ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ), ಜೇವರ್ಗಿ ತಾಲ್ಲೂಕು ಯಾದಗಿರಿ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿ ಬೆಳ್ತಂಗಡಿ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಜೇವರ್ಗಿ ನಗರಸಭೆ ಜೇವರ್ಗಿ, ಸಾವಿರ ಇಪ್ಪತ್ತು ನಿರ್ವಹಣಾ ಘಟಕ ವೈದ್ಯರು ಮತ್ತು ಮೆಡಿಕಲ್ ಅಸೋಸಿಯಸ್ ಜೇವರ್ಗಿ ಆರಕ್ಷಕ ಠಾಣೆ, ಸ್ಥಳೀಯ ಸಂಘ ಸಂಸ್ಥೆಗಳು, ಸ್ಥಳೀಯ ಎಲ್ಲಾ ಇಲಾಖೆಗಳು ಸಮಸ್ತ ದಾನಿಗಳು ಹಾಗೂ ಸಾರ್ವಜನಿಕ ಸಹಕಾರ ಮತ್ತು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳು ಜೇವರ್ಗಿ ಸಹಕಾರದೊಂದಿಗೆ ಡಾ|ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾಥೋಶ್ರೀ ಡಾ| ಹೇಮಾವತಿ ವಿ ಹೆಗ್ಗಡೆ ಅವರ ಕೃಪಾ ಆಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲ್ಯಾಲ ಬೆಳ್ತಂಗಡಿ ಇದರ ವಿಸ್ತಾರಣ ಕಾರ್ಯಕ್ರಮದ ಅಂಗವಾಗಿ, ಇಂದು ಜೇವರ್ಗಿ ಯೋಜನಾ ವ್ಯಾಪ್ತಿಯ ಜೇವರ್ಗಿ ಕಾರ್ಯಕ್ಷೇತ್ರದಲ್ಲಿ 1734ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಲಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿಯವರಾದ ರಾಜೇಶ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ (ಮಾಜಿ ಶಾಸಕರು, ಜೇವರ್ಗಿ)ಅವರು ನೆರವೇರಿಸಿದರು.
