2000 ನೇ ಮದ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಡಿ.ಸಿ ಟ್ರಸ್ಟ್ (ರಿ.) ‌ಮೂಡುಬಿದಿರೆ ತಾಲೂಕು ಮತ್ತು ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಮತ್ತು ಮದ್ಯವಿಮುಕ್ತಿ ಚಿಕಿತ್ಸಾ ಕೇಂದ್ರ ಮಿಜಾರು ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಐತಿಹಾಸಿಕ ದಾಖಲೆಯ 2000 ನೇ ಮದ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆಳ್ವಾಸ್ ಹೆಲ್ತ್ ಸೆಂಟರ್ ನ ಆನಂದ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾl ವಿನಯ್ ಆಳ್ವ ಅಧ್ಯಕ್ಷರು 2000 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ವೈದ್ಯಕೀಯ ನಿರ್ದೇಶಕರು ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಚೌಟ, ವಕೀಲರಾದ ಶ್ರೀ ಬಾಹುಬಲಿ ಪ್ರಸಾದ್, ಗೌರವ ಸಲಹೆಗಾರರಾದ ಶ್ರೀ ಜೊಸ್ಸಿ ಮೇನೆಜಸ್ಸ್, ಯೋಜನಾಧಿಕಾರಿ ಶ್ರೀ ಧನಂಜಯ್ ಬಿ, ಕೋಶಾಧಿಕಾರಿ ಶ್ರೀಮತಿ ಸುಮನ್ ಪಿಂಟೋ, ಮೇಲ್ವಿಚಾರಕರಾದ ಶ್ರೀ ಕೃಷ್ಣಪ್ಪ ಎಂ, ತಾಲೂಕು ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ನವಜೀವನ ಸಮಿತಿ ಸದಸ್ಯರುಗಳು ಭಾಗವಹಿಸಿದ್ದರು.