ್ಷಸ ಹುಟ್ಟಿಯೇ ಹುಟ್ಟುತಾನೆ, ನಿಮ್ಮೊಳಗೆ ಇರುವ ರಾಕ್ಷಸ ನಿಗ್ರಹ ಆಗಬೇಕಾದರೆ ನೀವು ದೇವರಾಗಬೇಕು, ಕೌಟುಂಬಿಕ ಜೀವನದ ಸುಖವನ್ನು ಸವಿಯುವ ಸುಯೋಗ ನಿಮಗೆ ಈ ಶಿಬಿರದಿಂದ ಪ್ರಾಪ್ತಿಯಾಗಿದೆ, ಕಣ್ಣಿಗೆ ಕಾಣುವ ದೇವರಾದ ಪರಮ ಪೂಜ್ಯರ ದಿವ್ಯ ದರುಶನ ಭಾಗ್ಯ 5 ನೇ ದಿನದಲ್ಲಿ 76 ಜನ ಶಿಬಿರಾರ್ಥಿಗಳಿಗೆ ಸಿಕ್ಕಿದೆ ಅಂದ ಮೇಲೆ ನಿಮ್ಮ ಜೀವನ ಪಾವನವಾಗುದರಲ್ಲಿ ಸಂದೇಹವೇ ಇಲ್ಲ ಎಂದು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಾಯಸ್ ರವರು ಹಾಗೂ ಜನಜಾಗೃತಿಯ ಆಡಳಿತಾತ್ಮಕ ಯೋಜನಾಧಿಕಾರಿಗಳಾದ ಶ್ರೀಯುತ ಮಾಧವ ರವರು ಉಪಸ್ಥಿತರಿದ್ದರು.