1737ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನದ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಶಿಕಾರಿಪುರ ತಾಲ್ಲೂಕು ಶಿರಸಿ ಜಿಲ್ಲೆ, ಶಿಕಾರಿಪುರ ಯೋಜನಾ ಕಛೇರಿ ವ್ಯಾಪ್ತಿಯ ಶಿರಾಳಕೊಪ್ಪ ವಲಯದಲ್ಲಿ 1737ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಹಾಗೂ ಗಾಂಧಿ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಸಮಾರೋಪ ಸಮಾರಂಭ ಹಾಗೂ ಗಾಂಧಿ ಸ್ಮರಣೆ ಕಾರ್ಯಕ್ರಮವನ್ನು ಮ.ನಿ.ಪ್ರ ಶಿವಮೂರ್ತಿ ಮುರುಘ ರಾಜೇಂದ್ರ ಮಹಾಸ್ವಾಮಿಗಳು ವಿರಕ್ತ ಮಠ ಹೀರೇಮಾಗಡಿ ಇವರ ದಿವ್ಯ ಸಾನಿಧ್ಯದಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕುಟುಂಬ ದಿನ ಕಾರ್ಯಕ್ರಮದಲ್ಲಿ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಮಾನ್ಯ ಜನಜಾಗೃತಿ ಯೋಜನಾಧಿಕಾರಿಯವರಾದ ಶ್ರೀ ಗಣೇಶ್ ಆಚಾರ್ಯ ರವರು ನೆರವೇರಿಸಿದರು.ವೇದಿಕೆಯಲ್ಲಿ ಇರುವ ಎಲ್ಲಾ ಗಣ್ಯರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಶಿಕಾರಿಪುರ ತಾಲೂಕಿನ ಶಾಸಕರು ಸನ್ಮಾನ್ಯ ಶ್ರೀ ಬಿ ವೈ ವಿಜಯೇಂದ್ರರವರು ಗಾಂಧೀಜಿ ಕಂಡ ಕನಸನ್ನು ನನಸು ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಶ್ರಮವನ್ನು ಕೊಂಡಾಡಿದರು ಹಾಗೂ ಪೂಜ್ಯ ಖಾವಂದರು ನಮಗೆಲ್ಲರಿಗೂ ಆದರ್ಶ ವ್ಯಕ್ತಿ ಎಂದು ಹೇಳಿದರು. ವೇದಿಕೆಯಲ್ಲಿ ಶ್ರೀ ಬಾಬು ನಾಯ್ಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ (ರಿ) ಶಿರಸಿ, ಶ್ರೀ ಹೇಮಪ್ಪ ಜಂಬಾಲಿ, ಅಧ್ಯಕ್ಷರು ಶ್ರೀ ಚನ್ನಬಸವೇಶ್ವರ ದೇವಸ್ಥಾನ ಬಸವನಂದಿಹಳ್ಳಿ, ಶ್ರೀ ಎಂ ಆರ್ ಗಿರೀಶ್, ಗೌರವ ಅಧ್ಯಕ್ಷರು ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಶಿರಾಳಕೊಪ್ಪ, ಶ್ರೀ ಕಾಳಿಂಗ ರಾಜ್ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ, ಶ್ರೀ ಪ್ರೇಮ್ ಕುಮಾರ್ ಮಾಜಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ, ಶ್ರೀ ಕೋಮಲ್ ಆಚಾರ್ ಪೋಲೀಸ್ ಉಪನಿರೀಕ್ಷಕರು ಶಿಕಾರಿಪುರ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹೆಚ್. ಎಸ್. ಯೋಗಿರಾಜ್ (ಅಧ್ಯಕ್ಷರು, 1737ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ,ಶಿರಾಳಕೊಪ್ಪ) ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ನಂಜುಂಡಿ ಆರ್ ಶಿರಾಳಕೊಪ್ಪ ವಲಯ ಮೇಲ್ವಿಚಾರಕರಾದ ಶ್ರೀಮತಿ ಅಮಿತಾ, ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಕೆ, ಶಿಬಿರಾದಿಕಾರಿ ಶ್ರೀ ವಿದ್ಯಾದರ, ಹಾಗೂ ನವಜೀವನ ಸಮಿತಿ ಸದಸ್ಯರು ಸೇವಕರು, ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು, ಪ್ರಗತಿಬಂಧು/ಸ್ವಸಹಾಯ ಸಂಘದ ಸದಸ್ಯರು, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಶಿಕಾರಿಪುರ ತಾಲ್ಲೂಕಿನ ಎಲ್ಲಾ ಮೇಲ್ವಿಚಾರಕರು, ತಾಲೂಕಿನ ಸೇವಾಪ್ರತಿನಿಧಿಯವರು ಹಾಗೂ ಊರಿನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.