1990ನೇ ಮದ್ಯವರ್ಜನ ಶಿಬಿರದ ಉದ್ಗಾಟನಾ ಸಮಾರಂಭ

Janajagurthi Vedike Uncategorized

ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ.ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಬರಗೂರು ವಲಯ ಇವರ ಆಶ್ರಯದಲ್ಲಿ
ಶ್ರೀ ಕ್ಷೇ.ಧ.ಗ್ರಾ.ಯೋ. ಬಿಸಿ ಟ್ರಸ್ಟ್ (ರಿ) ಶಿರಾ ತಾಲ್ಲೋಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ತುಮಕೂರು-2 ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲ್ಯಾಲ ಉಜಿರೆ, ಶ್ರೀ ಸಿದ್ದಾರೂಢ ಶಿವಾನಂದ ಮಂದಿರ ಸುಕ್ಷೇತ್ರ ಪೂಜಾರಮುದ್ದನಹಳ್ಳಿ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬರಗೂರು ವಲಯ, ನವ ಜೀವನ ಸಮಿತಿಗಳು ಶಿರಾ ತಾಲ್ಲೂಕು, ಸ್ಥಳೀಯ ಸಂಘ ಸಂಸ್ಥೆಗಳ ದಾನಿಗಳ ಸಹಕಾರದೊಂದಿಗೆ
ಶ್ರೀ ಶ್ರೀ ಚಿದಾನಂದ ಭಾರತಿ ಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ ಶ್ರೀ ಸಿದ್ಧಾರೂಢ ಶಿವಾನಂದ ಮಂದಿರ ಸುಕ್ಷೇತ್ರ ಪೂಜಾರ ಮದ್ದನಹಳ್ಳಿ ಸಭಾಂಗಣದಲ್ಲಿ 1990ನೇ ಮದ್ಯವರ್ಜನ ಶಿಬಿರದ ಉದ್ಗಾಟನಾ ಸಮಾರಂಭವು ಸಂಪನ್ನಗೊಂಡಿತು.ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯಮಾನ್ಯರು ದೀಪವನ್ನು ಪ್ರಜ್ವಲಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರುಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಉದ್ಘಾಟನೆಯನ್ನು ಮಾಡಿದ ಶ್ರೀ ಶ್ರೀ ಚಿದಾನಂದ ಭಾರತೀ ಸ್ವಾಮೀಜಿರವರು ಶ್ರೀ ಸಿದ್ದಾರೂಢ ಶಿವಾನಂದ ಮಂದಿರ ಸುಕ್ಷೇತ್ರ ಪೂಜಾರ ಮುದ್ದನಹಳ್ಳಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ ಕಾರ್ಯಕ್ರಮಗಳ ಬಗ್ಗೆ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸಮಾಜಮುಖಿ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು ಮತ್ತು ಜನಜಾಗೃತಿ ವೇದಿಕೆಯ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಧ್ಯವರ್ಜನ ಶಿಬಿರಗಳನ್ನು ಮಾಡಿ ಇಂದು ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಜೀವನವನ್ನು ನಡೆಸಲು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಧ್ಯವರ್ಜನ ಶಿಬಿರಗಳು ಸಾಕ್ಷಿಯಾಗಿದೆ ಎಂದು ಸಂತಸವನ್ನು ವ್ಯಕ್ತಪಡಿಸುವ ಮೂಲಕ ಶುಭಾಷೀರ್ವಾದವನ್ನು ನೀಡಿದರು.ಕಾರ್ಯಕ್ರಮದಲ್ಲಿ ಶ್ರೀ ಟಿ.ಆರ್.ದೇವರಾಜ್, ಶ್ರೀ ನಾಗರಾಜ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ತುಮಕೂರು-2 ಜಿಲ್ಲೆ ಶ್ರೀ ಪುಟ್ಟೀರಪ್ಪ ಸಮಾಜ ಸೇವಕರು ಶಿರಾ, ಶ್ರೀ ತಿಮ್ಮಯ್ಯನಾಯ್ಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳು ಬೆಂಗಳೂರು ಪ್ರಾದೇಶಿಕ ವಿಭಾಗ, ಶ್ರೀ ಸದಾಶಿವಗೌಡ ಯೋಜನಾಧಿಕಾರಿಗಳು ಶಿರಾ ಯೋಜನಾಕಛೇರಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ಶ್ರೀ ಎಂ. ಎಸ್ ದರ್ಶನ್, ಶಿಬಿರಾಧಿಕಾರಿಗಳಾದ ಶ್ರೀ ನಾಗೇಂದ್ರ ಹೆಚ್. ಎಸ್, ಆರೋಗ್ಯ ಸಹಾಯಕರಾದ ಕು.ರಂಜಿತಾ, ಬರಗೂರು ವಲಯದ ಮೇಲ್ವಿಚಾರಕರಾದ ಶ್ರೀ ಪವನ್, ಶಿರಾ ಯೋಜನಾಕಛೇರಿ ವ್ಯಾಪ್ತಿಯ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಬರಗೂರು ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.