ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಿಜಿಸ್ಟರ್ ಆಲೂರು ತಾಲೂಕು, ಶ್ರೀ ವೀರಶೈವ ಸಮುದಾಯ ಭವನದಲ್ಲಿ ನಡೆಯುತ್ತಿರುವ 1964 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಶ್ರೀ ನವೀನ್ ಚಂದ್ರ ಶೆಟ್ಟಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು,ಶ್ರೀ ಮಲ್ಲಿಕಾರ್ಜುನ್ ತಹಶೀಲ್ದಾರರು ಆಲೂರು ತಾಲೂಕು ಗೌರವಾನ್ವಿತರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು,ಜನಜಾಗೃತಿ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳು ಮುಖೇಶ್ ರವರು ಪ್ರಸ್ತಾವಿಕವಾಗಿ ಶಿಬಿರದ ಬಗ್ಗೆ ವಿಚಾರವನ್ನು ತಿಳಿಸಿದರು,ಮುಖ್ಯ ಅತಿಥಿಯ ನೆಲೆಯಲ್ಲಿ ಜಿಲ್ಲಾ ನಿರ್ದೇಶಕರಾದ ಸುರೇಶ್ ಮೊಯ್ಲಿ ಯವರು ಕಾರ್ಯಕ್ರಮದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು .ಈ ಸಂದರ್ಭದಲ್ಲಿ ಶ್ರೀ ಮೋಹನ್ ರೆಡ್ಡಿ ಪೊಲೀಸ್ ನಿರೀಕ್ಷಕರು ಆಲೂರು ಶ್ರೀ ಸುಬ್ರಮಣ್ಯ ಶರ್ಮ ಕಾರ್ಯನಿರ್ವಹಣಾ ಅಧಿಕಾರಿಗಳು ತಾಲೂಕು ಪಂಚಾಯತ್ ಆಲೂರು ಶ್ರೀ ರೇಣುಕ ಪ್ರಸಾದ್ ವೀರಶೈವ ಸಮಾಜ ಆಲೂರು ಶ್ರೀ ಜಯಣ್ಣ ಉಪಾಧ್ಯಕ್ಷರು ವೀರಶೈವ ಸಮಾಜ ಆಲೂರು,ಶ್ರೀ ಧರ್ಮರಾಜ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ ಜಿಲ್ಲೆ,ಶ್ರೀ ಮಲ್ಲಿಕಾರ್ಜುನ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ,ಶ್ರೀ ಮೋಹನ್ ಕುಮಾರ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ,ಶ್ರೀ ಬಾಲಕೃಷ್ಣ ಎಂ ಶೆಟ್ಟಿ ಸದಸ್ಯರ ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ,ಶ್ರೀ ಎಮ್ ಕೆ ರಾಜಶೇಖರ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ ಜಿಲ್ಲೆ, ನವಜೀವನ ಸಮಿತಿಯ ಸದಸ್ಯರು,ಮೇಲ್ವಿಚಾರಕರು, ನವಜೀವನ ಸಮಿತಿಯ ಸದಸ್ಯರು ಸೇವಾ ಪ್ರತಿನಿಧಿಗಳು,ಶೌರ್ಯ ವಿಪತ್ತು ತಂಡದ ಸದಸ್ಯರು, ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ,ಶಿಬಿರಾಧಿಕಾರಿ ಜಯಾನಂದ,ಆರೋಗ್ಯ ಕಾರ್ಯಕರ್ತರು ಶ್ರೀಮತಿ ಜಯಲಕ್ಷ್ಮಿ,ಜನಜಾಗೃತಿ ಮೇಲ್ವಿಚಾರಕರಾದ ವಸಂತ, ತಾಲೂಕಿನ ಯೋಜನಾಧಿಕಾರಿಗಳಾದ ರತ್ನಾಕರ್ ಕೊಟರಿಯವರು ಅತಿಥಿಗಳನ್ನು ಸ್ವಾಗತಿಸಿದರು, ತಾಲೂಕಿನ ಕೃಷಿ ಅಧಿಕಾರಿಯವರು ಕಾರ್ಯಕ್ರಮ ನಿರೂಪಿಸಿದರು, ವಲಯದ ಮೇಲ್ವಿಚಾರಕರಾದ ಶ್ರೀಮತಿ ಜಯಂತಿ ಯವರು ವಂದನಾರ್ಪಣೆ ಮಾಡಿದರು.
