ಬೆಂಗಳೂರು ಪ್ರಾದೇಶಿಕ ವಿಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಯೋಜನಾಕಛೇರಿ ವ್ಯಾಪ್ತಿಯ ತಪಸೀಹಳ್ಳಿ ಕಾರ್ಯಕ್ಷೇತ್ರದ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮ ನಡೆಯುತ್ತಿರುವ 1972ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ದಿವ್ಯ ಜ್ಞಾನಾನಂದಗಿರಿ ಮಹಾಸ್ವಾಮೀಜಿಗಳು ಪೀಠಾಧಿಪತಿಗಳು, ತೊಗಟವೀರ ಕ್ಷತ್ರಿಯ ಗುರುಪೀಠ ತಪಸೀಹಳ್ಳಿ. ವಹಿಸಿ ಮಾತನಾಡುತ್ತಾ ರಾಮಕೃಷ್ಣರಪರಮಹಂಸರ ಪ್ರವಚನದಿಂದ ಪ್ರೇರಿತರಾಗಿ ಪರಮಹಂಸರ ಶಿಶ್ಯರಾಗಿ ರಾಮಕೃಷ್ಣ ಪರಮಹಂಸರು ಮತ್ತು ಶಾರದದೇವಿಯವರ ಶಿಶ್ಯರಾದ ಸ್ವಾಮಿ ವಿವೇಕಾನಂದರು ತಮ್ಮ ಗುರುಗಳ ಹಾದಿಯಲ್ಲಿ ನಡೆದ ಕಾರಣದಿಂದಾಗಿ ವಿಶ್ವದಲ್ಲಿಯೇ ನಮ್ಮ ಧರ್ಮವನ್ನು ರಾರಾಜಿಸುವಂತೆ ಮಾಡಿದ ಮಹಾಸಂತರಾದ ರೀತಿಯಲ್ಲಿ ಶಿಬಿರಾರ್ಥಿಗಳಾಗಿ ಭಾಗವಹಿಸಿದ ನೀವೆಲ್ಲರು ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ತಾವೆಲ್ಲರು ಪಾನಮುಕ್ತ ಜೀವನವನ್ನು ನಡೆಸಬೇಕೆಂದು ತಿಳಿಸಿದರು. ರಾಮಾಯಣ ಕಾಲದಲ್ಲಿ ರಾಮನಜೊತೆಗೆ ಹನುಮಂತ ಇದ್ದು ತನ್ನ ಸೇವೆಯನ್ನು ಸಲ್ಲಿಸಿ ಶ್ರೇಷ್ಠನಾದರೊ ಅದೇರೀತಿ ತಾವೆಲ್ಲರು ಪೂಜ್ಯ ಖಾವಂದರ ಜೊತೆ ನಿಲ್ಲಬೇಕೆಂದು ತಿಳಿಸುವಮೂಲಕ ದಿವ್ಯಾಶೀರ್ವಚನವನ್ನು ನೀಡಿದರು.
