ಚಿತ್ರದುರ್ಗ ಪ್ರಾದೇಶಿಕ ವಿಭಾಗ ಚಿತ್ರದುರ್ಗ ಜಿಲ್ಲೆ ಸಿರಿಗೇರಿ ತಾಲೂಕು ಭರಮಸಾಗರ ವಲಯ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ನಡೆಯುತ್ತಿರುವ 1738ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಶ್ರೀ ಬಸವ ಪ್ರಭು ಸ್ವಾಮಿಗಳು, ಶ್ರೀ ಮುರುಘ ಮಠ ಚಿತ್ರದುರ್ಗ ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿದರು. ಸ್ವಾಮೀಜಿಯವರು ಆಶೀವರ್ಚನದಲ್ಲಿ ಯಾವ ಸರಕಾರವು & ಸಂಘ ಸಂಸ್ಥೆಗಳು ಇಂಥ ಮಹತ್ವದ ಕಾರ್ಯವನ್ನು ಮಾಡುವುದಿಲ್ಲ. ಧರ್ಮಸ್ಥಳದ ಪೂಜ್ಯರು ಸಮಾಜದಿಂದ ದೂರ ಇರುವ ವ್ಯಕ್ತಿಗಳನ್ನು ಗುರುತಿಸಿ ಇಂಥ ಮಧ್ಯವರ್ಜನ ಶಿಬಿರದಲಿ ಎಂಟು ದಿನಗಳ ಕಾಲ, ಅವರ ಮನಸ್ಸನ್ನು ಪರಿವರ್ತನೆ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರುತ್ತಾರೆ ಎಂದು ತಮ್ಮ ಆಶೀವರ್ಚನದಲ್ಲಿ ತಿಳಿಸಿದರು. ಇಂತಹ ಕಾರ್ಯಕ್ಕೆ ಧರ್ಮಸ್ಥಳ ಪೂಜ್ಯರಿಗೆ ನಮ್ಮಿಂದ ಶರಣು ಶರಣಾರ್ಥಿಗಳು ಎಂದರು ಈ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರು, ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು & ಸರ್ವ ಸದಸ್ಯರು, ತಾಲೂಕಿನ ಯೋಜನಾಧಿಕಾರಿಗಳು, ಚಿತ್ರದುರ್ಗ ಪ್ರಾದೇಶಿಕ ಜಾಗೃತಿ ಯೋಜನಾಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು & ಜಿಲ್ಲಾ ಜನ ಜಾಗೃತಿ ಅಧ್ಯಕ್ಷರು ಉಪಾಧ್ಯಕ್ಷರು,ಸದಸ್ಯರು & ಶಿಬಿರಾರ್ಥಿಗಳ ಕುಟುಂಬದವರು, ಮೇಲ್ವಿಚಾರಕರು, ಊರಿನ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
