1970ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

Janajagurthi Vedike Uncategorized

ಬೆಂಗಳೂರು ಪ್ರಾದೇಶಿಕ ವಿಭಾಗದ ತುಮಕೂರು-1 ಜಿಲ್ಲೆಯ ತುಮಕೂರು ಯೋಜನಾಕಛೇರಿ ವ್ಯಾಪ್ತಿಯ ಹೊಳಕಲ್ಲು ಕಾರ್ಯಕ್ಷೇತ್ರದ ಶ್ರೀ ನಂಜುಂಡೇಶ್ವರ ಕಲ್ಯಾಣಮಂಟಪದಲ್ಲಿ ನಡೆಯುತ್ತಿರುವ 1970ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಸನ್ಮಾನ್ಯ ಶ್ರೀ ಶೀನಪ್ಪ.ಎಂ ಸರ್ ರವರು ಕುಡಿತದ ಚಟದಿಂದ ಕಳೆದು ಕೊಂಡಂತಹ ಹಣ ಮತ್ತು ನೆಮ್ಮದಿಯನ್ನು ಕಳೆದುಕೊಂಡಂತಹ ಜಾಗದಲ್ಲಿಯೇ ಉಡುಕುವಂತಹ ಕೆಲಸವಾಗಬೇಕು ಆದ್ದರಿಂದ ನೀವು ಮದ್ಯಪಾನವನ್ನು ತ್ಯಜಿಸುವ ಮೂಲಕ ಪಾನಮುಕ್ತಜೀವನವನ್ನು ನಡೆಸಬೇಕೆಂದು ತಿಳಿಸಿದರು. ಮಹಾತ್ಮ ಗಾಂಧೀಜಿಯವರು ಅಂದು ಕಂಡಂತಹ ರಾಮರಾಜ್ಯದ ಕನಸ್ಸನ್ನು ಇಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಪೂಜ್ಯ ಡಾ. ವೀರೇಂದ್ರಹೆಗ್ಗಡೆಯವರು ಮದ್ಯವರ್ಜನ ಶಿಬಿರಗಳ ಮೂಲಕ ಸಾಕಾರ ಗೊಳಿಸಿ ಇಂದು ರಾಜ್ಯಾದ್ಯಂತ 155000ಕ್ಕೂ ಮಿಗಿಲಾದ ಕುಟುಂಬಗಳು ನೆಮ್ಮದಿಯ ಜೀವನವನ್ನು ನಡೆಸಲು ಕಾರಣರಾಗಿದ್ದಾರೆಂದು ತಿಳಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಸಮಗ್ರ ಕಾರ್ಯಕ್ರಮಗಳಬಗ್ಗೆ ಶಿಬಿರಾರ್ಥಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.