1739ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಹುಕ್ಕೇರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕೋಡಿ ಜಿಲ್ಲೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹುಕ್ಕೇರಿ, ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನ ಹುಕ್ಕೇರಿ, ತಾಲೂಕು ಆಡಳಿತ ಮತ್ತು ಪುರಸಭೆ ಹುಕ್ಕೇರಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಹುಕ್ಕೇರಿ, ಸಿ.ಎಸ್.ಟಿ ಶಿಕ್ಷಣ ಸಂಸ್ಥೆ, ಕನ್ನಡ ಜಾನಪದ ಪರಿಷತ್ ಹುಕ್ಕೇರಿ, ಆರಕ್ಷಕ ಠಾಣೆ ಹುಕ್ಕೇರಿ, ಸಾರ್ವಜನಿಕ ಆಸ್ಪತ್ರೆ ಹುಕ್ಕೇರಿ, ಶ್ರೀ ಲಕ್ಷ್ಮಿದೇವಿ ನವಜೀವನ ಸಮಿತಿ ಮದಿಹಳ್ಳಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹುಕ್ಕೇರಿ ವಲಯ ಇವರುಗಳ ಸಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾllಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾll ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಜಾಗೃತಿಸೌಧ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಪ್ರಾಥಮಿಕ ಶಾಲೆಯಲ್ಲಿ 1739ನೇ ಮದ್ಯವರ್ಜನ ಶಿಬಿರ ಉದ್ಘಾಟನೆಗೊಂಡಿತು. ಶ್ರೀ ಎಸ್.ಟಿ ಮುನ್ನೋಳ್ಳಿ ನಿಕಟಪೂರ್ವ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಚಿಕ್ಕೋಡಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟಕರ ಮಾತುಗಳನ್ನಾಡಿದರು. ಶ್ರೀ ಉದಯಕುಮಾರ್ ಶಾಸ್ತ್ರೀಜಿ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೌನೇಶ ಪೋತದಾರ ಅಧ್ಯಕ್ಷರು 1739ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹುಕ್ಕೇರಿ ಇವರು ವಹಿಸಿ ಅಧ್ಯಕ್ಷೀಯ ಮಾತುಗಳನ್ಶಾಡಿದರು.ಶ್ರೀ ಭಾಸ್ಕರ್ ಎನ್ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧಾರವಾಡ ಪ್ರಾದೇಶಿಕ ವಿಭಾಗ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ವಿಠ್ಠಲ ಸಾಲಿಯಾನ್ ಇವರು ಮಾತನಾಡಿ ಸಂಸ್ಥೆಯ ಹುಟ್ಟು, ಬೆಳವಣಿಗೆ, ನಡೆದು ಬಂದ ಹಾದಿ ಮತ್ತು Powder ಪರಿಚಯದೊಂದಿಗೆ ಶುಭಾಶಯವನ್ನು ಕೋರಿದರು.ವೇದಿಕೆಯಲ್ಲಿ ಶ್ರೀ ಅಣ್ಣಪ್ಪ ಕೆ.ಪಾಟೀಲ ಅಧ್ಯಕ್ಷರು ಪುರಸಭೆ, ಶ್ರೀ ಆನಂದ ಗಂಧ ಉಪಾಧ್ಯಕ್ಷರು ಪುರಸಭೆ, ಶ್ರೀ ಪ್ರೊ. ಪಿ.ಜಿ ಕೊಣ್ಣೂರ ಉಪಾಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕೋಡಿ, ಶ್ರೀ ಎಚ್.ಎಲ್ ಪೂಜಾರಿ ಕಾರ್ಯದರ್ಶಿಗಳು ಹೊಳೆಮ್ಮದೇವಿ ಟ್ರಸ್ಟ್, ಶ್ರೀ ಸುಭಾಷ್ ನಾಯಕ ಉಪಾಧ್ಯಕ್ಷರು 1739ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹುಕ್ಕೇರಿ, ಶ್ರೀಮತಿ ಪಾರ್ವತಿ ಲಟ್ಟಿ ಸದಸ್ಯರು ಪುರಸಭೆ ಹಾಗೂ ಉಪಾಧ್ಯಕ್ಷರು 1739ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹುಕ್ಕೇರಿ, ಶ್ರೀ ಬಾಲಕೃಷ್ಣ ಕೋಳೆಕರ ಯೋಗ ಶಿಕ್ಷಕರು ಪತಂಜಲಿ ಯೋಗ ಸಮಿತಿ ಹುಕ್ಕೇರಿ ಇವರಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಕುರಿತು ಶುಭವನ್ನು ಹಾರೈಸಿದರು.ಶ್ರೀ ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀಮತಿ ಪ್ರೆಸಿಲ್ಲಾ ಡಿಸೋಜಾ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ಉಮೇಶ್ ಮೇಲ್ವಿಚಾರಕರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧಾರವಾಡ ಪ್ರಾದೇಶಿಕ ವಿಭಾಗ ವಿವರಗಳು ಉಪಸ್ಥಿತರಿದ್ದರು.ಮೇಲ್ವಿಚಾರಕರಾದ ಶ್ರೀ ಸತೀಶ್ ಎಂ, ತಾಲೂಕಿನ ಎಲ್ಲಾ ಮೇಲ್ವಿಚಾರಕರುಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು,ಸ್ಥಳೀಯ ಸೇವಾಪ್ರತಿನಿಧಿಗಳ ಒಕ್ಕೂಟದ ಪದಾಧಿಕಾರಿಗಳು, ಫಲಾನುಭವಿ ಸದಸ್ಯರುಗಳು, ನವಜೀವನ ಸಮಿತಿ ಸದಸ್ಯರುಗಳು ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ಕಾರ್ಯಕ್ರಮವನ್ನು ಶ್ರೀಮತಿ ಅನಿತಾ ಬಿ. ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಹುಕ್ಕೇರಿ ತಾಲೂಕು ಇವರು ಸ್ವಾಗತಿಸಿ, ಶ್ರೀ ಜಗದೀಶ್ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಇಡಕಲ್ ವಲಯ ಇವರು ನಿರೂಪಿಸಿ,ಶ್ರೀ ಪಕ್ಕೀರಪ್ಪ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬಾಗೇವಾಡಿ ವಲಯ ಇವರು ವಂದಿಸಿದರು.