1948ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

Janajagurthi Vedike Uncategorized

ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಹೊಸದುರ್ಗ ತಾಲೂಕಿನ ಸಮುದಾಯ ಭವನದಲ್ಲಿ ನಡೆಯುತ್ತಿರುವ 1948ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ
ಶ್ರೀ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಭಗಿರಥಪೀಠ ಜಿ. ವಿ ನಗರ ಹೊಸದುರ್ಗ ಶಿಬಿರಾರ್ಥಿಗಳಿಗೆ ಆಶೀರ್ವಚನವನ್ನು ನೀಡಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ.ಜಿ ಗೋವಿಂದಪ್ಪನವರು ಮಾನ್ಯ ಶಾಸಕರು ಹೊಸದುರ್ಗ ಇವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿ ಶುಭ ಹಾರೈಕೆ ಮಾಡಿದರು . ಈ ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಗೋವಿಂದ ಎಂ ಕಾರಜೋಳ ಸಂಸದರು ಚಿತ್ರದುರ್ಗ ಮತ್ತು ಕೆ ಎಸ್ ಶ್ರೀ ನವೀನ್ ವಿಧಾನ ಪರಿಷತ್ ಸದಸ್ಯರು ಚಿತ್ರದುರ್ಗ ಶ್ರೀ ನಟರಾಜ್ ಬಾದಾಮಿ ರಾಜ್ಯ ಸಂಘಟನಾದ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ(ರಿ) ಬೆಳ್ತಂಗಡಿ. ಶಿಬಿರಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಶ್ರೀ ವಿನಯ್ ಕುಮಾರ್ ಸುವರ್ಣ ಜಿಲ್ಲಾ ನಿರ್ದೇಶಕರು ಹಿರಿಯೂರು ಕಾರ್ಯಕ್ರಮವನ್ನು ಉದ್ದೇಶಿಸಿ ಶಿಬಿರಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು ಪ್ರದೀಪ್ ಸದ್ಗುರು ಆಯುರ್ವೇದಿಕ್ ಸೋಪು ಪ್ರಾಯೋಜಕರು ಶಿಬಿರಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಬದುಕು ಕಟ್ಟಿಕೊಳೋ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿ ಜೊತೆಯಲ್ಲಿ ಸದ್ಗುರು ಆಯುರ್ವೇದಿಕ್ ಸೋಪ್ ಶಿಬಿರಾರ್ಥಿಗಳಿಗೆ ವಿತರಣೆ ಮಾಡಿರುತ್ತಾರೆ. ಶ್ರೀಟಿ ಹೆಚ್ ಅಂಜನ್ ಕುಮಾರ್ ಅಧ್ಯಕ್ಷರು ಆಂಜನೇಯ ಸ್ವಾಮಿ ಟ್ರಸ್ಟ್ ಸೋಮಸಂದ್ರ ಶ್ರೀ ಹೆಚ್ ನೀಲ ಕುಮಾರ್ ಕಾರ್ಯದರ್ಶಿಗಳು ಶ್ರೀ ಆಂಜನೇಯ ಸ್ವಾಮಿ ಟ್ರಸ್ಟ್ ಸೋಮಸಂದ್ರ. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರು ಶ್ರೀಮತಿ ಸಿಂಧು ಶ್ರೀಮತಿ ದೀಪಿಕಾ ಸತೀಶ್ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ ಕುಲಾಲ್ ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ ಶಿಬಿರ ಅಧಿಕಾರಿ ಆರೋಗ್ಯ ಸಹಾಯಕರು ಮೇಲ್ವಿಚಾರಕ ಮಿತ್ರರು ಸೇವಾ ಪ್ರತಿನಿಧಿಗಳು ನವ ಜೀವನ ಸಮಿತಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.