1760ನೇ ಮದ್ಯವರ್ಜನ ಶಿಬಿರ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಖಾನಾಪುರದ ನಂದಗಡ ಶ್ರೀ ಬಸಪ್ಪಣ್ಣಾ ಅರಾಂಗವಿ ಕಲ್ಯಾಣ ಮಂಟಪದಲ್ಲಿ 1760ನೇ ಮದ್ಯವರ್ಜನ ಶಿಬಿರ ಸಮಾರೋಪಗೊಂಡಿತು. ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯಶ್ರೀ ಚನ್ನಬಸವ ದೇವರು ರುದ್ರಾಕ್ಷಿಮಠ ಅವರೊಳ್ಳಿ ರವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಮಹತ್ ಕಾರ್ಯಕ್ಕಾಗಿ ಪೂಜ್ಯ ಹೆಗ್ಗಡೆಯವರನ್ನು ಮತ್ತು ಯೋಜನೆಯನ್ನು ಅಭಿನಂದಿಸಿ ದುಶ್ಚಟದಲ್ಲಿ ಬಿದ್ದ ವ್ಯಕ್ತಿಯ ಕಣ್ಣೀರು ಒರೆಸುವ ಕಾರ್ಯಕ್ರಮ ಇದಾಗಿದ್ದು ಪಾಲ್ಗೊಂಡ ಶಿಬಿರಾರ್ಥಿಗಳು ಧನ್ಯರು ಎಂದರು, ಮಾಜಿ ಶಾಸಕರಾದ ಶ್ರೀ ಅರವಿಂದ ಚಂದ್ರಕಾಂತ ಪಾಟೀಲರವರು ಪುಣ್ಯದ ಕಾರ್ಯಕ್ರಮ ಇದಾಗಿದ್ದು ಶಿಬಿರಾರ್ಥಿಗಳು ನಿಜವಾಗಿಯೂ ಬದುಕಿನ ಉದ್ದಕ್ಕೂ ಶ್ರೀ ಧರ್ಮಸ್ಥಳಕ್ಕೆ ಋಣಿಯಾಗಿ ಮಧ್ಯಮುತ್ತರಾಗಬೇಕು ಎಂದರು. ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ರವರು ಯೋಜನೆಯ ಜನಜಾಗೃತಿ ಕಾರ್ಯಕ್ರಮ, ಸಮುದಾಯದ ಇತರ ಕಾರ್ಯಕ್ರಮಗಳ ಬಗ್ಗೆ ವಿಚಾರ ತಿಳಿಸಿ ಶುಭ ಹಾರೈಸಿದರು. ಜಿಲ್ಲಾ ಜನಜಾಗೃತಿಯ ಅಧ್ಯಕ್ಷರಾದ ಬಸವರಾಜ ಸೊಪ್ಪಿನ್ ಮಠ ಸಂದರ್ಭಕ್ಕೆ ಪೂರಕವಾಗಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಕಲ್ಲಪ್ಪ ಬೋಟೆಕರ ರವರು ವಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.